* ಭೂಮಿ ಸಂರಕ್ಷಣೆ, ನಟ ಗೊರಾನ್‌ ವಿಸಂಜಿಕ್‌ ಜೊತೆ ಸಮಾಲೋಚನೆ* ಸ್ಲೊವೇನಿಯಾಕ್ಕೆ ತಲುಪಿದ ಸದ್ಗುರು* ಮಣ್ಣಿನ ರಕ್ಷಣೆ ಜಾಗೃತಿ ಅಭಿಯಾನ

ಬೆಂಗಳೂರು(ಮಾ.31): ಈಶ ಫೌಂಡೇಶನ್‌ (Isha Foundation) ಸಂಸ್ಥಾಪಕ ಸದ್ಗುರು (Sadguru) ‘ಸೇವ್‌ ಸಾಯಿಲ್‌’ (Save Oil) ಜಾಗೃತಿ ಅಭಿಯಾನ ಮಂಗಳವಾರ ಸ್ಲೊವೇನಿಯಾ ದೇಶದ ರಾಜಧಾನಿ ಲುಬ್ಲಿಯಾನಾ ತಲುಪಿದೆ. ಅಲ್ಲಿ ಭಾರತದ ರಾಯಭಾರಿ ಕಚೇರಿಗೆ ಭೇಟಿ ನೀಡುವ ಜತೆಗೆ ನಟ ಗೋರಾನ್‌ ವಿಸಂಜಿಕ್‌ ಅವರೊಂದಿಗೆ ಮಣ್ಣಿನ ರಕ್ಷಣೆ ಕುರಿತು ಸದ್ಗುರು ಸಮಾಲೋಚನೆ ನಡೆಸಿದರು.

ಅಭಿಯಾನವನ್ನು ಬರಮಾಡಿಕೊಂಡ ಭಾರತದ ರಾಯಭಾರಿ (Indian Ambasador) ನಮ್ರತಾ.ಎಸ್‌.ಕುಮಾರ್‌ ಹಾಗೂ ನಟ ಗೋರಾನ್‌ ವಿಸಂಜಿಕ್‌ ಅವರಿಗೆ ಸದ್ಗುರು, ಹಂತ ಹಂತವಾಗಿ ನಾಶವಾಗುತ್ತಿರುವ ಮಣ್ಣು, ಅದರ ಸವಕಳಿ ತಡೆಗಟ್ಟುವ ಕುರಿತು ವಿವರಿಸಿದರು. ನಾವು ಎಷ್ಟೇ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಕೃಷಿ ಪದ್ಧತಿ ಅಳವಡಿಸಿಕೊಂಡರು ಸಹ ಬೆಳೆ ಬೆಳೆಯಲು ಫಲವತ್ತಾದ ಮಣ್ಣು ಅಗತ್ಯವಿದೆ. ಮೊದಲು ಅದನ್ನು ಉಳಿಸಿಕೊಳ್ಳಲು ನಾವೆಲ್ಲರು ಜಾಗೃತರಾಗಬೇಕು. ಮಣ್ಣಿನ ಸಾಮರ್ಥ್ಯ, ಅದರ ಪ್ರಯೋಜನ ಹಾಗೂ ಮಣ್ಣಿನ ನಾಶದಿಂದಾಗುವ ದುಷ್ಪರಿಣಾಮ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ನಂತರ ಮಣ್ಣಿನ ಮಹತ್ವ, ಅಭಿಯಾನದ ಉದ್ದೇಶವನ್ನು ಪಸರಿಸಬೇಕಿದೆ ಎಂದು ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು.

ಲಂಡನ್‌ನಿಂದ ಭಾರತಕ್ಕೆ ಏಕಾಂಗಿಯಾಗಿ ಬೈಕ್ ಟ್ರಿಪ್ ಆರಂಭಿಸಿದ ಸದ್ಗುರು

ಜತೆಗೆ ಸ್ಲೊವೇನಿಯಾದ ಜನರಿಗೆ ಮಣ್ಣು ರಕ್ಷಣೆಯ ಬಗ್ಗೆ ಅರಿವು ಮೂಡಿಸಿದ್ದಾರೆ. ಮಾ.21ರಂದು ಅಭಿಯಾನ ಆರಂಭಿಸಿರುವ ಸದ್ಗುರು 100 ದಿನಗಳಲ್ಲಿ 26 ರಾಷ್ಟ್ರಗಳಿಗೆ ಏಕಾಂಗಿಯಾಗಿ ಚಲಿಸಿ, ಮಣ್ಣಿನ ಬಗ್ಗೆ ಅರಿವು ಮೂಡಿಸಲಿದ್ದಾರೆ.

