ಭಾರತದಲ್ಲಿ ಮೊದಲ ಬಾರಿಗೆ ಶೇ.5ಕ್ಕಿಂತ ಕೆಳಗಿಳಿದ ಗ್ರಾಮೀಣ ಬಡತನ!
2011-12ರಲ್ಲಿ ಶೇ.25.7ರಷ್ಟಿದ್ದ ಗ್ರಾಮೀಣ ಬಡತನ 2024ರ ಮಾರ್ಚ್ ವೇಳೆಗೆ ಕೇವಲ ಶೇ.4.86ಕ್ಕೆ ಇಳಿದಿದೆ. ಹೀಗೆ ಬಡತನ ಪ್ರಮಾಣ ಶೇ.5ಕ್ಕಿಂತ ಕೆಳಗೆ ಇಳಿದಿದ್ದು ಇದೇ ಮೊದಲು ಎಂದು ತಿಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿ
ನವದೆಹಲಿ(ಜ.04): ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಯಶಸ್ವಿ ಜಾರಿಯ ಕಾರಣ, ದೇಶದಲ್ಲಿ ಬಡತನ ಪ್ರಮಾಣ ಇಳಿಕೆಯಾಗಿದೆ. ಅದರಲ್ಲೂ ಗ್ರಾಮೀಣ ಬಡತನದಲ್ಲಿ ಭಾರೀ ಇಳಿಕೆ ಕಂಡುಬಂದಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿ ತಿಳಿಸಿದೆ.
2011-12ರಲ್ಲಿ ಶೇ.25.7ರಷ್ಟಿದ್ದ ಗ್ರಾಮೀಣ ಬಡತನ 2024ರ ಮಾರ್ಚ್ ವೇಳೆಗೆ ಕೇವಲ ಶೇ.4.86ಕ್ಕೆ ಇಳಿದಿದೆ. ಹೀಗೆ ಬಡತನ ಪ್ರಮಾಣ ಶೇ.5ಕ್ಕಿಂತ ಕೆಳಗೆ ಇಳಿದಿದ್ದು ಇದೇ ಮೊದಲು ಎಂದು ವರದಿ ಹೇಳಿದೆ.
ಎಸ್‌ಬಿಐನ ಬಳಕೆ ವೆಚ್ಚ ವರದಿ ಅನ್ವಯ, 2011-12ರಲ್ಲಿ ನಗರ ಪ್ರದೇಶಗಳ ಬಡತನ ಶೇ.13.7ರಷ್ಟು ಇದ್ದಿದ್ದು 2024ರ ಮಾರ್ಚ್ ವೇಳೆಗೆ ಶೇ.4.09ಕ್ಕೆ ಇಳಿಕೆಯಾಗಿದೆ. ಗ್ರಾಮೀಣ ಬಡತನ ಶೇ.25.7ರಿಂದ ಶೇ.4.86ಕ್ಕೆ ಇಳಿದಿದೆ. ಒಟ್ಟಾರೆಯಾಗಿ ನೋಡಿದರೆ ಭಾರತದಲ್ಲಿ ಬಡತನ ಪ್ರಮಾಣ ಶೇ.4-4.5ರಷ್ಟಿದೆ ಎಂದು ವರದಿ ಹೇಳಿದೆ.
ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಪಡೆದ್ರೂ ಬಡತನ, ಹಣಕಾಸಿನ ಕಾರಣಕ್ಕೆ ಕೂಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿನಿ!
ಇಳಿಕೆಗೆ 2 ಕಾರಣ:
ಭೌತಿಕ ಮೂಲಸೌಲಭ್ಯಗಳ ಸೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲೂ ಸಂಚಾರ ವ್ಯವಸ್ಥೆ ಸುಧಾರಿಸುತ್ತಿದೆ. ಇದರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗುತ್ತಿದ್ದು, ಗ್ರಾಮೀಣ ಆದಾಯ ಅಸಮಾನತೆಯನ್ನೂ ಇದು ಇಳಿಸಲು ಕಾರಣವಾಗುತ್ತಿದೆ. ಇನ್ನು ಫಲಾನುಭವಿಗಳ ಖಾತೆಗೆ ನೇರ ಹಣ ಸಂದಾಯ(ಡಿಬಿಟಿ) ಹೆಚ್ಚುತ್ತಿರುವುದು ಗ್ರಾಮೀಣ ಮತ್ತು ನಗರಗಳ ನಡುವಿನ ಅಂತರ ಕಡಿಮೆ ಯಾಗಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಇದರಿಂದ ಸೋರಿಕೆ ಕಡಿಮೆಯಾಗಿ ಜನರ ಕೈಗೆ ನೇರವಾಗಿ ಹಣ ಸಿಗುತ್ತಿದ್ದು, ಅವರ ಕೊಂಡು ಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತಿದೆ ಎಂದು ಸಂಶೋಧನಾ ವರದಿ ಹೇಳಿದೆ.
ಗ್ರಾಮೀಣ ಪ್ರದೇಶಗಳ ಬಡತನ ರೇಖೆಗೆ 1632 ರು. ಮಾನದಂಡವಾಗಿ ಪರಿಗಣಿಸಿದ್ದರೆ, ನಗರ ಪ್ರದೇಶಗಳಲ್ಲಿ ಇದಕ್ಕೆ 1944 ರು.ಗಳನ್ನು ಮಾನದಂಡವಾಗಿ ಬಳಸಲಾಗಿತ್ತು.
