ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕಿಯ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಇದೀಗ ಶಿಕ್ಷಣ ಇಲಾಖೆಗೆ ಭಾರೀ ಮುಜುಗರ ಉಂಟಾಗಿದ್ದು, ಇಬ್ಬರನ್ನೂ ಅಮಾನತು ಮಾಡಲಾಗಿದೆ.
ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಡಬೇಕಾದ ಶಿಕ್ಷಕರು ಇಲ್ಲಿ ತಮ್ಮದೇ ವೈಯಕ್ತಿಕ ಕಾಮತೃಷೆ ತೀರಿಸಿಕೊಳ್ಳಲು ಶಾಲೆಯನ್ನೇ ಅಡ್ಡಾ ಮಾಡಿಕೊಂಡಿದ್ದಾರೆ. ಶಾಲೆಗೆ ರಜೆ ಇದ್ದರೂ ಹೆಡ್‌ಮೇಷ್ಟ್ರು ಮತ್ತು ಶಿಕ್ಷಕಿ ಇಬ್ಬರೂ ಶಾಲೆಗೆ ಬಂದು ರಾಸಲೀಲೆ ಶುರು ಮಾಡುತ್ತಿದ್ದರು. ಆದರೆ, ಗ್ರಾಮಸ್ಥರು ಇವರಿಗೆ ತಿಳಿಯದಂತೆ ಅಳವಡಿಕೆ ಮಾಡಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇವರ ರಂಗಿನಾಟದ ದೃಶ್ಯಾವಳಿಗಳು ಸೆರೆಯಾಗಿದ್ದು, ಈ ವಿಡಿಯೋ ವೈರಲ್ ಆಗಿವೆ.
ಈ ಘಟನೆ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯ ಗಂಗರಾರ್ ಬ್ಲಾಕ್‌ನ ಅಜೋಲಿಯಾ ಕಾ ಖೇಡಾ ಪ್ರಾಂತ್ಯದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಮುಖ್ಯೋಪಾಧ್ಯಾಯ ಅರವಿಂದ್ ವ್ಯಾಸ್ ಮತ್ತು ಶಿಕ್ಷಕಿ ಅಸಭ್ಯ ವರ್ತನೆ ತೋರಿದ್ದಾರೆ. ಇವರಿಬ್ಬರ ಅಸಭ್ಯ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಇದರಿಂದ ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಶಾಲಾ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕಿಯ ಅನೈತಿಕ ವರ್ತನೆಗಳು ದಾಖಲಾಗಿವೆ. ಕೆಲವೊಮ್ಮೆ ಇಬ್ಬರೂ ಪರಸ್ಪರ ಮುತ್ತು ಕೊಡುತ್ತಿದ್ದರು, ಮತ್ತೆ ಕೆಲವೊಮ್ಮೆ ಅಪ್ಪಿಕೊಳ್ಳುತ್ತಿದ್ದರು. ಈ ವಿಡಿಯೋ ಬಹಿರಂಗಗೊಂಡ ನಂತರ, ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ವೈರಲ್ ಆದ ನಂತರ, ಜಿಲ್ಲಾ ಶಿಕ್ಷಣಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿದ್ದಾರೆ.
ಇದನ್ನೂ ಓದಿ: ಯಾರವ್ವ ಇವಳು ಚೆಲುವೆ, ಎಲ್ಲರ ಕಣ್ಣು ಇವಳ ಮೇಲೆ: ಮಹಾಕುಂಭದಲ್ಲಿ ಕಂಡ ಯುವತಿ ಅಂದಕ್ಕೆ ಸೋತ ಜನರು
ಶಾಲಾ ಕಚೇರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ: ಇತರ ಶಿಕ್ಷಕರು ಗ್ರಾಮಸ್ಥರಿಗೆ ಕಚೇರಿಯಲ್ಲಿ ನಡೆಯುತ್ತಿರುವ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಗ್ರಾಮಸ್ಥರು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕಿಗೆ ತಿಳಿಯದಂತೆ ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರು. ಕ್ಯಾಮೆರಾದಲ್ಲಿ ದಾಖಲಾದ ವಿಡಿಯೋ ಇಡೀ ಪ್ರಕರಣವನ್ನು ಬಯಲಿಗೆಳೆದಿದೆ.
