ನವದೆಹಲಿ(ಜು.07): ಕೊರೋನಾ ಸೋಂಕಿನಿಂದ ಸದ್ಯ ಸಂಪೂರ್ಣ ಗುಣಮುಖರಾಗಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ತಮ್ಮ ಪ್ಲಾಸ್ಮಾ ಕಣಗಳನ್ನು ನೀಡುವ ಮೂಲಕ ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಬಿತ್‌, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯು ಸೇವೆಯ ಮಂತ್ರ ಜಪಿಸಿದೆ. ಇದರಿಂದ ಸ್ಫೂರ್ತಿಗೊಂಡು ಪ್ಲಾಸ್ಮಾ ಕಣಗಳನ್ನು ನೀಡಿದ್ದೇನೆ. ಕೊರೋನಾದಿಂದ ಗುಣಮುಖರಾಗುವ ಎಲ್ಲರೂ ಪ್ಲಾಸ್ಮಾ ನೀಡಬೇಕೆಂದು ನಾನು ಕೋರುತ್ತೇನೆ’ ಎಂದಿದ್ದಾರೆ.

ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ವೈರಸ್‌ ವಿರುದ್ಧದ ರೋಗ ನಿರೋಧಕ ಶಕ್ತಿ ರೂಪುಗೊಂಡಿರುತ್ತದೆ. ಅಂತಹ ವ್ಯಕ್ತಿಯ ರಕ್ತದಿಂದ ಪ್ಲಾಸ್ಮಾ ಕಣಗಳನ್ನು ಪಡೆದು ಸೋಂಕಿತರು ಅಥವಾ ಸಂಭಾವ್ಯ ಸೋಂಕಿತರಿಗೆ ನೀಡಿದಾಗ ಆತ/ಆಕೆಯಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೊರೋನಾ ಸೊಂಕು ಗುಣಮುಖವಾಗುವ ಸಾಧ್ಯತೆ ಹೆಚ್ಚಿರುತ್ತದೆ.