ಸಲ್ಮಾನ್ ಖಾನ್ ಮನೆಗೆ ಶೂಟೌಟ್: ಶೂಟರ್‌ಗಳಿಗೆ ಹಣ ನೀಡಿದ ಐದನೇ ಆರೋಪಿ ಬಂಧನ
ಸಲ್ಮಾನ್ ಖಾನ್ ಮನೆಗೆ ಗುಂಡು ಹಾರಿಸಿದ ಸಾಗರ್ ಪಾಲ್ ಮತ್ತು ವಿಕಿ ಗುಪ್ತಾರಿಗೆ ಬಂದೂಕು ನೀಡುವ ಜೊತೆಗೆ ಮುಂಬೈ ನಗರದಲ್ಲಿ ಉಳಿದುಕೊಳ್ಳಲು ವಸತಿ ವ್ಯವಸ್ಥೆಯ ಜೊತೆಗೆ ಆರ್ಥಿಕ ಸಹಾಯ ಮಾಡಿದ ಆರೋಪದ ಮೇಲೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯ ಮೊಹಮ್ಮದ್ ರಫೀಕ್ ಚೌಧರಿ ಎಂಬಾತನನ್ನು ರಾಜಸ್ಥಾನದ ನಾಗೌರ್‌ನಲ್ಲಿ ಬಂಧಿಸಲಾಗಿದೆ.
ಮುಂಬೈ (ಮೇ.08): ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಪೊಲೀಸರು ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡಕ್ಕೆ ಸೇರಿದ ಮತ್ತೊಬ್ಬ ಶಂಕಿತನನ್ನು ಬಂಧಿಸಿದ್ದು, ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.
ಸಲ್ಮಾನ್ ಖಾನ್ ಮನೆಗೆ ಗುಂಡು ಹಾರಿಸಿದ ಸಾಗರ್ ಪಾಲ್ ಮತ್ತು ವಿಕಿ ಗುಪ್ತಾರಿಗೆ ಬಂದೂಕು ನೀಡುವ ಜೊತೆಗೆ ಮುಂಬೈ ನಗರದಲ್ಲಿ ಉಳಿದುಕೊಳ್ಳಲು ವಸತಿ ವ್ಯವಸ್ಥೆಯ ಜೊತೆಗೆ ಆರ್ಥಿಕ ಸಹಾಯ ಮಾಡಿದ ಆರೋಪದ ಮೇಲೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯ ಮೊಹಮ್ಮದ್ ರಫೀಕ್ ಚೌಧರಿ ಎಂಬಾತನನ್ನು ರಾಜಸ್ಥಾನದ ನಾಗೌರ್‌ನಲ್ಲಿ ಬಂಧಿಸಲಾಗಿದೆ.
ಮತ ಪ್ರಮಾಣ ಘೋಷಣೆಯಲ್ಲಿ ವ್ಯತ್ಯಾಸ: ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ
ರಫೀಕ್ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಸುತ್ತ ಐದಕ್ಕೂ ಹೆಚ್ಚು ಬಾರಿ ತಿರುಗಾಡಿ ಮಾಹಿತಿ ಕಲೆ ಹಾಕಿದ್ದ. ಬಳಿಕ ಗುಂಡು ಹಾರಿಸುವ ಮುನ್ನಾ ದಿನ ಪನ್ವೆಲ್‌ನಲ್ಲಿ ಗುಂಡು ಹಾರಿಸಿದ ಪಾಲ್ ಮತ್ತು ಗುಪ್ತಾರ ಜೊತೆಗೇ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದುವರೆಗೂ ಪೊಲೀಸರು ಪ್ರಕರಣದಲ್ಲಿ ಇಬ್ಬರು ಗುಂಡು ಹಾರಿಸಿದವರನ್ನೂ ಸೇರಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಅನುಜ್ ಥಾಪನ್ ಎಂಬಾತ ಪೊಲೀಸ್ ಕಸ್ಟಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಮೇಲೆ ಏ.14ರ ಮುಂಜಾನೆ ನಾಲ್ಕು ಸುತ್ತು ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಆರೋಪಿ ಜೈಲಲ್ಲಿ ಆತ್ಮಹತ್ಯೆ ಯತ್ನ: ನಟ ಸಲ್ಮಾನ್ ಖಾನ್ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಗುಂಡಿಕ್ಕಿದ ಪ್ರಕರಣ ಸಂಬಂಧ ಬಂಧಿತ ಆರೋಪಿಯೊಬ್ಬ ಬುಧವಾರ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆರೋಪಿ ಅನುಜ್ ಥಾಪನ್ (23) ಕ್ರೈಂ ಬ್ರಾಂಚ್ ಲಾಕಪ್‌ನ ಶೌಚಾಲಯದಲ್ಲಿ ಬೆಡ್‌ಶೀಟ್ ಮೂಲಕ ಆತ್ಮಹತ್ಯೆಗೆ ಬುಧವಾರ ಯತ್ನಿಸಿದ್ದ.
ಕೂಡಲೇ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ನೀಡುತ್ತಿದ್ದ ನಡುವೆಯೇ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಮುಂಬೈನಲ್ಲಿರುವ ಆಜಾ಼ದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂಬ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್‌ಗೂ 26/11 ಉಗ್ರರಿಗೂ ನಂಟು ಇದೆಯೇ: ಪ್ರಧಾನಿ ಮೋದಿ
ಏನು ಪ್ರಕರಣ: ಏ.15ರ ಮುಂಜಾನೆ ಸಲ್ಮಾನ್ ಖಾನ್ ಅವರು ಮುಂಬೈನ ಬಾಂದ್ರಾದಲ್ಲಿ ವಾಸವಿರುವ ಅಪಾರ್ಟ್‌ಮೆಂಟ್ ಎದುರಿಗೆ ಬೈಕ್‌ನಲ್ಲಿ ಬಂದ ಬಂದೂಕುಧಾರಿಗಳಾದ ಸಾಗರ್ ಪಾಲ್ ಮತ್ತು ವಿಕಿ ಗುಪ್ತಾ, ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಬಳಿಕ ಪೊಲೀಸರು ಈಗ ಸಾವನ್ನಪ್ಪಿರುವ ಅನುಜ್ ಥಾಪನ್ ಮತ್ತು ಸೋನು ಕುಮಾರ್ ಬಿಷ್ಣೋಯಿ ಎಂಬುವವರನ್ನು ಶಸ್ತ್ರಾಸ್ತ್ರ ಪೂರೈಸಿರುವ ಆರೋಪದ ಮೇಲೆ ಪಂಜಾಬ್‌ನಲ್ಲಿ ಬಂಧಿಸಿದ್ದರು.