ಶಾಲಾ ರಜೆ ಇದ್ದರೂ ಇಬ್ಬರೂ ಶಾಲೆಗೆ ಹೋಗಿದ್ದರು: ರಾಜಸ್ಥಾನದಲ್ಲಿ ಚಳಿಗಾಲದ ರಜೆ ಘೋಷಿಸಿದ್ದರೂ, ಶಿಕ್ಷಕರನ್ನು ಇಲಾಖಾ ಕೆಲಸಗಳಿಗಾಗಿ ಕರೆಯಲಾಗುತ್ತಿತ್ತು. ಈ ಸಮಯದಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕಿ ಆಗಾಗ್ಗೆ ಕಚೇರಿಯಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿದ್ದರು. ತಾವಿರುವ ಕಚೇರಿಯ ಬಾಗಿಲು ಮುಚ್ಚಿರದಿದ್ದರೂ, ತಮ್ಮಷ್ಟಕ್ಕೆ ಲಜ್ಜೆಗೆಟ್ಟವರಂತೆ ಎಲ್ಲೆಂದರಲ್ಲಿ ಹೀಗೆ ತಬ್ಬಿಕೊಳ್ಳುವುದು ಹಾಗೂ ಮುತ್ತು ಕೊಡುವುದನ್ನು ನಿರಾತಂಕವಾಗಿ ಮಾಡುತ್ತಿದ್ದರು. ಅವರ ವರ್ತನೆಗಳು ಇತರ ಸಿಬ್ಬಂದಿಗೆ ಭಾರೀ ಬೇಸರ ಮೂಡಿಸಿತ್ತು.
ಇದನ್ನೂ ಓದಿ: ಕ್ರಿಕೆಟರ್ ರಿಂಕು- ಸಂಸದೆ ಪ್ರಿಯಾ ನಿಶ್ಚಿತಾರ್ಥವಾಗಿಲ್ಲ, ಸ್ಪಷ್ಟನೆ ನೀಡಿದ ತಂದೆ!
ಶಿಕ್ಷಣ ಮತ್ತು ಸಮಾಜಕ್ಕೆ ಕಳಂಕ ತಂದ ಘಟನೆ: ಇವರಿಬ್ಬರವಿಡಿಯೋ ವೈರಲ್ ಆದ ನಂತರ, ಜಿಲ್ಲಾ ಶಿಕ್ಷಣಾಧಿಕಾರಿಗಳು ಇಬ್ಬರು ಶಿಕ್ಷಕರನ್ನು ರಾಶ್ಮಿ ಮತ್ತು ಬೇಗುಂಗೆ ಅವರನ್ನು ಬೇರೆಡೆ ವರ್ಗಾಯಿಸಿದ್ದಾರೆ. ಅಮಾನತಿನ ಅವಧಿಯಲ್ಲಿ ಅವರ ಕೇಂದ್ರ ಕಚೇರಿ ಅಲ್ಲೇ ಇರುತ್ತದೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈ ಘಟನೆ ಶಿಕ್ಷಣ ಇಲಾಖೆಗೆ ಮಾತ್ರವಲ್ಲ, ಸಮಾಜಕ್ಕೂ ಕಳಂಕ ತಂದಿದೆ. ಶಿಕ್ಷಣದ ದೇವಾಲಯದಲ್ಲಿ ಇಂತಹ ಘಟನೆಗಳು ನೈತಿಕತೆಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುವುದಲ್ಲದೆ, ವಿದ್ಯಾರ್ಥಿಗಳು ಮತ್ತು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುತ್ತವೆ.