ಬಡತನ ಇಳಿಕೆ ಹಾದಿ
* 2011-120 8.25.7 ರಷ್ಟಿದ್ದ ಗ್ರಾಮೀಣ ಬಡತನ
* 2024ರ ಮಾರ್ಚ್ ವೇಳೆಗೆ ಶೇ.4.86ಕ್ಕೆ ಇಳಿಕೆ
* 2011-12ರಲ್ಲಿ ನಗರ ಪ್ರದೇಶ ಗಳ ಬಡತನ ಶೇ.13.7 ಇತ್ತು
* 2024ರ ಮಾರ್ಚ್ ವೇಳೆಗೆ ಶೇ.4.09ಕ್ಕೆ ಪ್ರಮಾಣ ಇಳಿಕೆ
ಉಚಿತ ರೇಷನ್ ಹಂಚೋ ಬದಲು ಉದ್ಯೋಗ ಸೃಷ್ಟಿಗೆ ಒತ್ತು ನೀಡಿ: ಕೇಂದ್ರ, ರಾಜ್ಯಕ್ಕೆ ಸುಪ್ರೀಂ ಚಾಟಿ!
ನವದೆಹಲಿ: ಆಹಾರ ಭದ್ರತಾ ಕಾಯ್ದೆಯಡಿ ಆಹಾರ ಒದಗಿಸುವ ವಿಷಯದದಲ್ಲಿ 2024ರ ಡಿಸೆಂಬರ್ 9 ರಂದು ನಡೆದಿದ್ದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಬಡವರಿಗೆ ಉಚಿತ ಪಡಿತರವನ್ನು ನೀಡುವ ಬದಲು ಉದ್ಯೋಗ ಸೃಷ್ಟಿಗೆ ಕೇಂದ್ರೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇಷ್ಟು ದೊಡ್ಡ ಮಟ್ಟದಲ್ಲಿ ಪಡಿತರ ನೀಡುವ ಪದ್ದತಿ ಇನ್ನೂ ಮುಂದುವರಿದಿರುವುದು ಅಚ್ಚರಿ ಮೂಡಿದೆ. ಅದಲ್ಲದೆ, ಆಹಾರ ಒದಗಿಸುವ ಜವಾಬ್ದಾರಿ ಕೇಂದ್ರದ ಮೇಲೆ ಇದೆ ಎನ್ನುವ ಕಾರಣ, ಜನರನ್ನು ಸಮಾಧಾನ ಮಾಡಲು ರಾಜ್ಯ ಸರ್ಕಾರಗಳು ಪಡಿತರ ಚೀಟಿಗಳನ್ನು ಬೇಕಾಬಿಟ್ಟಿಯಾಗಿ ನೀಡೋದನ್ನು ಮುಂದುವರಿಸುತ್ತಲೇ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. "ಉಚಿತ ಪಡಿತರವನ್ನು ನೀಡುವಂತೆ ರಾಜ್ಯಗಳನ್ನು ಕೇಳಿದರೆ, ಅವರಲ್ಲಿ ಹಲವರು ಹಣಕಾಸಿನ ಮುಗ್ಗಟ್ಟಿನ ಕಾರಣದಿಂದ ಸಾಧ್ಯವಿಲ್ಲ ಎಂದು ಹೇಳುತ್ತಾರೆ ಮತ್ತು ಆದ್ದರಿಂದ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು" ಎಂದು ನ್ಯಾಯಾಲಯ ಹೇಳಿತ್ತು.
ಇಟ್ಟಿಗೆ ಹೊತ್ತ ಕೂಲಿಯವನ ಮಗ 22ನೇ ವಯಸ್ಸಿಗೆ ಐಪಿಎಸ್ ಅಧಿಕಾರಿ! ಸ್ಪೂರ್ತಿದಾಯಕ ಕಥೆ
ರಾಜ್ಯಗಳು ಪಡಿತರ ಚೀಟಿ ನೀಡುವುದನ್ನು ಮುಂದುವರಿಸಿದರೆ ಪಡಿತರಕ್ಕೆ ಹಣವನ್ನು ಪಾವತಿ ಮಾಡುವಂತೆ ಮಾಡಬೇಕು ಎಂದು ಹೇಳಿದೆ. ಕೇಂದ್ರದ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ ಸರ್ಕಾರವು 80 ಕೋಟಿ ಬಡವರಿಗೆ ಗೋಧಿ ಮತ್ತು ಅಕ್ಕಿಯ ರೂಪದಲ್ಲಿ ಉಚಿತ ಪಡಿತರವನ್ನು 80 ಕೋಟಿ ಬಡವರಿಗೆ ಒದಗಿಸುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಇದರ ನಡುವ ಮಾತನಾಡಿದ ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್, ಇಷ್ಟೆಲ್ಲಾ ಇದ್ದರೂ ಇನ್ನೂ ಸುಮಾರಿ 2-3 ಕೋಟಿ ಜನರು ಈ ಯೋಜನೆಯಿಂದ ಹೊರಗುಳಿದಿದ್ದಾರೆ ಎಂದರು. ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಗುರುತಿಸಲ್ಪಟ್ಟಿರುವ ಪಡಿತರ ಚೀಟಿಗಳು/ಆಹಾರ ಧಾನ್ಯಗಳಿಗೆ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಅರ್ಹರಾಗಿರುವವರಿಗೆ ಈ ಕಾರ್ಡ್‌ಗಳನ್ನು 2024ರ ನವೆಂಬರ್ 19ರ ಒಳಾಗಿ ನೀಡಿರಬಕು. ಅಂಥವರ ಸಮಸ್ಯೆಗಳನ್ನು ಮಾತ್ರವೇ ಕೋರ್ಟ್ ಆಲಿಸಲಿದೆ ಎಂದಿತು. ಸೋಮವಾರ ನ್ಯಾಯಾಲಯದ ಕಲಾಪದಲ್ಲಿ ಎಸ್ ಜಿ ಮೆಹ್ತಾ ಮತ್ತು ಅರ್ಜಿದಾರ ಭೂಷಣ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು.