Asianet Suvarna News Asianet Suvarna News

Green Yodha Launched: ಭಾರತವನ್ನು ಇಂಧನ ಹೊರಸೂಸುವಿಕೆ ಮುಕ್ತಗೊಳಿಸಲು “ಗ್ರೀನ್ ಯೋಧ”

* ಭಾರತವನ್ನು ಇಂಧನ ಹೊರಸೂಸುವಿಕೆ ಮುಕ್ತಗೊಳಿಸಲು “ಗ್ರೀನ್ ಯೋಧ” 
* ಕಾರ್ಯಕ್ರಮಕ್ಕೆ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಚಾಲನೆ
* ಪ್ರಧಾನಿ ಘೋಷಣೆಗೆ ಕೈ ಜೋಡಿಸಿದ ಷ್ನೇಂಡರ್ ಎಲೆಕ್ಟ್ರಿಕ್, ಜಿ.ಕೆ  ಸೀಮೆಂಟ್ ಹಾಗೂ ಯುಎಸ್‌ಟಿ

Schneider Electric and Automation launches Green Yodha initiative in India rbj
Author
Bengaluru, First Published Nov 25, 2021, 5:26 PM IST

ಬೆಂಗಳೂರು, (ನ.25): ಭಾರತದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯ ಬೆನ್ನಲ್ಲೇ “ಷ್ನಿಂಡರ್ ಎಲೆಕ್ಟ್ರಿಕ್” (Schneider Electric) ಸಂಸ್ಥೆಯು “ಗ್ರೀನ್ ಯೋಧ” (Green Yodha) ಎಂಬ ನೂತನ ಕಾರ್ಯಕ್ರಮವನ್ನು ಘೋಷಿಸಿದೆ.  

ಗ್ರೀನ್‌ಯೋಧ ಕಾರ್ಯಕ್ರಮದ ಮೂಲಕ ತಮ್ಮೆಲ್ಲಾ ಉದ್ಯಮದಲ್ಲಿ ಇಂಧನ (Fuel) ಬಳಕೆ ಪರ್ಯಾಯವಾಗಿ ವಿದ್ಯುತ್‌ಚ್ಛಕ್ತಿ (Electric) ಬಳಕೆಸುವ ಪ್ರತಿಜ್ಞೆಯನ್ನು ಷ್ನಿಂಡರ್ ಎಲೆಕ್ಟ್ರಿಕ್ ಸಂಸ್ಥೆ ಕೈಗೊಂಡಿದೆ.  ಈ ಕಾರ್ಯಕ್ರಮಕ್ಕೆ ಜಿ.ಕೆ. ಸಿಮೆಂಟ್ ಹಾಗೂ ಯುಎಸ್‌ಟಿ ಸಂಸ್ಥೆಯು ಸಹ ಕೈ ಜೋಡಿಸಿದೆ.

Good News: ಶೀಘ್ರವೇ ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯ

ಈ ಕುರಿತು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ಹೆಚ್ಚುತ್ತಿರುವ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಪ್ರತಿಯೊಬ್ಬರು ಪರಿಸರ ಸ್ನೇಹಿ ಉಪಕ್ರಮಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ದೇಶದಲ್ಲಿ ಕಲ್ಲಿದ್ದಲು ಹಾಗೂ ಇಂಧನ ಬಳಕೆ ಹೆಚ್ಚಾಗಿದ್ದಯ, ಇದರಿಂದ ಇಂಧನ ಹೊರಸೂಸುವಿಕೆಯಲ್ಲಿ ಭಾರತ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿರುವುದು ಆಘಾತಕಾರಿ. 2030ರ ಒಳಗಾಗಿ ಭಾರತದಲ್ಲಿ 1 ಬಿಲಿಯನ್ ಟನ್‌ನಷ್ಟು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕು. ಹೀಗಾಗಿ ಉಕ್ಕು, ಸಿಮೆಂಟ್, ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಗಳು ಇಂಧನ ಬಳಕೆ ಮಾಡುವ ಬದಲು ಎಲೆಕ್ಟ್ರಿಕ್ ಬಳಕೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ಷ್ನೇಡರ್ ಎಲೆಕ್ಟ್ರಿಕ್ ಇಂಡಿಯಾದ ಸಿಇಒ ಅನಿಲ್‌ಚೌಧರಿ,  ಪ್ರಧಾನಿಯವರ ಘೋಷಣೆಯ ಭಾಗವಾಗಿ ನಮ್ಮ ಷ್ನಿಂಡರ್ ಎಲೆಕ್ಟ್ರಿಕ್ ಗ್ರೀನ್‌ಯೋಧ ಎಂಬ ಕಾರ್ಯಕ್ರವನ್ನು ಘೋಷಿಸಿದೆ. ಈ ಮೂಲಕ ಇಂಧನವನ್ನು ಹೆಚ್ಚು ಬಳಸುವ ಸಂಸ್ಥೆಗಳನ್ನು ಎಲೆಕ್ಟ್ರಿಕ್ ಉತ್ಪನ್ನದತ್ತ ತೆಗೆದುಕೊಂಡು ಹೋಗಲಿದ್ದೇವೆ ಎಂದರು.

ಗ್ರೀನ್‌ಯೋಧ ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿದ ಜಿಕೆ ಸಿಮೆಂಟ್ ಲಿಮಿಟೆಡ್‌ನ ಎಂಡಿ ಮಾಧವ್ ಸಿಂಘಾನಿಯಾ, ಸಿಮೆಂಟ್ ಉತ್ಪಾದನೆಗೆ ಬಳಸುವ ಇಂಧನವನ್ನು ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಮೊರೆ ಹೋಗುವ ಗುರಿ ಹೊಂದಿದ್ದೇವೆ. ಈಗಾಗಲೇ 465ಕೆಜಿ ಇಂಧನ ಹೊರಸೂಸುವಿಕೆಯನ್ನು ನಿಂತ್ರಿಸುವ ಮೂಲಕ ವಿದ್ಯುತ್‌ಚ್ಛಕ್ತಿ ಬಳಸುತ್ತಿದ್ದೇವೆ ಎಂದರು.

ಯುಎಸ್‌ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೆಕ್ಸಾಂಡರ್ ವರ್ಗೀಸ್ ಮಾತನಾಡಿ,  ಯುಎಸ್‌ಟಿ ಈಗಾಗಲೇ ಗ್ರೀನ್‌ಯೋಧ ಉಪಕ್ರಮವನ್ನು ಅಳವಡಿಸಿಕೊಂಡಿದೆ. 2025ರ ವೇಳೆ ಗ್ರಾಹಕರಿಗೆ 800ಎಂ ಮೆಟ್ರಿಕ್ ಟನ್ ಇಂಧನ ಹೊರಸೂಸುವಿಕೆಯನ್ನು ನಿಯಂತ್ರಿಸುವುದು ನಮ್ಮ ಗುರಿಯಾಗಿದೆ ಎಂದರು.

ಕೇಂದ್ರ ಸಚಿವ ಸಚಿವ ನಿತಿನ್ ಗಡ್ಕ ಹೇಳಿದ್ದು

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದಂತೆ ಜನರೆಲ್ಲರೂ ಎಲೆಕ್ಟ್ರಿಕ್ ಕಾರು, ಬೈಕಿನತ್ತ ಒಲವು ತೋರಿಸುತ್ತಿದ್ದಾರೆ. ಆದರೆ, ಎಲೆಕ್ಟ್ರಿಕ್ ವಾಹನಗಳ ಬೆಲೆ ಬಹಳ ದುಬಾರಿ ಇರುವುದರಿಂದ ಹಾಗೂ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್​ಗಳು ಹೆಚ್ಚಾಗಿ ಇಲ್ಲದ ಕಾರಣ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಕೊಂಚ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ಕಾರುಗಳನ್ನು ಬಳಸಲು ವಾಹನ ಮಾಲೀಕರನ್ನು ಪ್ರೋತ್ಸಾಹಿಸುತ್ತಿದ್ದರೂ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆ ಬೇರೆ ದೇಶಗಳಿಗೆ ಹೋಲಿಸಿದರೆ ಹೆಚ್ಚೇನೂ ಅಭಿವೃದ್ಧಿಯಾಗಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಎಲೆಕ್ಟ್ರಿಕ್ ವಾಹನಗಳ ಹೆಚ್ಚಿನ ಬೆಲೆ. ಇದೀಗ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಸದ್ಯದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬೆಲೆ ಹಾಗೂ ಎಲೆಕ್ಟ್ರಿಕ್ ವಾಹನಗಳ ಬೆಲೆ ಎರಡೂ ಸಮಾನವಾಗಲಿದೆ. ಭಾರತದಲ್ಲಿ ಸದ್ಯದಲ್ಲೇ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯಾಗಲಿದೆ ಎಂದಿದ್ದಾರೆ.

ನಾವು 2023ರ ವೇಳೆಗೆ ಪ್ರಮುಖ ಹೆದ್ದಾರಿಗಳಲ್ಲಿ 600 ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುತ್ತಿದ್ದೇವೆ. ಚಾರ್ಜಿಂಗ್ ಸ್ಟೇಷನ್‌ಗಳು ಸೌರ ಅಥವಾ ಪವನ ವಿದ್ಯುತ್‌ನಂತಹ ನವೀಕರಿಸಬಹುದಾದ ಮೂಲಗಳಿಂದ ಚಾಲಿತವಾಗಲಿದೆ ಎಂದು ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios