ನವದೆಹಲಿ[ಜ.21]: ದೆಹಲಿಯ ಜೆಎನ್‌ಯು ವಿವಿಯಲ್ಲಿ ಕೆಲ ವರ್ಷಗಳ ಹಿಂದೆ ದೇಶವಿರೋಧಿ ಘೋಷಣೆ ಕೂಗಿದ ಬಳಿಕ, ಹೆಚ್ಚಾಗಿ ಬಳಕೆಯಾಗುತ್ತಿರುವ ‘ತುಕ್ಡೇ ತುಕ್ಡೇ ಗ್ಯಾಂಗ್‌’ ಪದ ಪ್ರಯೋಗದ ಮಾಹಿತಿಯೇ ಇಲ್ಲ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ನಾನು ಟುಕ್ಡೆ- ಟುಕ್ಡೆ ಗ್ಯಾಂಗ್‌ಗೆ ಬೆಂಬಲಿಸುವುದಿಲ್ಲ; ದೀಪಿಕಾಗೆ ಕಂಗನಾ ಟಾಂಗ್!

ತುಕ್ಡೇ ತುಕ್ಡೇ ಗ್ಯಾಂಗ್‌ ಅಂದರೆ ಯಾರು? ಅವರ ವಿರುದ್ಧ ಏನೇಲ್ಲಾ ಕ್ರಮ ಕೈಗೊಳ್ಳಲಾಗಿದೆ? ಆ ಪಟ್ಟಿಯಲ್ಲಿ ಯಾರಾರ‍ಯರು ಇದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸೋಮವಾರ ಉತ್ತರಿಸಿರುವ ಗೃಹ ಇಲಾಖೆ, ಭಾರತದ ಇಬ್ಭಾಗಕ್ಕೆ ಯತ್ನಿಸುತ್ತಿರುವ ವ್ಯಕ್ತಿಗಳು ಅಥವಾ ತುಕ್ಡೇ ತುಕ್ಡೇ ಗ್ಯಾಂಗ್‌ ಪದವನ್ನು ಯಾವುದೇ ತನಿಖಾ ಸಂಸ್ಥೆಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿಲ್ಲ ಎಂದಿದೆ.

ತುಕ್ಡೇ ತುಕ್ಡೇ ಗ್ಯಾಂಗ್‌ ಸದಸ್ಯ ಯಾರು?

ಇದರ ಬೆನ್ನಲ್ಲೇ, ಇತ್ತೀಚೆಗಷ್ಟೇ ದೆಹಲಿ ಚುನಾವಣಾ ರಾರ‍ಯಲಿ ವೇಳೆ ತುಕ್ಡೇ ತುಕ್ಡೇ ಗ್ಯಾಂಗ್‌ ಸದಸ್ಯರನ್ನು ಶಿಕ್ಷಿಸಬೇಕು ಎಂದಿರುವ ಸಚಿವ ಶಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಕೋರುವುದಾಗಿ ಆರ್‌ಟಿಐ ಕಾರ್ಯಕರ್ತ ಹೇಳಿದ್ದಾರೆ.