ವಾರಾಣಸಿ ದೇಗುಲಗಳಿಂದ ಸಾಯಿ ಬಾಬಾ ಮೂರ್ತಿ ಸ್ಥಳಾಂತರ : ಮಹಾ ಬಿಜೆಪಿ, ಕಾಂಗ್ರೆಸ್ ಸಿಡಿಮಿಡಿ
ವಾರಾಣಸಿಯಲ್ಲಿನ ದೇಗುಲಗಳಿಂದ ಶಿರಡಿ ಸಾಯಿಬಾಬಾ ಮೂರ್ತಿ ತೆರವು ಮಾಡಿದ ಬಗ್ಗೆ ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಮುಂಬೈ (ಅ.3): ವಾರಾಣಸಿಯಲ್ಲಿನ ದೇಗುಲಗಳಿಂದ ಶಿರಡಿ ಸಾಯಿಬಾಬಾ ಮೂರ್ತಿ ತೆರವು ಮಾಡಿದ ಬಗ್ಗೆ ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನ್‌ಕುಳೆ, ಸಾಯಿಬಾಬಾ ಪೂಜ್ಯ ವ್ಯಕ್ತಿಯಾಗಿದ್ದು, ಅವರನ್ನು ಅವಮಾನಿಸಲು ಯಾರನ್ನು ಬಿಡಬಾರದು. ಅವರ ಪುತ್ಥಳಿ ತೆರವುಗೊಳಿಸುವ ಪ್ರಕ್ರಿಯೆ ಕೂಡಲೇ ನಿಲ್ಲಬೇಕು ಎಂದು ಆಗ್ರಹಿಸಿದರು.
ಮೂರು ದಿನ ದೇಹ ತೊರೆದ ಸಾಯಿಬಾಬಾ; ನೀರಿನಿಂದ ಬೆಳಗಿದವು ದೀಪಗಳು..!
ಕಾಂಗ್ರೆಸ್ ನಾಯಕ ಬಾಳಾಸಾಹೆಬ್ ತೊರಾಟ್ ಮಾತನಾಡಿ, ಸಾಯಿ ಬಾಬಾ ಅವರು ಜಾತಿ, ಧರ್ಮ ಮತ್ತು ಜನಾಂಗವನ್ನು ಮೀರಿದವರು. ವಾರಾಣಾಸಿಯಲ್ಲಿ ನಡೆದ ಘಟನೆ ನಿಜಕ್ಕೂ ದುರದೃಷ್ಟಕರ ಎಂದು ಅಸಮಾಧಾನ ಹೊರಹಾಕಿದರು. ವಾರಾಣಸಿಯಲ್ಲಿ ಕೇವಲ ಶಿವನನ್ನು ಪೂಜಿಸಬೇಕು. ಧರ್ಮಗ್ರಂಥಗಳ ಪ್ರಕಾರ ಸಾಯಿಬಾಬಾ ಪೂಜೆ ನಿಷಿದ್ಧ. ಅದರ ಜ್ಞಾನವಿಲ್ಲದೆ ಪೂಜೆ ನಡೆಸಲಾಗುತ್ತಿತ್ತು ಎಂದು ಪ್ರತಿಮೆ ತೆರವು ಅಭಿಯಾನ ಆರಂಭಿಸಿರುವ ‘ಸನಾತನ ರಕ್ಷಕ ದಳ’ ವಾದಿಸುತ್ತಿದೆ.