ಪ್ರತಿ ದಂಪತಿ ಕನಿಷ್ಠ 3 ಮಕ್ಕಳ ಹೆರಬೇಕು : ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಜನಸಂಖ್ಯೆ ಬೆಳವಣಿಗೆ ದರವು 2.1ಕ್ಕಿಂತ ಕಡಿಮೆಯಾದರೆ, ಸಮಾಜವು ನಾಶವಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿ ದಂಪತಿ ಕನಿಷ್ಠ 3 ಮಕ್ಕಳ ಹೆರಬೇಕು ಎಂದು ಕರೆ ನೀಡಿದ್ದಾರೆ.
ನಾಗ್ಪುರ : ಜನಸಂಖ್ಯೆ ಬೆಳವಣಿಗೆ ದರವು 2.1ಕ್ಕಿಂತ ಕಡಿಮೆಯಾದರೆ, ಸಮಾಜವು ನಾಶವಾಗುತ್ತದೆ ಎಂದು ಭಾನುವಾರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರತಿ ದಂಪತಿ ಕನಿಷ್ಠ 3 ಮಕ್ಕಳ ಹೆರಬೇಕು ಎಂದು ಕರೆ ನೀಡಿದ್ದಾರೆ. ಇಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, ಪ್ರತಿ ಕುಟುಂಬವೂ ಒಂದು ಘಟಕವಾಗಿದ್ದು, ಪ್ರತೀ ಕುಟುಂಬವು ಸಮಾಜದ ಒಂದು ಭಾಗ ಎಂದು ಕುಟುಂಬದ ಮಹತ್ವವನ್ನು ಒತ್ತಿ ಹೇಳಿದರು.
ಸಮಾಜವು ಬದುಕಬೇಕೆಂದರೆ ನಾವು 2ಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕು, ಅಂದರೆ ಕನಿಷ್ಠ ಮೂರು ಜನ ಮಕ್ಕಳನ್ನು ಪಡೆಯಬೇಕು ಎಂದು ಜನಸಂಖ್ಯಾ ವಿಜ್ಞಾನ ಹೇಳುತ್ತದೆ. ಜನಸಂಖ್ಯಾ ಬೆಳವಣಿಗೆ ದರ 2.1ಕ್ಕಿಂತ ಕಡಿಮೆ ಆದರೆ ಸಮಾಜ ನಾಶವಾಗುತ್ತದೆ ಎಂದರು. ಇತ್ತೀಚೆಗೆ ಟಿಡಿಪಿ ನಾಯಕ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ದಕ್ಷಿಣ ಭಾರತದಲ್ಲಿ ಜನಸಂಖ್ಯಾ ಬೆಳವಣಿಗೆ ದರ 2.1ಕ್ಕಿಂತ ಕುಂಠಿತ ಆಗಿದೆ. ಇದು ಭವಿಷ್ಯದಲ್ಲಿ ಜನಸಂಖ್ಯಾ ಸಮತೋಲನದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದರು.
ಭಾರತದ ಒಟ್ಟು ಫಲವತ್ತತೆ ದರ (ಟಿಎಫ್‌ಆರ್) ಅಥವಾ ಮಹಿಳೆಯು ತನ್ನ ಜೀವಿತಾವಧಿಯಲ್ಲಿ ಜನ್ಮ ನೀಡುವ ಮಕ್ಕಳ ಸರಾಸರಿ ಸಂಖ್ಯೆಯು 2.2 ರಿಂದ 2 ಕ್ಕೆ ಇಳಿದಿದೆ ಎಂದು 2021 ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ದತ್ತಾಂಶ ಹೇಳಿತ್ತು.
ಒವೈಸಿ ವ್ಯಂಗ್ಯ:
ಪ್ರಧಾನಿ ನರೇಂದ್ರ ಮೋದಿ ಅವರು, ‘ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂದು ಲೋಕಸಭೆ ಚುನಾವಣೆ ವೇಳೆ ಕಿಡಿಕಾರಿದ್ದರು. ಈಗ ಭಾಗವತ್ 3 ಮಕ್ಕಳ ಹೆರಿ ಎನ್ನುತ್ತಿದ್ದಾರೆ. ಹೀಗಾಗಿ ಆರೆಸ್ಸೆಸ್‌ನವರು ಇನ್ನು ಮದುವೆ ಆಗಲು ಆರಂಭಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವ್ಯಂಗ್ಯವಾಡಿದ್ದಾರೆ.
ಮಹಿಳೆಯು ಜನ್ಮ ನೀಡುವ ಸರಾಸರಿ ಮಕ್ಕಳ ಪ್ರಮಾಣ 2ಕ್ಕಿಳಿದಿದೆ ಎಂದಿದ್ದ ಕೇಂದ್ರದ ಸರ್ವೇ- ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಬೆಳವಣಿಗೆಯಾಗಬೇಕು ಎಂದು ಹೇಳಿದ್ದ ಆಂಧ್ರ ಸಿಎಂ ನಾಯ್ಡು- ಇದೀಗ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ರಿಂದಲೇ ಜನಸಂಖ್ಯೆ ಹೆಚ್ಚಳಕ್ಕೆ ಕರೆ- ಪ್ರತಿ ದಂಪತಿ 2ಕ್ಕಿಂತ ಹೆಚ್ಚು ಮಕ್ಕಳ ಪಡೆಯಬೇಕು. ಕನಿಷ್ಠ 3 ಮಕ್ಕಳು ಇರಬೇಕು ಎಂದು ಸಲಹೆ - ಜನಸಂಖ್ಯಾ ಬೆಳವಣಿಗೆ ದರ 2.1ಕ್ಕಿಂತ ಕೆಳಕ್ಕೆ ಕುಸಿದರೆ ಸಮಾಜ ನಾಶವಾಗುತ್ತೆಂದು ಕಳವಳ.
ಇದನ್ನೂ ಓದಿ: RSS ದಸರಾ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿ ಮುಖ್ಯ ಅತಿಥಿಯಾದ ಮಹಿಳೆ