Asianet Suvarna News Asianet Suvarna News

ಹೈದರಾಬಾದ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯ ಮೇಲೆ ಹಲ್ಲೆ ವಿಡಿಯೋ ವೈರಲ್‌: 8 ಮಂದಿ ವಶಕ್ಕೆ

ನಾವು ಅವನ ಸಿದ್ಧಾಂತವನ್ನು ಸರಿಪಡಿಸಲು ಬಯಸುತ್ತೇವೆ. ನಾವು ಅವನನ್ನು ಕೋಮಾಕ್ಕೆ ಹೋಗುವಂತೆ ಹೊಡೆಯುತ್ತೇವೆ ಮತ್ತು ಆತ ಹೊಸ ಜಗತ್ತನ್ನು ನೆನಪಿಸಿಕೊಳ್ಳುತ್ತಾನೆ ಎಂದು ಆರೋಪಿ ಹೇಳಿದ್ದಾನೆ. 

video of students assault in hyderabad hostel goes viral 8 detained ash
Author
First Published Nov 14, 2022, 12:13 PM IST

ತೆಲಂಗಾಣದ (Telangana) ಹೈದರಾಬಾದ್‌ನ (Hyderabad) ಹಾಸ್ಟೆಲ್ ಕೊಠಡಿಯಲ್ಲಿ (Hostel Room) ವಿದ್ಯಾರ್ಥಿಗಳ ಗುಂಪೊಂದು (Students Group) ಕಾನೂನು ವಿದ್ಯಾರ್ಥಿಯನ್ನು (Law Student) ಥಳಿಸಿ ಧರ್ಮದ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ ಘಟನೆಯ ವಿಡಿಯೋ ವೈರಲ್ (Video Viral) ಆಗಿದೆ. ಹೈದರಾಬಾದಿನ ಐಸಿಎಫ್‌ಎಐ ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್ (ICFAI Foundation For Higher Education) (ಐಎಫ್‌ಹೆಚ್‌ಇ) (IFHE) ಯಲ್ಲಿ 3ನೇ ವರ್ಷದ ವಿದ್ಯಾರ್ಥಿ ಹಿಮಾಂಕ್ ಬನ್ಸಾಲ್ ಎಂಬಾತನಿಗೆ ಕಪಾಳಮೋಕ್ಷ ಮಾಡಿ, ಹೊಡೆದು ಮತ್ತು ಕೈಗಳನ್ನು ತಿರುಚಲಾಗಿದೆ ಎಂದು ವಿಡಿಯೋದಲ್ಲಿ ನೋಡಬಹುದಾಗಿದೆ. ಆರೋಪಿಗಳು ಆತನನ್ನು ಥಳಿಸುವುದನ್ನು ಮುಂದುವರೆಸಿದ್ದು, ಈ ನಡುವೆ ಆತ "ಜೈ ಮಾತಾ ದಿ" ಮತ್ತು "ಅಲ್ಲಾಹು ಅಕ್ಬರ್" ಘೋಷಣೆಗಳನ್ನು ಕೂಗುತ್ತಿರುವುದು ಸಹ ಕೇಳಬಹುದು.
.
"ನಾವು ಅವನ ಸಿದ್ಧಾಂತವನ್ನು ಸರಿಪಡಿಸಲು ಬಯಸುತ್ತೇವೆ. ನಾವು ಅವನನ್ನು ಕೋಮಾಕ್ಕೆ ಹೋಗುವಂತೆ ಹೊಡೆಯುತ್ತೇವೆ ಮತ್ತು ಆತ ಹೊಸ ಜಗತ್ತನ್ನು ನೆನಪಿಸಿಕೊಳ್ಳುತ್ತಾನೆ" ಎಂದು ಆರೋಪಿಯೊಬ್ಬರು ಹೇಳಿದರು. ಅಲ್ಲದೆ, ಮತ್ತೊಬ್ಬ ಪರ್ಸ್‌ ಕಸಿದುಕೊಂಡು ‘’ನಿನಗೆ ಬೇಕಾದ ಹಣವನ್ನು ತೆಗೆದುಕೊಳ್ಳಿ" ಎಂದು ಹೇಳಿದ್ದಾನೆ.

ಇದನ್ನು ಓದಿ: Andhra Pradesh: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಮೇಲೆ 4 ಸಹಪಾಠಿಗಳಿಂದ ಹಲ್ಲೆ: ಐರನ್‌ ಬಾಕ್ಸ್‌ನಿಂದ ಸುಟ್ಟ ಪಾಪಿಗಳು..!

ಕೊಲೆ ಯತ್ನದ ಆರೋಪದ ಮೇಲೆ ಅಪ್ರಾಪ್ತ ವಯಸ್ಕ ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳ ಪೈಕಿ ಎಂಟು ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇನ್ನು 7 ಜನ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಇವರೆಲ್ಲರನ್ನೂ ಬಿಸಿನೆಸ್ ಸ್ಕೂಲ್ ತಮ್ಮ ಕಾಲೇಜಿನಿಂದ ಅಮಾನತುಗೊಳಿಸಿದೆ. ಹಾಗೆ, ಕಾಲೇಜಿನ ಆಡಳಿತ ಮಂಡಳಿಯು ಐವರಿಗೆ ಪೊಲೀಸರ ಮುಂದೆ ಹಾಜರಾಗುವಂತೆ ಆದೇಶವನ್ನೂ ನೀಡಿದೆ.

ನವೆಂಬರ್ 1 ರಂದು ಹಿಮಾಂಕ್ ಪ್ರಾಫೆಟ್‌ ಮೊಹಮ್ಮದ್‌ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡಿದ ನಂತರ ಈ ಘಟನೆ ಸಂಭವಿಸಿದೆ ಎಂದುವರದಿಯಾಗಿದೆ. ಅಲ್ಲದೆ, ಪೊಲೀಸರಿಗೆ ದೂರು ನೀಡಿದ್ದ ವಿದ್ಯಾರ್ಥಿ ತನ್ನ ಮೇಲೆ ದೈಹಿಕವಾಗಿ ಮತ್ತು ಲೈಂಗಿಕದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಹಾಗೆ, ಪ್ಯಾಂಟ್ ತೆಗೆಯದಿದ್ದರೆ ಥಳಿಸಿ ಸಾಯಿಸುವುದಾಗಿ ವಿದ್ಯಾರ್ಥಿಗಳು ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ಕಾನೂನು ವಿದ್ಯಾರ್ಥಿ ಆರೋಪಿಸಿದ್ದಾನೆ.

ಇದನ್ನೂ ಓದಿ: ಸುರಪುರ: ಸಂಶಯಾಸ್ಪದವಾಗಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ತೆಲಂಗಾಣ ಸಚಿವ ಕೆ.ಟಿ ರಾಮರಾವ್ ಮತ್ತು ಸೈದರಾಬಾದ್ ಪೊಲೀಸ್ ಕಮಿಷನರ್ ಅವರನ್ನು ಟ್ಯಾಗ್ ಮಾಡಿರುವ ಹಿಮಾಂಕ್ ಈ ಘಟನೆಯನ್ನು ಟ್ವೀಟ್ ಮಾಡಿದ್ದ. ಇನ್ನು, ಈ ಘಟನೆ ಬಗ್ಗೆ ಹೇಳಿಕೆ ನೀಡಿರುವ ಬ್ಯುಸಿನೆಸ್‌ ಸ್ಕೂಲ್‌, "ಇಂತಹ ಅನಪೇಕ್ಷಿತ ಕೃತ್ಯಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತೆ ಕಾಯ್ದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ. ಹಾಗೂ,  ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ 12 ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದ್ದು, ಕೆ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ. "ಇದು ಧರ್ಮದ ಬಗ್ಗೆ ಅಲ್ಲ. ಇಂತಹ ಪ್ರಚೋದನಕಾರಿ ಘಟನೆಗಳು ಗಮನಕ್ಕೆ ಬರದೇ ಇರುವುದು ಹುಸಿ ಜಾತ್ಯಾತೀತತೆ" ಎಂದು ಬಿಜೆಪಿ ನಾಯಕಿ ರಚನಾ ರೆಡ್ಡಿ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸ್ಟೆಲ್‌ ಹುಡುಗೀರ ಅಶ್ಲೀಲ ವಿಡಿಯೋ ಮಾಡಿ ಲವರ್‌ಗೆ ಕಳಿಸುತ್ತಿದ್ದವಳ ಬಂಧನ!

ಇದೇ ರೀತಿ, ಕೆಲ ದಿನಗಳ ಹಿಂದೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿತ್ತು. ತನ್ನನ್ನು ಬಿಟ್ಟುಬಿಡಿ ಎಂದು ಆತ ಬೇಡಿಕೊಳ್ಳುತ್ತಿದ್ದರೂ, ನಾಲ್ವರು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಆತನ ಮೇಲೆ ತೀವ್ರ ಹಲ್ಲೆ ನಡೆಸಿದ್ದು, ಈ ಸಂಬಂಧದ ವಿಡಿಯೋ ವೈರಲ್‌ ಆಗಿತ್ತು. ಈ ಹಿನ್ನೆಲೆ ನಾಲ್ವರು ವಿದ್ಯಾರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದೆ.  

ಇದನ್ನೂ ಓದಿ: ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ!

Follow Us:
Download App:
  • android
  • ios