ವಿಶ್ವೇಶ ತೀರ್ಥ ಶ್ರೀಗಳಿಗೆ ಭಾರತದ ಖ್ಯಾತ ಮರಳು ಶಿಲ್ಪಿ, ಪದ್ಮಶ್ರೀ ಪುರಸ್ಕೃತ ಸುದರ್ಶನ ಪಟ್ನಾಯಕ್ ಮರಳು ನಮನ| ಪುರಿ ಸಮುದ್ರ ತೀರದಲ್ಲಿ ಮರಳು ಶಿಲ್ಪದ ಮೂಲಕ ಶ್ರೀಗಳಿಗೆ ಶ್ರದ್ಧಾಂಜಲಿ
ಭುವನೇಶ್ವರ[ಡಿ.30]: ಭಾರತದ ಖ್ಯಾತ ಮರಳು ಶಿಲ್ಪಿ, ಪದ್ಮಶ್ರೀ ಪುರಸ್ಕೃತ ಸುದರ್ಶನ ಪಟ್ನಾಯಕ್ ಬಾರದ ಲೋಕಕ್ಕೆ ತೆರಳಿದ, ಜಗತ್ತಿಗೆ ಮಾರ್ಗ ತೋರಿದ ಸದ್ಗುರು ಪೇಜಾವರ ಶ್ರೀಗಳಿಗೆ ತಮ್ಮ ಕಲಾಕೃತಿ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.
ಹೌದು ಶ್ರೀ ಕೃಷ್ಣನ ಆರಾಧಕ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಭಾನುವಾರ ಕೃಷ್ಣೈಕ್ಯರಾಗಿದ್ದಾರೆ. ಅವರಿಲ್ಲದ ಕೃಷ್ಣನೂರು ಬಣಗುಡುತ್ತಿದೆ. ಶ್ರೀಗಳ ಅಗಲುವಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಹೀಗಿರುವಾಗ ಖ್ಯಾತ ಮರಳುಶಿಲ್ಪಿ ಸುದರ್ಶನ ಪಟ್ನಾಯಕ್ ಶ್ರೀಗಳ ಕಲಾಕೃತಿ ನಿರ್ಮಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಭಾರತೀಯ ಮರಳು ಶಿಲ್ಪಿ ಸುದರ್ಶನ್ಗೆ ಅಮೆರಿಕದ ಗೌರವ!
ಒಡಿಶಾದ ಪುರಿ ಬೀಚ್ ನಲ್ಲಿ ಈ ಮರಳು ಶಿಲ್ಪ ರಚಿಸಿರುವ ಸುದರ್ಶನ್ ಪಟ್ನಾಯಕ್ ಮರಳಿನಲ್ಲೇ ಶ್ರೀಗಳ ಚಿತ್ರ ಬಿಡಿಸಿ 'ಓಂ ಶಾಂತಿ' ಎಂದು ಬರೆದಿದ್ದಾರೆ. ಹೀಗೆ ತಮ್ಮ ಕಲಾಕೃತಿ ಮೂಲಕವೇ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ತಮ್ಮ ಮರಳು ಶಿಲ್ಪಗಳಿಂದ ಪ್ರಸಿದ್ಧರಾಗಿರುವ ಸುದರ್ಶನ್ ಪಟ್ನಾಯಕ್ ಜಾಗೃತಿ ಮೂಡಿಸುವ, ಪರಿಸರ ಕಾಳಜಿ ಸಾರುವ ಹಾಗೂ ಇನ್ನೂ ವಿವಿಧ ಪರಿಕಲ್ಪನೆಗಳನ್ನಿಟ್ಟು ಕಲಾಕೃತಿ ನಿರ್ಮಿಸುತ್ತಾರೆ.
