Asianet Suvarna News Asianet Suvarna News

ಬದುಕಿದ್ದೇನೆ ಎನ್ನುವ ಸಾಕ್ಷಿಗಾಗಿ ಕೋರ್ಟ್‌ಗೆ ಬಂದ ವೃದ್ಧ, ಅಧಿಕಾರಿಗಳ ಮುಂದೆಯೇ ಸಾವು ಕಂಡ!

ಸರ್ಕಾರಿ ಕಡತಗಳಲ್ಲಿ ಆರು ವರ್ಷಗಳ ಹಿಂದೆಯೇ ಸತ್ತಿದ್ದಾನೆ ಎಂದು ಹೇಳಲಾಗಿರುವ ವ್ಯಕ್ತಿ, ತಾನು ಬದುಕಿದ್ದೇನೆ ಎಂದು ಸಾಬೀತುಮಾಡಲು ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ದುರದೃಷ್ಟವಶಾತ್‌ ಕೋರ್ಟ್‌ ಹಾಲ್‌ನಲ್ಲಿಯೇ ಅವರು ಅನಾರೋಗ್ಯ ಉಲ್ಬಣಗೊಂಡು ಸಾವು ಕಂಡಿದ್ದಾರೆ.
 

Sant Kabir Nagar in Uttar Pradesh Dead On Paper Appeared To Be Alive In Court Then Died Incident san
Author
First Published Nov 18, 2022, 2:18 PM IST

ಲಕ್ನೋ (ನ.18): ಇಲ್ಲಿನ ಸಂತ ಕಬೀರನಗರದಲ್ಲಿ ವ್ಯಕ್ತಿಯೊಬ್ಬ ತಾನು ಜೀವಂತವಾಗಿದ್ದೇನೆ ಎಂದು ಸಾಬೀತು ಮಾಡಲು ಕೋರ್ಟ್‌ಗೆ ಬಂದಿದ್ದ. ಆದರೆ, ಹಣೆಬರಹ ಸರಿಯಿರಲಿಲ್ಲ. ಕೋರ್ಟ್‌ ಹಾಲ್‌ನಲ್ಲಿ ಅಧಿಕಾರಿಗಳಿಯೇ ಎದುರೇ 70 ವರ್ಷದ ವೃದ್ಧ ಸಾವು ಕಂಡಿದ್ದಾನೆ. ವೃದ್ಧ ಖಲೈ ಕಳೆದ ಆರು ವರ್ಷಗಳಿಂದ ಸರ್ಕಾರಿ ಕಡತದಲ್ಲಿ ತಾನು ಸತ್ತಿದ್ದೇನೆ ಎನ್ನುವ ವಿಚಾರವನ್ನು ತೆಗೆದುಹಾಕಲು ಹೋರಾಟ ನಡೆಸುತ್ತಿದ್ದರು. ಈ ಹೋರಾಟದ ಕೊನೆಯ ಹಂತದಲ್ಲಿ ಅಧಿಕಾರಿಗಳ ಮುಂದೆ ಹಾಜರಾಗಿ ತಾನು ಜೀವಂತವಾಗಿರುವುದನ್ನು ಸಾಬೀತುಪಡಿಸಬೇಕಾಗಿತ್ತು. ಕಳೆದ ಬುಧವಾರ ಇವರು ಇದೇ ಕಾರಣಕ್ಕಾಗಿ ಕೋರ್ಟ್‌ನಲ್ಲಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಆದರೆ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವೃದ್ಧನಿಗೆ ಸಾಧ್ಯವಾಗಲಿಲ್ಲ. ಸರ್ಕಾರಿ ಕಡತದಲ್ಲಿ ಆರು ವರ್ಷಗಳ ಹಿಂದೆಯೇ ಸತ್ತಿದ್ದಾನೆ ಎನ್ನುವ ದಾಖಲನ್ನು ತೆಗೆಯಲು ಹೋರಾಟ ಮಾಡಿದ ವ್ಯಕ್ತಿ, ಅಧಿಕಾರಿಗಳ ಎದುರು ಸಾವು ಕಂಡರು. 2016ರಲ್ಲಿ ಖಲೈ ಅವರ ಅಣ್ಣ ಫೇರೈ ಸಾವು ಕಂಡಿದ್ದರು. ಆದರೆ, ಪತ್ರಿಕೆಗಳಲ್ಲಿ ಫೇರೈ ಅವರ ಬದಲು ಖಲೈ ಅವರ ಚಿತ್ರಗಳನ್ನು ಹಾಕಲಾಗಿತ್ತು.

