ಸ್ಪುಟ್ನಿಕ್ ಲಸಿಕೆಯೂ ಭಾರತದಲ್ಲಿ ಉತ್ಪಾದನೆ!
ರಷ್ಯಾದ ಸ್ಪುಟ್ನಿಕ್-5 ಕೊರೋನಾ ಲಸಿಕೆ ಶೇ.95ರಷ್ಟುಪರಿಣಾಮಕಾರಿ ಎಂಬುದು ಸಾಬೀತು| ಸ್ಪುಟ್ನಿಕ್ ಲಸಿಕೆಯೂ ಭಾರತದಲ್ಲಿ ಉತ್ಪಾದನೆ
ನವದೆಹಲಿ(ನ.28): ರಷ್ಯಾದ ಸ್ಪುಟ್ನಿಕ್-5 ಕೊರೋನಾ ಲಸಿಕೆ ಶೇ.95ರಷ್ಟುಪರಿಣಾಮಕಾರಿ ಎಂಬುದು ಸಾಬೀತಾದ ಬೆನ್ನಲ್ಲೇ, ಭಾರತದಲ್ಲಿ ಈ ಲಸಿಕೆಯ 10 ಕೋಟಿ ಡೋಸ್‌ಗಳನ್ನು ಉತ್ಪಾದಿಸಲು ಹೈದರಾಬಾದ್ ಮೂಲದ ಹೆಟೆರೊ ಔಷಧ ತಯಾರಿಕಾ ಕಂಪನಿಯ ಜೊತೆ ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಒಪ್ಪಂದ ಮಾಡಿಕೊಂಡಿದೆ.
ಇದರೊಂದಿಗೆ ಆಕ್ಸ್‌ಫರ್ಡ್ ವಿವಿಯ ಕೋವಿಶೀಲ್ಡ್, ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಬಳಿಕ ಮತ್ತೊಂದು ಲಸಿಕೆ ಭಾರತದಲ್ಲಿ ಉತ್ಪಾದನೆಯಾಗಲು ಹಾದಿ ಸುಗಮವಾದಂತಾಗಿದೆ.
2021ರ ಆರಂಭದಿಂದ ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಯನ್ನು ಉತ್ಪಾದಿಸಲಾಗುತ್ತದೆ. ಸದ್ಯ ಭಾರತದಲ್ಲಿ ಸ್ಪುಟ್ನಿಕ್-5 ಕೊರೋನಾ ಲಸಿಕೆಯನ್ನು ಡಾ. ರೆಡ್ಡೀಸ್ ಲ್ಯಾಬೊರೇಟರಿಸ್ ಸಹಭಾಗಿತ್ವದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಲಸಿಕೆಯ 2ನೇ ಹಾಗೂ 3ನೇ ಹಂತದ ಪರೀಕ್ಷೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ.
ಆರ್‌ಡಿಐಎಫ್ ಹಾಗೂ ಹೆಟೆರೊ ನಡುವಿನ ಒಪ್ಪಂದಿಂದಾಗಿ ಭಾರತದಲ್ಲೇ ಸ್ಪುಟ್ನಿಕ್-5 ಲಸಿಕೆಯನ್ನು ಉತ್ಪಾದಿಸಲು ಸಾಧ್ಯವಾಗಲಿದೆ.