ಸಂಸದಗೆ ಗಡ್ಕರಿ ತೂಕ ಇಳಿಕೆ ಚಾಲೆಂಜ್: 15 ಕೇಜಿ ತೂಕ ಇಳಿಸಿ 15,000 ಕೋಟಿ ಕೇಳಿದ ಅನಿಲ್‌!

* ಪ್ರತಿ ಕೇಜಿ ತೂಕ ಇಳಿಕೆಗೆ 1000 ಕೋಟಿ ಅನುದಾನ: ಗಡ್ಕರಿ ಸವಾಲು

* ಗಡ್ಕರಿ ತೂಕ ಇಳಿಕೆ ಚಾಲೆಂಜ್‌: 15 ಕೇಜಿ ತೂಕ ಇಳಿಸಿದ ಸಂಸದ

* 15 ಕೇಜಿ ತೂಕ ಇಳಿಸಿದ್ದಕ್ಕೆ 15,000 ಕೋಟಿ ಕೇಳಿದ ಅನಿಲ್‌

Rs 1000 Crore For Each Kg Lost: Nitin Gadkari Funding Dare For BJP MP pod

ಉಜ್ಜೈನಿ(ಜೂ.12): ಪ್ರತಿ ಕೇಜಿ ತೂಕ ಇಳಿಸಿಕೊಂಡಂತೆ 1000 ಕೋಟಿ ರು. ಅನುದಾನವನ್ನು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಾಗಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ನಿತೀನ್‌ ಗಡ್ಕರಿ ಅವರು ಭರವಸೆ ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದ ಉಜ್ಜಯಿನಿಯ ಲೋಕಸಭಾ ಸದಸ್ಯ ಅನಿಲ್‌ ಫಿರೋಜಿಯಾ ತಾವು 15 ಕೇಜಿ ತೂಕ ಇಳಿಸಿಕೊಂಡಿದ್ದಾರೆ.

ಫೆಬ್ರವರಿಯಲ್ಲಿ ಗಡ್ಕರಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲು ಆಗಮಿಸಿದ ಸಂದರ್ಭದಲ್ಲಿ ಫಿರೋಜಿಯಾ ಅವರಿಗೆ ತೂಕ ಇಳಿಕೆ ಮಾಡಿಕೊಳ್ಳುವ ಚಾಲೆಂಜ್‌ ನೀಡಿದ್ದರು. 127 ಕೇಜಿ ತೂಕವುಳ್ಳ ಫಿರೋಜಿಯಾ ಅವರಿಗೆ ತೂಕವನ್ನು ಇಳಿಸಿಕೊಳ್ಳಲು ಪ್ರೇರಣೆ ನೀಡುವುದಕ್ಕಾಗಿ ಪ್ರತಿ ಕೇಜಿ ತೂಕ ಇಳಿಸಿಕೊಂಡಿದ್ದರ ಬದಲು ಅವರ ಕ್ಷೇತ್ರಕ್ಕೆ 1000 ಕೋಟಿ ರು. ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಾಗಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು.

‘ಈ ಸವಾಲಿನಂತೆ ಡಯೆಟ್‌, ಯೋಗ, ಸೈಕ್ಲಿಂಗ್‌ ಹಾಗೂ ದೈಹಿಕ ಕಸರತ್ತನ್ನು ಮಾಡಿ ಕಳೆದ 4 ತಿಂಗಳುಗಳಲ್ಲಿ 15 ಕೇಜಿ ತೂಕ ಇಳಿಸಿಕೊಂಡಿದ್ದೇನೆ. ಹೀಗಾಗಿ ಮಾತಿನಂತೆ ಸಚಿವರು ಕ್ಷೇತ್ರಕ್ಕೆ 15000 ಕೋಟಿ ರು. ಕಾಮಗಾರಿಗಾಗಿ ಅನುದಾನ ಮಂಜೂರು ಮಾಡಬೇಕೆಂದು ಕೋರುತ್ತೇನೆ’ ಎಂದು ಫಿರೋಜಿಯಾ ಹೇಳಿದ್ದಾರೆ.

Latest Videos
Follow Us:
Download App:
  • android
  • ios