ಮಸೀದಿಯ ಸ್ಥಳದಲ್ಲಿ ಮೊದಲು ಹರಿಹರ ದೇವಸ್ಥಾನ ಇತ್ತು: ಕೋರ್ಟ್‌ಗೆ ವರದಿ ಸಲ್ಲಿಕೆ

ಇಲ್ಲಿನ ಶಾಹಿ ಜಾಮಾ ಮಸೀದಿ ಸಮೀಕ್ಷೆಯ ವಿಸ್ತೃತ ವರದಿಯನ್ನು ಇದೀಗ ಚಂಡೌಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಆ ಜಾಗದಲ್ಲಿ ಮಂದಿರ ಇದ್ದುದಕ್ಕೆ ಸಾಕ್ಷಿ ಲಭಿಸಿದೆ ಎಂದು ಮೂಲಗಳು ತಿಳಿಸಿವೆ. 

Sambhal Mosque Row Shahi Jama Masjid Survey Report Submitted to UP Court gvd

ಸಂಭಲ್‌ (ಜ.03): ಇಲ್ಲಿನ ಶಾಹಿ ಜಾಮಾ ಮಸೀದಿ ಸಮೀಕ್ಷೆಯ ವಿಸ್ತೃತ ವರದಿಯನ್ನು ಇದೀಗ ಚಂಡೌಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಆ ಜಾಗದಲ್ಲಿ ಮಂದಿರ ಇದ್ದುದಕ್ಕೆ ಸಾಕ್ಷಿ ಲಭಿಸಿದೆ ಎಂದು ಮೂಲಗಳು ತಿಳಿಸಿವೆ. ‘ಕೋರ್ಟ್‌ ನಿರ್ದೇಶನದಂತೆ ನ.19 ಹಾಗೂ ನ.24ರಂದು ಮಸೀದಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅದರ ಎಲ್ಲಾ ಕೋನಗಳ ವಿಡಿಯೋ ಸೆರಿದಂತೆ 40-45 ಪುಟಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಿವಿಲ್‌ ನ್ಯಾಯಾಧೀಶರಿಗೆ ಸಲ್ಲಿಸಲಾಗಿದೆ’ ಎಂದು ಪ್ರಕರಣದ ವಕೀಲರಾಗಿರುವ ರಮೇಶ್‌ ಸಿಂಗ್‌ ರಾಘವ್‌ ತೀಳಿಸಿದ್ದಾರೆ.

ಪ್ರಸ್ತುತ ಇರುವ ಮುಘಲರ ಕಾಲದ ಜಾಮಾ ಮಸೀದಿಯ ಸ್ಥಳದಲ್ಲಿ ಮೊದಲು ಹರಿಹರ ದೇವಸ್ಥಾನ ಇತ್ತು ಎನ್ನಲಾಗಿದ್ದು, ಆ ಕುರಿತ ಸಮೀಕ್ಷೆ ನಡೆಸಿ ಅದರ ವರದಿಯನ್ನು ಬಹಿರಂಗಪಡಿಸದಂತೆ ಕೋರ್ಟ್‌ ಆದೇಶಿಸಿತ್ತು. ಅದರಂತೆ ಸಮೀಕ್ಷೆ ನಡೆಯುತ್ತಿದ್ದ ವೇಳೆ ಅದನ್ನು ವಿರೋಧಿಸಿದ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಘಟನೆಯಲ್ಲಿ 4 ಜನ ಸಾವನ್ನಪ್ಪಿದ್ದು, ಪೊಲೀಸರು ಸೇರಿ ಹಲವರು ಗಾಯಗೊಂಡಿದ್ದರು. ಇದೀಗ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ ಆ ಸ್ಥಳದಲ್ಲಿ ದೇವಸ್ಥಾನವಿದ್ದ ಬಗ್ಗೆ ಸಾಕ್ಷಿಗಳು ದೊರಕಿವೆ ಎನ್ನಲಾಗಿದೆ.

