Asianet Suvarna News Asianet Suvarna News

ಕೊರೋ​ನಾಗೆ ಬಲಿ​ಯಾದ ಕುಟುಂಬಕ್ಕೆ 50 ಸಾವಿರ ರು.: SDRF ಮೂಲಕ ಪರಿ​ಹಾ​ರ!

* ಕೋವಿ​ಡ್‌​ನಿಂದ ಮೃತ​ಪ​ಟ್ಟ​ವರ ಕುಟುಂಬಕ್ಕೆ ಪರಿ​ಹಾರ 

* ಕೊರೋ​ನಾಗೆ ಬಲಿ​ಯಾದ ಕುಟುಂಬಕ್ಕೆ 50 ಸಾವಿರ ರು.

* ಎಸ್‌​ಡಿ​ಆ​ರ್‌​ಎಫ್‌ ಮೂಲಕ ಪರಿ​ಹಾ​ರ: ಅಧಿ​ಸೂ​ಚ​ನೆ ಪ್ರಕ​ಟ

Rs 50000 for each COVID 19 death States to pay kin from SDRF as per NDMA recommendation pod
Author
Bangalore, First Published Sep 27, 2021, 9:07 AM IST

ನವ​ದೆ​ಹ​ಲಿ(ಸೆ.27): ಕೊರೋನಾ ವೈರಸ್‌ಗೆ(Coronavirus) ಬಲಿಯಾದ ಸಂತ್ರಸ್ತರ ಕುಟುಂಬಕ್ಕೆ 50 ಸಾವಿರ ರು. ಪರಿಹಾರ ನೀಡುವು​ದಾಗಿ ಇತ್ತೀ​ಚೆಗೆ ಘೋಷಿ​ಸಿದ್ದ ಕೇಂದ್ರ ಸರ್ಕಾರ, ಭಾನು​ವಾರ ರಾತ್ರಿ ಈ ಸಂಬಂಧ ಅಧಿ​ಸೂ​ಚನೆ ಹೊರ​ಡಿ​ಸಿ​ದೆ.

ಕೋವಿ​ಡ್‌​ನಿಂದ ಮೃತ​ಪ​ಟ್ಟ​ವರ ಕುಟುಂಬ, ಕೋವಿಡ್‌ ಪರಿ​ಹಾರ ಕಾರ‍್ಯ​ಗ​ಳಲ್ಲಿ ನಿರ​ತ​ರಾಗಿ ಮೃತ​ಪ​ಟ್ಟ​ವರ ಕುಟುಂಬ ಹಾಗೂ ಕೊರೋನಾ ವ್ಯಾಧಿ ನಿಗ್ರ​ಹ​ದಲ್ಲಿ ನಿರ​ತ​ರಾ​ದ​ವರ ಕುಟುಂಬಗಳು ಪರಿ​ಹಾ​ರಕ್ಕೆ ಅರ್ಹ ಆಗ​ಲಿವೆ ಎಂದು ತಿಳಿ​ಸ​ಲಾ​ಗ​ಲಿ​ದೆ.

ಇದೇ ವೇಳೆ, ದೇಶ​ದಲ್ಲಿ ಕೊರೋ​ನಾ​ದಿಂದ ಸಾವು ಸಂಭ​ವಿ​ಸಿದ ಮೊದ​ಲ​ನೆಯ ವ್ಯಕ್ತಿಯ ಕುಟುಂಬ​ದಿಂದ ಹಿಡಿದು, ಇನ್ನು ಮುಂದಿನ ದಿನ​ಗ​ಳಲ್ಲಿ ಕೋವಿ​ಡ್‌ಗೆ ಬಲಿ​ಯಾ​ಗು​ವ​ವ​ರಿಗೂ ಪರಿ​ಹಾರ ಲಭಿ​ಸ​ಲಿದೆ. ಕೊರೋ​ನಾ​ವನ್ನು ದುರಂತ ಎಂದು ಮಾಡಿ​ರುವ ಘೋಷಣೆ ಹಿಂಪ​ಡೆ​ಯು​ವ​ವ​ರೆಗೆ ಅಥ​ವಾ ಮುಂದಿನ ಆದೇ​ಶ​ದ​ವ​ರೆಗೆ ಪರಿ​ಹಾರ ವಿತ​ರಣೆ ಮುಂದು​ವ​ರಿ​ಯ​ಲಿದೆ ಎಂದು ಅಧಿ​ಸೂ​ಚನೆ ತಿಳಿ​ಸಿ​ದೆ.

ಇದೇ ವೇಳೆ, ಪರಿ​ಹಾರ ನೀಡಿ​ಕೆ​ಯನ್ನು ರಾಜ್ಯ ವಿಪತ್ತು ಪರಿ​ಹಾರ ನಿಧಿ (ಎ​ಸ್‌​ಡಿ​ಆ​ರ್‌​ಎ​ಫ್‌) ಮೂಲಕ ನೀಡ​ಲಾ​ಗು​ತ್ತದೆ ಎಂದು ಸ್ಪಷ್ಟ​ಪ​ಡಿ​ಸ​ಲಾ​ಗಿ​ದೆ. ಈ ಮೂಲಕ ಪರಿ​ಹಾರ ನೀಡಿಕೆ ಹೊಣೆ​ಯನ್ನು ರಾಜ್ಯ​ಗ​ಳಿಗೆ ವಹಿ​ಸ​ಲಾ​ಗಿ​ದೆ.

ಕೊರೋನಾಕ್ಕೆ ಬಲಿಯಾದವರಿಗೆ ತಲಾ 4 ಲಕ್ಷ ರು. ಪರಿಹಾರ ನೀಡಬೇಕು ಎಂದು ಕೋರಿ ಹಲವು ಅರ್ಜಿ ಸಲ್ಲಿಕೆಯಾಗಿದ್ದವು. ಆದರೆ 50 ಸಾವಿರ ರು. ನೀಡಲು ಕೊನೆಗೆ ಕೇಂದ್ರ ಒಪ್ಪಿ​ತ್ತು.

50,000 ಕೋವಿಡ್‌ ನೆರವು: ಬೇರಾವ ದೇಶ ಮಾಡಿಲ್ಲ, ಕೇಂದ್ರಕ್ಕೆ ಸುಪ್ರೀಂ ಶ್ಲಾಘನೆ!

ಕೋವಿಡ್‌ನಿಂದ(Covid 19) ಮೃತರಾದವರ ಕುಟುಂಬಕ್ಕೆ 50,000 ರು. ಪರಿಹಾರ ನೀಡುವ ಕೇಂದ್ರ ಸರ್ಕಾರದ ನಿಲುವಿಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌(Supreme Court), ಈ ವಿಷಯದಲ್ಲಿ ಭಾರತ ಏನು ಮಾಡಿದೆಯೋ ಅದನ್ನು ಬೇರಾವುದೇ ದೇಶಕ್ಕೂ ಮಾಡಲು ಸಾಧ್ಯವಾಗಿಲ್ಲ ಎಂಬುದನ್ನು ನ್ಯಾಯಾಂಗ ಗಮನಿಸಿದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದೆ.

ಅನೇಕ ಕುಟುಂಬಗಳ ಕಣ್ಣೀರು ಒರೆಸಲು ಪ್ರಯತ್ನ ನಡೆದಿದೆ ಎಂಬ ಬಗ್ಗೆ ನಮಗೆ ಸಂತೋಷವಿದೆ. ಸಂತ್ರಸ್ತ ಕುಟುಂಬಕ್ಕೆ ಇದರಿಂದ ಕೊಂಚವಾದರೂ ನೆಮ್ಮದಿ ಸಿಗಬಹುದು. ಅಪಾರ ಜನಸಂಖ್ಯೆಯುಳ್ಳ ದೇಶವಾಗಿರುವುದರಿಂದ ಬಹಳ ಸಮಸ್ಯೆಗಳಿದ್ದರೂ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದನ್ನು ಬೇರಾವುದೇ ದೇಶಕ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಗುರುವಾರ ನ್ಯಾ.ಎಂ.ಆರ್‌.ಶಾ ಹಾಗೂ ನ್ಯಾ.ಎ.ಎಸ್‌.ಬೋಪಣ್ಣ ಅವರ ಪೀಠ ಶ್ಲಾಘಿಸಿತು.

ಕೋವಿಡ್‌ನಿಂದ(Covid 19) ಮೃತರಾದವರ ಕುಟುಂಬಕ್ಕೆ ಆರ್ಥಿಕ ಪರಿಹಾರ ನೀಡಬೇಕೆಂಬ ಅರ್ಜಿಗಳ ವಿಚಾರಣೆಯನ್ನು ಕೋರ್ಟ್‌ ನಡೆಸುತ್ತಿದೆ. ಬುಧವಾರವಷ್ಟೇ ಆ ಬಗ್ಗೆ ಅಫಿಡವಿಟ್‌ ಸಲ್ಲಿಸಿದ್ದ ಕೇಂದ್ರ ಸರ್ಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಮೃತರ ಕುಟುಂಬಕ್ಕೆ 50,000 ರು. ಪರಿಹಾರ ನೀಡಲು ಶಿಫಾರಸು ಮಾಡಿದೆ ಎಂದು ತಿಳಿಸಿತ್ತು.

Follow Us:
Download App:
  • android
  • ios