ರಷ್ಯಾದ ಬಿಯರ್ ಕಂಪನಿಯೊಂದು ಮಹಾತ್ಮ ಗಾಂಧಿ ಅವರ ಚಿತ್ರ ಮತ್ತು ಸಹಿಯನ್ನು ಬಾಟಲಿ ಮೇಲೆ ಬಳಸಿ ಮಾರಾಟ ಮಾಡುತ್ತಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ನವದೆಹಲಿ: ರಷ್ಯಾದ ಬಿಯರ್‌ ಕಂಪನಿಯೊಂದು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತ್ರ ಮತ್ತು ಸಹಿಯನ್ನು ಬಾಟಲಿ ಮೇಲೆ ಬಳಸಿ ಮಾರಾಟಮಾಡುತ್ತಿದೆ. ಇದು ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದೆ. ರೆವರ್ಟ್‌ ಎಂಬ ಕಂಪನಿಯ ಬಿಯರ್‌ ಬಾಟಲಿಯಲ್ಲಿ ಗಾಂಧೀಜಿ ಅವರ ಚಿತ್ರ ಮತ್ತು ಸಹಿ ಇರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಚಿತ್ರಗಳು ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಿಗೆ ಮನವಿ ಮಾಡಿದ್ದಾರೆ. ಇದು ಭಾರತೀಯರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಕಿಡಿಕಾರಿದ್ದಾರೆ.

ವ್ಯಂಗ್ಯವೋ ಅಥವಾ ಅವಮಾನವೋ? 

ರಷ್ಯಾದ ಬಿಯರ್ ಬ್ರಾಂಡ್ ರೆವರ್ಟ್ ತನ್ನ ಪ್ಯಾಕೇಜಿಂಗ್‌ನಲ್ಲಿ ಮಹಾತ್ಮ ಗಾಂಧಿಯವರ ಚಿತ್ರ ಬಳಸಿರುವುದು ವಿವಾದ ಹುಟ್ಟುಹಾಕಿದೆ. ಮದ್ಯದ ಪಾನೀಯದ ಚಿತ್ರಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಸಾಮಾಜಿಕ ಕಾರ್ಯಕರ್ತ ಶ್ರೀ ಸುಪರ್ಣೋ ಸತ್ಪತಿ ಎಂಬುವವರು ಟ್ವಿಟರ್‌ ಎಕ್ಸ್‌ನಲ್ಲಿ ಬಿಯರ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಈ ವಿಷಯವನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಈ ವಿಷಯವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಚರ್ಚಿಸುವಂತೆ ಅವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. X ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಸತ್ಪತಿ ಅವರು ಹೀಗೆ ಬರೆದಿದ್ದಾರೆ, ರಷ್ಯಾದ ರಿವರ್ಟ್ ಗಾಂಧಿಜಿ ಹೆಸರಿನಲ್ಲಿ ಬಿಯರ್ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆ ಪ್ರಧಾನಿ @narendramodi ಜಿ ಅವರಿಗೆ ನನ್ನ ವಿನಮ್ರ ವಿನಂತಿಯೆಂದರೆ ತಮ್ಮ ಸ್ನೇಹಿತರಾದ @KremlinRussia_E ಅವರೊಂದಿಗೆ ಈ ವಿಷಯವನ್ನು ಚರ್ಚಿಸುವುದು ಒಳಿತು. 

ಮಹಾತ್ಮ ಗಾಂಧಿಯವರು ಜೀವನಪರ್ಯಂತ ಮದ್ಯಪಾನದಿಂದ ದೂರವಿರಬೇಕೆಂದು ಪ್ರತಿಪಾದಿಸುತ್ತಿದ್ದರು ಎಂಬುದನ್ನು ಪರಿಗಣಿಸಿ , ಮದ್ಯದ ಪಾನೀಯದ ಮೇಲೆ ಅವರ ಚಿತ್ರವನ್ನು ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: ಮದ್ಯಪಾನದ ದಾಸನಾಗಿದ್ದ BeerBiceps ರಣವೀರ್‌ ಅಲ್ಲಾಬಾದಿಯಾ ಶ್ರೀಮಂತ ಯೂಟ್ಯೂಬರ್‌ ಆಗಿದ್ದೇಗೆ? ಇವರ ಆಸ್ತಿ ಎಷ್ಟು?

 ವ್ಯಂಗ್ಯವೋ ಅಥವಾ ಅವಮಾನವೋ? ರಷ್ಯಾದ ಬಿಯರ್ ಬ್ರಾಂಡ್ ರೆವರ್ಟ್ ತನ್ನ ಪ್ಯಾಕೇಜಿಂಗ್‌ನಲ್ಲಿ ಮಹಾತ್ಮ ಗಾಂಧಿಯವರ ಚಿತ್ರ ಬಳಸಿರುವುದು ವಿವಾದ ಹುಟ್ಟುಹಾಕಿದೆ. ಮದ್ಯದ ಪಾನೀಯದ ಚಿತ್ರಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಸಾಮಾಜಿಕ ಕಾರ್ಯಕರ್ತ ಶ್ರೀ ಸುಪರ್ಣೋ ಸತ್ಪತಿ ಎಂಬುವವರು ಟ್ವಿಟರ್‌ ಎಕ್ಸ್‌ನಲ್ಲಿ ಬಿಯರ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಈ ವಿಷಯವನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಈ ವಿಷಯವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಚರ್ಚಿಸುವಂತೆ ಅವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. X ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಸತ್ಪತಿ ಅವರು ಹೀಗೆ ಬರೆದಿದ್ದಾರೆ, ರಷ್ಯಾದ ರಿವರ್ಟ್ ಗಾಂಧಿಜಿ ಹೆಸರಿನಲ್ಲಿ ಬಿಯರ್ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆ ಪ್ರಧಾನಿ @narendramodi ಜಿ ಅವರಿಗೆ ನನ್ನ ವಿನಮ್ರ ವಿನಂತಿಯೆಂದರೆ ತಮ್ಮ ಸ್ನೇಹಿತರಾದ @KremlinRussia_E ಅವರೊಂದಿಗೆ ಈ ವಿಷಯವನ್ನು ಚರ್ಚಿಸುವುದು ಒಳಿತು. ಮಹಾತ್ಮ ಗಾಂಧಿಯವರು ಜೀವನಪರ್ಯಂತ ಮದ್ಯಪಾನದಿಂದ ದೂರವಿರಬೇಕೆಂದು ಪ್ರತಿಪಾದಿಸುತ್ತಿದ್ದರು ಎಂಬುದನ್ನು ಪರಿಗಣಿಸಿ , ಮದ್ಯದ ಪಾನೀಯದ ಮೇಲೆ ಅವರ ಚಿತ್ರವನ್ನು ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Scroll to load tweet…