Asianet Suvarna News Asianet Suvarna News

ಪುಟ್ಟ ಮಗುವಿನ ಜೀವ ಉಳಿಸಲು 18 ಕೋಟಿ ಕ್ರೌಡ್‌ ಫಂಡಿಂಗ್‌!

* ಅಪರೂಪದ ಕಾಯಿಲೆಯೊಂದರಿಂದ ಬಳಲುತ್ತಿರುವ ಬಡ ಕುಟುಂಬದ ಒಂದೂವರೆ ವರ್ಷದ ಮಗು

* ಪುಟ್ಟ ಮಗುವಿನ ಜೀವ ಉಳಿಸಲು 18 ಕೋಟಿ ಕ್ರೌಡ್‌ ಫಂಡಿಂಗ್

* ವಿಶ್ವದಲ್ಲೇ ದುಬಾರಿ ಎನ್ನಿಸಿದ 44 ಎಂ.ಎಲ್‌. ಮೌಲ್ಯ 18 ಕೋಟಿ

Rs 18 crore raised via crowdfunding To save 18 month old child pod
Author
Bangalore, First Published Jul 6, 2021, 8:30 AM IST

 

ಪಯಂಗಾಡಿ(ಜು.06): ಅಪರೂಪದ ಕಾಯಿಲೆಯೊಂದರಿಂದ ಬಳಲುತ್ತಿರುವ ಬಡ ಕುಟುಂಬದ ಒಂದೂವರೆ ವರ್ಷದ ಮಗುವಿನ ಜೀವ ಉಳಿಸಲು ಜನರೆಲ್ಲಾ ಸೇರಿ 18 ಕೋಟಿ ರು. ಕಲೆಹಾಕಿದ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ.

ಕಣ್ಣೂರು ಜಿಲ್ಲೆಯ ಕಲಶ್ಶೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ರಫೀಕ್‌-ಮರಿಯಮ್‌ ದಂಪತಿಗೆ ಮೂರು ಮಕ್ಕಳಿದ್ದಾರೆ. ಅವರ ಮೂರು ಮಕ್ಕಳ ಪೈಕಿ 15 ವರ್ಷದ ಅರ್ಫಾ ಹಿರಿಯಾಕೆ ಸ್ಪೈನಲ್‌ ಮಸ್ಕು್ಯಲರ್‌ ಅಟ್ರೋಪಿ ಎಂಬ ಕಾಯಿಲಿಗೆ ತುತ್ತಾಗಿ ಓಡಾಡದ ಸ್ಥಿತಿಯಲ್ಲಿದ್ದಾಳೆ. ಇದೀಗ ಈ ದಂಪತಿಯ ಒಂದೂವರೆ ವರ್ಷದ ಮಗು ಮಹಮ್ಮದ್‌ಗೂ ಅದೇ ಸಮಸ್ಯೆ ಕಾಣಿಸಿಕೊಂಡಿದೆ. ಅದನ್ನು ತಕ್ಷಣವೇ ನಿವಾರಿಸಲು ಝೋಲ್‌ಜೆನ್ಸ್ಮಾ ಎಂಬ ಕೇವಲ 44 ಎಂ.ಎಲ್‌.ನ ಔಷಧ ಬೇಕು. ವಿಶ್ವದಲ್ಲೇ ದುಬಾರಿ ಎನ್ನಿಸಿದ ಇದರ ಮೌಲ್ಯ 18 ಕೋಟಿ.

ಆದರೆ ದಂಪತಿ ಬಳಿ ಅಷ್ಟುಹಣವಿಲ್ಲ. ಈ ವಿಷಯ ತಿಳಿದ ಸ್ಥಳೀಯ ಶಾಸಕ ವಿಜಿಲ್‌ ಮತ್ತು ಗ್ರಾಮಸ್ಥರು ಈ ಬಗ್ಗೆ ಅನಿವಾಸಿ ಭಾರತೀಯರು ಸೇರಿದಂತೆ ಎಲ್ಲರಿಂದ ನೆರವು ಕೋರಿದ್ದರು. ಅಚ್ಚರಿ ಎಂಬಂತೆ ಇದೀಗ ಕೆಲವೇ ದಿನಗಳಲ್ಲಿ 18 ಕೋಟಿ ರು. ಹಣ ಸಂಗ್ರಹವಾಗಿದೆ. ಹೀಗಾಗಿ ಮಹಮ್ಮದ್‌ ಮುಂದೆ ತನ್ನ ಸೋದರಿಯಂತೆ ಸಮಸ್ಯೆ ಎದುರಿಸಬೇಕಾದ ಸಂಕಟದಿಂದ ಪಾರಾಗಿದ್ದಾನೆ.

Follow Us:
Download App:
  • android
  • ios