ಜಗತ್ತಿಗೆ ದುಸ್ವಪ್ನವಾಗಿ ಕಾಡುತ್ತಿರುವ ಸಾರ್ಸ್‌-ಕೋವ್‌-2 ಕೊರೋನಾ ವೈರಸ್‌ | ಮುಂದೆ ಸಾಮಾನ್ಯ ನೆಗಡಿಕಾರಕ ವೈರಸ್‌ ಆಗಲಿದೆ ಕೊರೋನಾ!| ಈಗಾಗಲೇ ಇಂತಹ 4 ವೈರಸ್‌ಗಳು ನಮ್ಮನ್ನು ಬಾಧಿಸುತ್ತಿವೆ

 ನವದೆಹಲಿ(ಜ.14): ಜಗತ್ತಿಗೆ ದುಸ್ವಪ್ನವಾಗಿ ಕಾಡುತ್ತಿರುವ ಸಾರ್ಸ್‌-ಕೋವ್‌-2 ಕೊರೋನಾ ವೈರಸ್‌ ಎಲ್ಲರಿಗೂ ಹರಡಿದರೆ ಮುಂದಿನ ವರ್ಷಗಳಲ್ಲಿ ಇದು ಸಾಮಾನ್ಯ ನೆಗಡಿಕಾರಕ ವೈರಸ್‌ ಆಗಿ ರೂಪಾಂತರಗೊಳ್ಳಲಿದೆ ಎಂದು ಅಮೆರಿಕದ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ಮನುಷ್ಯನ ದೇಹ ನಾಲ್ಕು ರೀತಿಯ ಕೊರೋನಾ ವೈರಸ್‌ಗಳನ್ನು ಎದುರಿಸುವ ರೋಗನಿರೋಧಕ ಶಕ್ತಿ ಹೊಂದಿದೆ. ಈ ವೈರಸ್‌ಗಳು ಮನುಷ್ಯ ಚಿಕ್ಕವನಿದ್ದಾಗ ಒಮ್ಮೆ ತಗಲಿದಾಗ ಇವುಗಳ ವಿರುದ್ಧ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಮುಂದೆ ಈ ವೈರಸ್‌ ದೇಹಕ್ಕೆ ತಗಲಿದಾಗಲೆಲ್ಲ ಕೇವಲ ನೆಗಡಿಯಷ್ಟೇ ಆಗುತ್ತದೆ. ಹೊಸ ಕೊರೋನಾವೈರಸ್‌ ಕೂಡ ಎಲ್ಲರಿಗೂ ಹರಡಿದರೆ ಮುಂದಿನ ವರ್ಷಗಳಲ್ಲಿ ಅದು 3ರಿಂದ 5 ವರ್ಷದ ಮಕ್ಕಳಲ್ಲಿ ನೆಗಡಿ ಉಂಟುಮಾಡುವ ಮತ್ತು ದೊಡ್ಡವರನ್ನು ಇನ್ನೂ ಕಡಿಮೆ ಪ್ರಮಾಣದಲ್ಲಿ ಬಾಧಿಸುವ ಅತ್ಯಂತ ದುರ್ಬಲ ವೈರಸ್‌ ಆಗಿ ಮಾರ್ಪಡಲಿದೆ ಎಂದು ಎಮೋರಿ ಯುನಿವರ್ಸಿಟಿಯಲ್ಲಿ ಈ ಕುರಿತು ಅಧ್ಯಯನ ನಡೆಸಿದ ತಜ್ಞರು ಸಂಶೋಧನಾ ಪ್ರಬಂಧದಲ್ಲಿ ತಿಳಿಸಿದ್ದಾರೆ.

ಆದರೆ, ಇದಕ್ಕೆ ಎಷ್ಟುವರ್ಷ ತಗಲುತ್ತದೆ ಎಂಬುದು ಎಷ್ಟುಬೇಗ ಈ ವೈರಸ್‌ ಜಗತ್ತಿನ ಅತಿಹೆಚ್ಚು ಜನರಿಗೆ ತಗಲುತ್ತದೆ ಮತ್ತು ಎಷ್ಟುಬೇಗ ಮನುಷ್ಯನ ದೇಹದಲ್ಲಿ ಇದರ ವಿರುದ್ಧ (ಲಸಿಕೆಯ ಮೂಲಕವಾದರೂ) ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂಬುದನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ.