ನವದೆಹಲಿ[ಜ.27]: ಹಣದಾಸೆಗಾಗಿ ಜೀವ ವಿಮೆ ಪಡೆದ ಎರಡೇ ದಿನದಲ್ಲಿ ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಪತಿಗೆ ಉತ್ತಾರಾಖಂಡ್‌ ಹೈಕೋರ್ಟ್‌ ನೀಡಿದ್ದ ಜೀವಾವಧಿ ಸಜೆಯನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. 2002ರಲ್ಲಿ ಉತ್ತರಾಖಂಡದಲ್ಲಿ ನಡೆದ ಘಟನೆ ಇದಾಗಿದ್ದು, ಬರೋಬ್ಬರಿ 18 ವರ್ಷಗಳದರೂ ತಾರ್ಕಿಕ ಅಂತ್ಯ ಕಂಡಿರಲಿಲ್ಲ.

ಜೀವ ವಿಮೆ ಮಾಡಿಸಿದ್ದ ಹೆಂಡತಿಯನ್ನು ಕೊಂದರೆ, ವಿಮೆಯಿಂದ ಬಂದ ಹಣ ಪಡೆಯಬಹುದು ಎನ್ನುವ ಆಸೆಗೆ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿ ಬಳಿಕ ದೋಷಿ ಬಳಿಕ ಶಿಕ್ಷೆಯಿಂದ ಪಾರಾಗಲು ಕತೆ ಹೆಣೆದಿದ್ದಾನೆ. 2002 ಮಾಚ್‌ರ್‍ 25ರ ರಾತ್ರಿ ಐದು ಮಂದಿ ಮುಸುಕುಧಾರಿಗಳು ಮನೆ ಪ್ರವೇಶಿಸಿ ನನ್ನನ್ನು ಅಪಹರಿಸಲು ಯತ್ನಿಸಿದ್ದಾರೆ. ಈ ವೇಳೆ ಅಡ್ಡ ಬಂದ ಪತ್ನಿಯನ್ನು ಗುಂಡಿಕ್ಕಿ ಸಾಯಿಸಿದ್ದಾರೆ ಎಂದಿದ್ದ. ಆದರೆ ಎಫ್‌ಐಆರ್‌ನಲ್ಲಿ ಮೂರು ಮಂದಿ ಮನೆಗೆ ಬಂದಿದ್ದರು ಎಂದು ದಾಖಲಾಗಿತ್ತು.

LIC ಪಾಲಿಸಿದಾರರಿಗೆ ಬಿಗ್ ನ್ಯೂಸ್: ಜ.31 ರಿಂದ 23 ಪ್ಲಾನ್‌ಗಳು ಬಂದ್!

ವಿಚಾರಣೆ ವೇಳೆ ಅವರು ಯಾಕೆ ಅಪಹರಣಕ್ಕೆ ಯತ್ನ ಮಾಡಿದ್ದರು, ಐದು ಮಂದಿ ಇರುವಾಗ ಮಹಿಳೆಯೋರ್ವಳನ್ನು ಹಿಡಿದು ನಿನ್ನನ್ನು ಯಾಕೆ ಅಪಹರಿಸಲಿಲ್ಲ. ಅವರ ದೇಹ ಚಹರೆ ಹೇಗಿತ್ತು . ಅವರ ದಾಳಿಯಿಂದ ನಿನ್ನ ಮೈಮೇಲೆ ಯಾವ ಗಾಯಗಳೂ ಆಗಿಲ್ಲ ಯಾಕೆ? ಎನ್ನುವ ಪ್ರಶ್ನೆಗಳಿಗೆ ನಿರುತ್ತರಿಯಾಗಿದ್ದ. ಅಲ್ಲದೇ ಮನೆ ವಠಾರದಲ್ಲಿ ಐದು ಮಂದಿ ಬಂದ ಕುರುಹು ಕೂಡ ಸಿಕ್ಕಿರಲಿಲ್ಲ. ಇದೆನ್ನೆಲ್ಲಾ ಪರಿಗಣಿಸಿದ ಸುಪ್ರೀಂ ಕೋರ್ಟ್‌ ಪತಿಯೇ ದೋಷಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಆ ಮೂಲಕ ಕೆಲ ನ್ಯಾಯಾಲಯ ಹಾಗೂ ಹೈಕೋರ್ಟ್‌ ತೀರ್ಪನ್ನು ಎತ್ತಿ ಹಿಡಿದಿದೆ.

ಎಣ್ಣೆ ಕಿಕ್‌ನಲ್ಲಿ ಚಕ್ರವಿಲ್ಲದ ಕಾರು ಚಲಾಯಿಸಿದ ಭೂಪ!