ಕೊರೋನಾ ಸಮರಕ್ಕೆ ಸರ್ಕಾರದ ದಿಟ್ಟ ಹೆಜ್ಜೆ: ಎಲ್ಲಾ ಶಾಸಕರ ವೇತನ ಕಡಿತ, ಸುಗ್ರೀವಾಜ್ಞೆ!

ಕೊರೋನಾ ಮಣಿಸಲು ಸರ್ಕಾರದ ದಿಟ್ಟ ಕ್ರಮ| ಸುಗ್ರೀವಾಜ್ಞೆ ಜಾರಿಗೊಳಿಸಿ ಶಾಸಕರ ವೇತನ ಕಡಿತಗೊಳಿಸುವ ನಿಯಮ ಜಾರಿ| ಮುಂದಿನ ಮಾರ್ಚ್‌ವರೆಗೂ ಈ ನಿಯಮ ಸನ್ವಯ

Salary contribution by Uttarakhand MLAs to fight COVID 19 made mandatory

ಡೆಹ್ರಾಡೂನ್(ಆ.15): ಕೊರೋನಾತಂಕ ದೇಶವನ್ನು ಕಂಗೆಡಿಸಿದೆ. ಹೀಗಿರುವಾಗ ಉತ್ತರಾಖಂಡ್ ಸರ್ಕಾರ ಕೊರೋನಾವನ್ನು ಮಣಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಸುಗ್ರೀವಾಜ್ಞೆಯೊಂದನ್ನು ಜಾರಿಗೊಳಿಸಿದ್ದು, ಇದರ ಅನ್ವಯ ಎಲ್ಲಾ ಶಾಸಕರ ವೇತನದಿಂದ ಶೇ. 30ರಷ್ಟು ಅನುದಾನ ಕೊರೋನಾ ಸಮರಕ್ಕೆ ನೀಡುವುದು ಖಡ್ಡಾಯಗೊಳಿಸಿದೆ.

ಪ್ಲೇಸ್‌ಮೆಂಟ್‌: ಪಿಇಎಸ್‌ ವಿವಿ 3 ವಿದ್ಯಾರ್ಥಿಗಳಿಗೆ ವರ್ಷಕ್ಕೆ 39 ಲಕ್ಷ ರು. ವೇತನ..!

ಗುರುವಾರ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿದೆ. ಇದರ ಅನ್ವಯ ಪ್ರತಿಯೊಬ್ಬ ಶಾಸಕನೂ ತಮ್ಮ ವೇತನದ ಶೇ. 30ರಷ್ಟು ಭಾಗವನ್ನು ಕೊರೋನಾ ಹೋರಾಟಕ್ಕೆ ಖಡ್ಡಾಯವಾಗಿ ನೀಡಬೇಕು. ಇದು ಏಪ್ರಿಲ್ 2020ರಿಂದ ಮಾರ್ಚ್ 2021ವರೆಗೆ ಜಾರಿಯಲ್ಲಿರಲಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಸೇವೆ ಸಲ್ಲಿಸದಿದ್ದರೂ ಬಿಎಂಟಿಸಿ ಎಲ್ಲ ಸಿಬ್ಬಂದಿಗೂ ವೇತನ!

ಈ ಸಭೆಯಲ್ಲಿ ಮೂರು ದಿನಗಳ ಸೆಪ್ಟೆಂಬರ್  23 ರಿಂದ 25ವರೆಗೆ ಡೆಹ್ರಾಡೂನ್‌ನಲ್ಲಿ ಮೂರು ದಿನಗಳ ವಿಶೇಷ ಅಧಿವೇಶನವನ್ನು ನಡೆಸುವ ಕುರಿತಾಗಿಯೂ ಉಲ್ಲೇಖಿಸಲಾಗಿದೆ.

Latest Videos
Follow Us:
Download App:
  • android
  • ios