ಆಸ್ತಿಗಾಗಿ ಕೃತ್ಯ: ಇದು ಆರು ವರ್ಷದ ಹಿಂದಿನ ಕಥೆ, ದಂಘಾಟ ತಹಸಿಲ್ ಪ್ರದೇಶದ ಕೋದ್ರಾ ಗ್ರಾಮದ ನಿವಾಸಿ 90 ವರ್ಷದ ನಿವಾಸಿ ಫೇರೈ ನಿಧನರಾಗಿದ್ದರು. ಆದರೆ, ತೆಹಸಿಲ್‌ ಸಿಬ್ಬಂದಿ ಹಾಗೂ ಸರ್ಕಾರಿ ಲೆಕ್ಕ ಪರಿಶೋಧಕ ಫೆರೈ ಸತ್ತಿದ್ದಾರೆ ಎಂದು ನಮೂದು ಮಾಡುವ ಬದಲು ಅವರ ಅತ್ಯಂತ ಕಿರಿಯ ಸಹೋದರ ಖಲೈ ಸತ್ತಿದ್ದಾರೆ ಎಂದು ದಾಖಲೆಗಳಲ್ಲಿ ನಮೂದು ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳ ಆಟ ಇಲ್ಲಿಗೆ ನಿಂತಿರಲಿಲ್ಲ, ನಕಲಿ ಉಯಿಲಿನ ಮೂಲಕ ಬದುಕಿದ್ದ ಖಲೈ ಆಸ್ತಿಯನ್ನು ಅವರ ಅಣ್ಣ ಫೆರೈ ಅವರ ಪತ್ನಿ ಸೋಮಾರಿ ದೇವಿ ಹಾಗೂ ಅವರ ಮಕ್ಕಳಾದ ಛೋಟಾಲಾಲಾ, ಛಲುರಾಮ್‌ ಹಾಗೂ ಹರ್ಕನಾಥ್‌ ಹೆಸರಿಗೆ ಹಸ್ತಾಂತರ ಮಾಡಿದ್ದರು. ಈ ವಿಷಯ ತಿಳಿದ ತಕ್ಷಣ ಖಲೈ ಅವರಿಗೆ ಅಚ್ಚರಿಯಾಗಿದ್ದು ಮಾತ್ರವಲ್ಲದೆ, ಸ್ಥಳೀಯ ಎಸ್‌ಡಿಎಂ, ತಹಶೀಲ್ಡಾರ್‌ ಹಾಗೂ ಸಹಾಯಕ ತಹಶೀಲ್ದಾರ್‌ ಬಳಿ ತಾನು ಬದುಕಿದ್ದೇನೆ ಎಂದು ದಾಖಲೆಗಳನ್ನು ನೀಡಿದ್ದರು. ಆದರೆ, ಈ ಕುರಿತಾದ ವಿಚಾರಣೆ ಯಾವ ವೇದಿಕೆಯಲ್ಲೂ ನಡೆದಿರಲಿಲ್ಲ.

ಗರ್ಲ್‌ ಫ್ರೆಂಡ್‌ ಮೋಸ ಮಾಡಿದ್ಳೆಂದು ಗಂಟಲು ಸೀಳಿ, ಮೃತದೇಹದೊಂದಿಗೆ ವಿಡಿಯೋ ಪೋಸ್ಟ್‌ ಮಾಡಿದ..!

ಕೋರ್ಟ್‌ನಲ್ಲಿ ಹದಗೆಟ್ಟ ಆರೋಗ್ಯ: ಖಲೈ ಕಳೆದ ಆರು ವರ್ಷಗಳಿಂದ ತಾನು ಜೀವಂತವಾಗಿದ್ದೇನೆ ಎಂದು ಸಾಬೀತುಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಕಸರತ್ತುಗಳನ್ನು ಮಾಡಿದ್ದರು. ಈ ಕುರಿತಾಗಿ ತನ್ನ ಸ್ವಂತ ಗ್ರಾಮದಲ್ಲಿ ಸಾಕ್ಷಿಗಳನ್ನು ಕೋರ್ಟ್‌ನ ಮುಂದೆ ಇಡುವ ಪ್ರಯತ್ನ ಮಾಡಿದ್ದರು. ಕೊನೆಗೆ ಏಕೀಕರಣ ನ್ಯಾಯಾಲಯ ಇದರ ವಿಚಾರಣೆ ಆರಂಭಿಸಿತ್ತು. ಆದರೆ, ಅವರ ಆಸ್ತಿ ಮರಳಿ ತನ್ನ ಹೆಸರಗೆ ಬರದ ಹಿನ್ನಲೆಯಲ್ಲಿ ಮಂಗಳವಾರ ಮತ್ತೆ ತೆಹಸಿಲ್‌ಗೆ ತೆರಳಿದ್ದರು. ಬುಧವಾರ ಅಧಿಕಾರಿಯ ಮುಂದೆ ಮತ್ತೊಮ್ಮೆ ಹಾಜರಾಗಿದ್ದರು. ಖಲೈ ಹಾಗೂ ಅವರ ಪುತ್ರ ಹೀರಾಲಾಲ್‌ ಬುಧವಾರ ಅಧಿಕಾರಿಯ ಮುಂದೆ ಹಾಜರಾದರೂ, ಖಲೈ ಅವರ ಆರೋಗ್ಯ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟು ಬೆಳಗ್ಗೆ 11 ಗಂಟೆಯ ವೇಳೆಗ ಇಹಲೋಕ ತ್ಯಜಿಸಿದ್ದಾರೆ.

