ನವದೆಹಲಿ(ಜ.08): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ 5 ಲಕ್ಷ ಹಳ್ಳಿಗಳ, 10 ಕೋಟಿ ಕುಟುಂಬಗಳಿಂದ ದೇಣಿಗೆ ಸಂಗ್ರಹಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ನಿರ್ಧರಿಸಿದೆ.

ಆರ್‌ಎಸ್‌ಎಸ್‌ ನೇತೃತ್ವದಲ್ಲಿ ಜನವರಿ 5ರಿಂದ 7ರ ವರೆಗೆ ಗುಜರಾತಿನಲ್ಲಿ ನಡೆದ ರಾಷ್ಟ್ರೀಯ ಸಹಕರಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್‌ ಹಿರಿಯ ಕಾರ‍್ಯಕರ್ತ, ‘ನಮ್ಮ ಕಾರ‍್ಯಕರ್ತರು 5 ಲಕ್ಷ ಹಳ್ಳಿಗಳಿಗೆ ತೆರಳಿ ದೇಗುಲ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲಿದ್ದಾರೆ.

ಸಿಎಂ ರೇಸ್‌ನಲ್ಲಿ ಸಿದ್ದು- ಡಿಕೆಶಿ ಅಷ್ಟೇ ಅಲ್ಲ ಬಹಳ ಜನ ಇದ್ದಾರೆ: ಬಹಿರಂಗಪಡಿಸಿದ ಕಾಂಗ್ರೆಸ್ ನಾಯಕ

ಕನಿಷ್ಠ 10 ರು., 100 ರು. 1000 ರು. ಎಷ್ಟಾದರೂ ದೇಣಿಗೆ ನೀಡಬಹುದು’ ಎಂದು ತಿಳಿಸಿದರು. ಇದಕ್ಕೂ ಮೊದಲು ವಿಶ್ವ ಹಿಂದೂ ಪರಿಷತ್‌ ಸಹ ಇದೇ ರೀತಿ ದೇಣಿಗೆ ಸಂಗ್ರಹಕ್ಕೆ ನಿರ್ಧರಿಸಿದ್ದು, ಆರ್‌ಎಸ್‌ಎಸ್‌ ಮತ್ತು ವಿಎಚ್‌ಪಿ ಜಂಟಿಯಾಗಿ ಜನವರಿ 15ರಿಂದ ದೇಣಿಗೆ ಸಂಗ್ರಹ ಅಭಿಯಾನ ಪ್ರಾರಂಭಿಸುವ ನಿರೀಕ್ಷೆ ಇದೆ.

ಆರ್‌ಎಸ್‌ಎಸ್-ವಿಎಚ್‌ಪಿಯ ಕಾರ್ಯಕ್ರಮವು ಜನವರಿ 15 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ರಾm ಭಕ್ತರಿಂದ ಸ್ವಯಂಪ್ರೇರಿತ ದೇಣಿಗೆ ಸ್ವೀಕರಿಸಲಾಗುವುದು, ಇದಕ್ಕಾಗಿ 10100 ಮತ್ತು 1000 ರೂಗಳ ಕೂಪನ್‌ಗಳು ಲಭ್ಯವಾಗುತ್ತವೆ ಎಂದು ಚಂಪತ್ ರಾಯ್ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.