ನವದೆಹಲಿ[ಮಾ.19]: ನಿರ್ಭಯಾ ಅತ್ಯಾಚಾರಿಗಳಿಗೆ ಕೊನೆಗೂ ಗಲ್ಲು ಶಿಕ್ಷೆ ಖಚಿತವಾಗಿದ್ದು, ಬರೋಬ್ಬರಿ 7 ವರ್ಷಗಳ ಬಳಿಕ ಕಾಮುಕರ ಅಟ್ಟಹಾಸಕ್ಕೆ ನಲುಗಿದ ಯುವತಿಗೆ ನ್ಯಾಯ ಸಿಗುವ ಸಮಯ ಬಂದಿದೆ.

"

ದೋಷಿ ಪವನ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಅತ್ಯಾಚಾರಿಗಳ ಕಾನೂನು ಹೋರಾಟ ಸಂಪೂರ್ಣ ಅಂತ್ಯವಾಗಿದ್ದು, ನಾಳೆ ಬೆಳಗ್ಗೆ 5:30ಕ್ಕೆ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಫಿಕ್ಸ್ ಆಗಿದೆ. 

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ನಿರ್ಭಯಾ ತಾಯಿ ಆಶಾ ದೇವಿ 'ನ್ಯಾಯಾಲಯ ಅವರಿಗೆ ನೀಡಿದ್ದ ಅವಕಾಶಗಳಿಂದ, ಅವರು ಒಂದಿಲ್ಲೊಂದು ಕಾರಣ ನೀಡಿ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಆದರೆ ನ್ಯಾಯಾಂಗಕ್ಕೂ ಇವರ ಆಟ ಗಮನಕ್ಕೆ ಬಂದಿದೆ. ನಿರ್ಭಯಾಗೆ ನಾಳೆ ನ್ಯಾಯ ಸಿಗುತ್ತೆ' ಎಂದಿದ್ದಾರೆ.

ಮಾರ್ಚ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