Asianet Suvarna News Asianet Suvarna News

ತೆರೆದ ಅಯ್ಯಪ್ಪ ದೇಗುಲ, ಭಕ್ತರಿಗೆ ಪ್ರವೇಶ!

ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ| ಭಕ್ತರಿಗೆ ಸೋಮವಾರದಿಂದ ದರ್ಶನಕ್ಕೆ ಅವಕಾಶ

Sabarimala Temple Opens Devotees To Be Allowed From November 16 pod
Author
Bengaluru, First Published Nov 16, 2020, 1:32 PM IST

 ಶಬರಿಮಲೆ(ನ.16): ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಭಾನುವಾರ ಸಂಜೆ ತೆರೆದಿದೆ. ಭಕ್ತರಿಗೆ ಸೋಮವಾರದಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

"

ಭಾನುವಾರ ಸಂಜೆ 5 ಗಂಟೆಗೆ ಈವರೆಗೆ ಮುಖ್ಯ ಅರ್ಚಕರಾಗಿದ್ದ ಎ.ಕೆ. ಸುಧೀಂದ್ರ ನಂಬೂದರಿ ಅವರು ತಂತ್ರಿ ಕಂಡರಾರು ರಾಜೀವರು ಅವರ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲು ತೆರೆದರು. ಹೊಸ ಮುಖ್ಯ ಅರ್ಚಕ ವಿ.ಕೆ. ಜಯರಾಜ ಪೊಟ್ಟಿಹಾಗೂ ಅರ್ಚಕ ಎಂ.ಎನ್‌. ರಾಜಕುಮಾರ್‌ ಮೊದಲು 18 ಮೆಟ್ಟಿಲು ಏರಿ ಆಶೀರ್ವಾದ ಪಡೆದರು ಹಾಗೂ ಅರ್ಚಕತ್ವದ ಪದಗ್ರಹಣ ಮಾಡಿದರು. 62 ದಿನಗಳ ಅವಧಿಯ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆಗೆ ಇದರೊಂದಿಗೆ ಶ್ರೀಕಾರ ದೊರಕಿದೆ.

ಕೊರೋನಾ ಕಾರಣ ನಿತ್ಯ 1000 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ಪಂಪಾ-ನೀಲಕ್ಕಲ್‌ ಪ್ರವೇಶಕ್ಕೆ 48 ತಾಸು ಮುನ್ನ ಎಲ್ಲರಿಗೂ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ.

Follow Us:
Download App:
  • android
  • ios