ನಾಗ್ಪುರ(ಡಿ.20): ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ನ ಹಿರಿಯ ಸದಸ್ಯ ಮಾಧವ್‌ ಗೋವಿಂದ ವೈದ್ಯ (97) ಅವರು ಶನಿವಾರ ನಿಧನರಾದರು.

ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ವೈದ್ಯ ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ನಾಗ್ಪುರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು ಎಂದು ಮೊಮ್ಮಗ ವಿಷ್ಣು ವೈದ್ಯ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ವರ್ದಾ ಜಿಲ್ಲೆಯ ತರೋಡಾ ತೆಹ್ಸಿಲ್‌ನಲ್ಲಿ ಜನಿಸಿದ ವೈದ್ಯ ಅವರು, ಆರಂಭಿಕ ದಿನಗಳಿಂದಲೇ ಆರ್‌ಎಸ್‌ಜೊತೆ ಒಡನಾಟವನ್ನು ಹೊಂದಿದ್ದರು. 1943ರಲ್ಲಿ ಆರ್‌ಎಸ್‌ಎಸ್‌ ಸದಸ್ಯರಾಗಿ ಸೇರ್ಪಡೆಯಾದರು. ಬಳಿಕ ನಾಗ್ಪುರ ಮೂಲದ ತರುಣ್‌ ಭಾರತ್‌ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.

1978ರಿಂದ 1984ರವರೆಗೆ ಮಹಾರಾಷ್ಟ್ರ ವಿಧಾನಪರಿಷತ್‌ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.