ಸೋಮನಾಥ- ಸಂಭಲ್‌ವರೆಗಿನ ಹೋರಾಟ ಸತ್ಯದ ಹುಡುಕಾಟ: ದೇಶದಲ್ಲಿ ಪದೇ ಪದೇ ಮಂದಿರ- ಮಸೀದಿ ವಿವಾದ ಸೃಷ್ಟಿಸುವುದರ ವಿರುದ್ಧ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆಗೆ ಸಾಧು- ಸಂತರಿಂದ ಭಾರೀ ವ್ಯಕ್ತವಾದ ಬೆನ್ನಲ್ಲೇ, ಇಂಥ ಹೋರಾಟದ ಅಗತ್ಯದ ಕುರಿತು ಆರ್‌ಎಸ್‌ಎಸ್‌ ಧ್ವನಿ ಎತ್ತಿದೆ. ಆರ್‌ಎಸ್‌ಎಸ್‌ನ ಮುಖವಾಣಿಯಾಗಿರುವ ಆರ್ಗನೈಸರ್‌ನಲ್ಲಿ ಬರೆದಿರುವ ಸಂಪಾದಕೀಯದಲ್ಲಿ ‘ಸೋಮನಾಥದಿಂದ ಸಂಭಲ್‌ ವರೆಗೆ, ಐತಿಹಾಸಿಕ ಸತ್ಯವನ್ನು ತಿಳಿದು ನಾಗರಿಕ ನ್ಯಾಯ ಪಡೆಯುವ ಹೋರಾಟವಾಗಿದೆ’ ಎಂದು ಹೇಳಿದೆ. 

ದೇಶದಲ್ಲೀಗ ದುಪ್ಪಟ್ಟು ಲಾಭದ ಆಸೆ ತೋರಿಸಿ ವಂಚಿಸುವ ಹಂದಿ ವಧೆ ಹೂಡಿಕೆ ಹಗರಣ: ಕೇಂದ್ರ ಗೃಹ ಇಲಾಖೆ

‘ಉತ್ತರಪ್ರದೇಶದ ಐತಿಹಾಸಿಕ ನಗರದಲ್ಲಿ, ಈಗ ಜಾಮಾ ಮಸೀದಿ ಇರುವ ಸ್ಥಳದಲ್ಲಿ ಶ್ರೀ ಹರಿಹರ ಮಂದಿರದ ಸಮೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಿಂದ ಶುರುವಾದ ವಿವಾದ, ಜನರಿಗೆ ಹಾಗೂ ಸಮುದಾಯಗಳಿಗೆ ನೀಡಲಾಗಿರುವ ಸಾಂವಿಧಾನಿಕ ಹಕ್ಕುಗಳ ಕುರಿತ ಚರ್ಚೆಗೆ ಅನುವು ಮಾಡಿದೆ. ಇದನ್ನು ಹಿಂದೂ ಮುಸ್ಲಿಂ ವಿವಾದಕ್ಕೆ ಸೀಮಿತವಾಗಿಸುವ ಬದಲು ಎಲ್ಲಾ ವರ್ಗಗಳನ್ನು ಒಳಗೊಂಡ ನಿಜವಾದ ಇತಿಹಾಸದ ಆಧಾರದಲ್ಲಿ ಚರ್ಚಿಸಬೇಕು’ ಎಂದು ಬರೆಯಲಾಗಿದೆ. ಅಂತೆಯೇ, ಸೋಮನಾಥದಿಂದ ಸಂಭಲ್‌ ತನಕ ನಡೆಯುತ್ತಿರುವ ಸಂಘರ್ಷವು ಧಾರ್ಮಿಕ ಶ್ರೇಷ್ಠತೆಗಾಗಿ ಅಲ್ಲ. ಬದಲಿಗೆ, ನಮ್ಮ ರಾಷ್ಟ್ರೀಯ ಗುರುತನ್ನು ಪುನಃ ಧೃಡಪಡಿಸಿಕೊಂಡು ನಾಗರಿಕ ನ್ಯಾಯವನ್ನು ಹುಡುಕುವುದು ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ.

Latest Videos
Follow Us:
Download App:
  • android
  • ios