ಹೈದರಾಬಾದ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯ ಮೇಲೆ ಹಲ್ಲೆ ವಿಡಿಯೋ ವೈರಲ್‌: 8 ಮಂದಿ ವಶಕ್ಕೆ

ತಂದೆಯ ಸಾವಿಗೆ ಪ್ರತಿಕ್ರಿಯೆ ನೀಡಿರುವ ಪುತ್ರ ಹೀರಾಲಾಲ್‌, ಕೊನೆಗೂ ನನ್ನ ತಂದೆ ನ್ಯಾಯ ಸಿಗದೇ ಸಾವು ಕಂಡರು ಎಂದು ಕಣ್ಣೀರಿಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆಯೇ ಅವರ ತಾಯಿ ಕೂಡ ಸಾವು ಕಂಡಿದ್ದರು.  ತನ್ನ ತಂದೆ ತಾನು ಬದುಕಿದ್ದೇನೆ ಎಂದು ಸಾಬೀತುಪಡಿಸಲು ಇಷ್ಟು ವರ್ಷಗಳನ್ನು ತೆಗೆದುಕೊಂಡರು ಮತ್ತು ಅಂತಿಮವಾಗಿ ದಾಖಲೆಗಳಲ್ಲಿ ಬದಲಾವಣೆ ಆಗುವುದನ್ನು ನೋಡಲು ಸಾಧ್ಯವಾಗದೇ ಸಾವು ಕಂಡರು. ಇದು ನನಗೆ ಜೀವಪೂರ್ತಿ ಕಾಡಲಿದೆ ಎಂದು ಹೀರಾಲಾಲ್‌ ಹೇಳಿದ್ದಾರೆ. ಹೀರಾಲಾಲ್ ಅವರು, ಪನ್ನಾಲಾಲ್, ಅಮೃತ್ಲಾಲ್, ಅಮರ್ಜಿತ್ ಮತ್ತು ರಂಜಿತ್ ಸೇರಿದಂತೆ ಐವರು ಸಹೋದರರ ಜೊತೆ ಇದ್ದಾರೆ. ಮಂಗಳವಾರವೂ ತಂದೆಗೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಲು ಇಲ್ಲಿಗೆ ಬಂದಿದ್ದರು. ಏಕೀಕರಣ ಅಧಿಕಾರಿ ಬುಧವಾರ ಬರುವಂತೆ ತಿಳಿಸಿದ್ದರು ಎಂದಿದ್ದಾರೆ.

ಈ ಎಲ್ಲಾ ಘಟನೆಯ ಬಳಿಕ ಸಂತ್‌ ಕಬೀರ್‌ ನಗರದ ಧನಘಟ್ಟದ ಅಧಿಕಾರಿ ಎ.ಕೆ.ದ್ವಿವೇದಿ ಮಾತನಾಡಿದ್ದು, ಈ ಇಡೀ ಪ್ರಕರಣದಲ್ಲಿ ಬುಧವಾರ ಹೇಳಿಕೆ ನೀಡಲು ಖಲೈ ಅವರನ್ನು ಕರೆಸಲಾಗಿತ್ತು.ಹೇಳಿಕೆ ಪಡೆದುಕೊಂಡು ಅವರ ಆಸ್ತಿಯನ್ನು ಅವರಿಗೆ ಮರಳಿಸುವ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಇದೆಲ್ಲಾ ಆಗುವ ಮುನ್ನವೇ ಅವರು ಸಾವು ಕಂಡಿದ್ದಾರೆ. ಮಂಗಳವಾರ ಕೂಡ ಅವರ ಹೇಳಿಕೆ ದಾಖಲಾಗಿರಲಿಲ್ಲ. ಆದರೆ, ಈಗ ಅವರ ಆಸ್ತಿಯನ್ನು ಅವರ ಮಕ್ಕಳಿಗೆ ಮರಳಿಸುವ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ. ಇನ್ನೊಂದೆಡೆ ಜಿಲ್ಲಾಧಿಕಾರಿ ರವೀಂದ್ರ ಕುಮಾರ್‌, ಬದುಕಿದ್ದ ವ್ಯಕ್ತಿಯನ್ನು ಸರ್ಕಾರಿ ಕಡತದಲ್ಲಿ ಸಾಯಿಸಿದ್ದ ಬಗ್ಗೆ ಹಾಗೂ ಖಲೈ ಸಾವಿನ ಪ್ರಮಾಣ ಪತ್ರ ನೀಡಿದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಇದರಲ್ಲಿ  ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘಟನೆ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.

Follow Us:
Download App:
  • android
  • ios