YouTube video player;

ಮಣ್ಣಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾ.21​ರಿಂದ ಅಭಿಯಾನ ಆರಂಭ​ವಾ​ಗಿದೆ. ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗೆ ‘ಮಣ್ಣು ಉಳಿಸಿ’ (Save Soil) Byke Rally ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾರ‍ಯಲಿಯು ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಕೊನೆಗೊಳ್ಳಲಿದೆ. ಒಟ್ಟು ನೂರು ದಿನಗಳ ಬೈಕ್‌ ರಾರ‍ಯಲಿಯನ್ನು ಸದ್ಗುರು ಏಕಾಂಗಿಯಾಗಿ ಸಂಚರಿಸಲಿದ್ದಾರೆ. ಅಭಿಯಾನದಡಿ ಲಂಡನ್‌ನಿಂದ (London) ಕರ್ನಾಟಕದ (Karnataka) ಕಾವೇರಿವರೆಗಿನ (Cauvery) 30 ಸಾವಿರ ಕಿಲೋಮೀಟರ್‌ ಕ್ರಮಿಸುವ ಮೂಲಕ ಬರ್ಲಿನ್‌, ಪ್ಯಾರಿಸ್‌, ಜಿನೇವಾ ಸೇರಿದಂತೆ 27 ರಾಷ್ಟ್ರಗಳಲ್ಲಿ ಬೈಕ್‌ ರಾರ‍ಯಲಿ ನಡೆಸಿ ಸುಮಾರು 350 ಕೋಟಿ ಜನರಿಗೆ ಮಣ್ಣಿನ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಲಾಗಿದೆ.

 ‘ಮಣ್ಣಿನ ಸವಕಳಿಯು ಆಹಾರ ಉತ್ಪಾದನೆ (Food Production), ಹವಾಮಾನ ಸ್ಥಿರತೆ (Climate Consistency) ಮತ್ತು ಈ ಭೂಮಿಯ ಮೇಲಿನ ಜೀವಕ್ಕೆ ಅಪಾಯವನ್ನುಂಟು ಮಾಡುವ ಮಟ್ಟವನ್ನು ಸಮೀಪಿಸುತ್ತಿದೆ. ಭೂಮಿಯ ಮೇಲಿನ ಅತ್ಯಂತ ಉತ್ಸಾಹಭರಿತ ವಸ್ತು ಮಣ್ಣು ಎಂಬುದನ್ನು ನಾವು ಮರೆತಿದ್ದೇವೆ. ಮಣ್ಣು ಪ್ರತಿಯೊಬ್ಬರ ಜೀವನಕ್ಕೂ ಆಧಾರ. ಮಣ್ಣು ಉಳಿಸಿ ಎಂಬುದು ಜಾಗತಿಕ ಆಂದೋಲನವಾಗಿದ್ದು (Global Campign), ಕೃಷಿಯೋಗ್ಯ ಮಣ್ಣಿನಲ್ಲಿ ಸಾವಯವ ಅಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರಗಳು ರಾಷ್ಟ್ರೀಯ ನೀತಿಗಳನ್ನು ಜಾರಿಗೆ ತರುವಂತೆ ಮನವೊಲಿಸುವ ಅಭಿಯಾನವಿದು ಎಂದಿದ್ದಾರೆ ಸದ್ಗುರು ಜಗ್ಗಿ ವಾಸುದೇವ್.

35 ಸಾವಿರ ಕಿ.ಮೀ. ಏಕಾಂಗಿಯಾಗಿ ಸಂಚರಿಸಲಿದ್ದಾರೆ ಸದ್ಗುರು

ಮಣ್ಣಿನ ಸವಕಳಿಯಿಂದ ಯುವಪೀಳಿಗೆಗೆ ಮುಂದಿನ 50 ವರ್ಷದಲ್ಲಿ ಆಹಾರ ಸಮಸ್ಯೆ ಉಂಟಾಗಲಿದೆ. ನಿರ್ಲಕ್ಷಿಸಿದರೆ ಇದು ಜಾಗತಿಕ ಸಮಸ್ಯೆಯಾಗಲಿದೆ. ಹೀಗಾಗಿ ಮಣ್ಣಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ಈ ಕುರಿತು ಕೆಲವು ತಿಂಗಳ ಹಿಂದೆ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ, ಮಣ್ಣಿನ ರಕ್ಷಣೆಗಾಗಿ ನೀತಿ ರೂಪಿಸುವಂತೆ ಆಗ್ರಹಿಸಿದ್ದೇವೆ ಎಂದು ಸದ್ಗುರು ಜಗ್ಗಿ ವಾಸುದೇವ್‌ ಅವರು ತಿಳಿಸಿದ್ದಾರೆ.

ವಿವಿಧ ದೇಶಗಳಲ್ಲಿ ಸಂಚರಿಸಿ ಅಲ್ಲಿನ ಭೂಮಿ (Earth), ಕೃಷಿ ಪದ್ಧತಿಗನುಗುಣವಾಗಿ ಮಣ್ಣಿನ ರಕ್ಷಣೆ ಕುರಿತು ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಈ ಸಂಬಂಧ ಯುನೈಟೆಡ್‌ ನೇಷನ್ಸ್‌ ಕನ್‌ವೆನ್ಷನ್‌ ಕಾಂಬಟ್‌ ಡೆಸರ್ಟಿಫಿಕೇಷನ್‌ (ಯುಎನ್‌ಸಿಸಿಡಿ), ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ಮತ್ತು ವಿಶ್ವ ಆಹಾರ ಕಾರ್ಯಕ್ರಮ ಸಂಸ್ಥೆಗಳು ಅಭಿಯಾನದ ಪಾಲುದಾರಿಕೆ ಹೊಂದಿವೆ ಎಂದು ಈಶ ಫೌಂಡೇಷನ್‌ (Isha Foundation) ಪ್ರಕಟಣೆ ತಿಳಿಸಿದೆ.