ಕೇರಳ ಪ್ರವಾಸೋದ್ಯಮ ಟ್ವೀಟ್‌ನಲ್ಲಿ ಬೀಫ್: ಊಟಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂದ ಸಚಿವ!
ಪ್ರವಾಸೋದ್ಯಮ ಇಲಾಖೆಯಲ್ಲಿ ಬೀಫ್ ರೆಸಿಪಿ| ಸಂಕ್ರಾಂತಿ ದಿನವೇ ಬೀಫ್ ರೆಸಿಪಿ ಟ್ವೀಟ್ ಮಾಡಿದ ಕೇರಳ ಪ್ರವಾಸೋದ್ಯಮ ಇಲಾಖೆ| ಕೇರಳ ಪ್ರವಾಸೋದ್ಯಮ ಇಲಾಖೆಯ ಟ್ವೀಟ್’ಗೆ ಭಾರೀ ವಿರೋಧ| ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಹರಿಹಾಯ್ದ ನೆಟ್ಟಿಗರು| ಊಟಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂದ ಪ್ರವಾಸೋಧ್ಯಮ ಸಚಿವ ಕೆ. ಸುರೇಂದ್ರನ್| ಕೇರಳ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ಹರಿಹಾಯ್ದ ಶೋಭಾ ಕರಂದ್ಲಾಜೆ|
ತಿರುವನಂತಪುರಂ(ಜ.17): ಕೇರಳ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಟ್ವಿಟ್ಟರ್ ಅಕೌಂಟ್’ನಲ್ಲಿ ಗೋಮಾಂಸ ಖಾದ್ಯದ ಮಾಹಿತಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ರಾಜ್ಯದ ಜನಪ್ರಿಯ ಬೀಫ್ ಫ್ರೈ ಖಾದ್ಯದ ಫೋಟೋವೊಂದು ಟ್ವೀಟ್ ಮಾಡಿರುವ ಕೇರಳ ಪ್ರವಾಸೋದ್ಯಮ ಇಲಾಖೆ, ಇದನ್ನು ತಯಾರಿಸುವ ರೆಸಿಪಿಯ ಲಿಂಕ್ ಕೂಡ ನೀಡಿದೆ.
ಆದರೆ ಈ ಟ್ವೀಟ್’ಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕೆಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಕರ ಸಂಕ್ರಾಂತಿ ದಿನದಂದೇ ಬೀಫ್ ರೆಸಿಪಿ ಕುರಿತು ಟ್ವೀಟ್ ಮಾಡಿರುವ ಕೇರಳ ಸರ್ಕಾರ ಹಿಂದೂ ವಿರೋಧಿ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾರೆ.
ಗೋಮಾಂಸ ಸೇವನೆಯಿಂದ ಹೆಚ್ಚುತ್ತಿದೆ ಕಾಳ್ಗಿಚ್ಚು; ಕಾಡಿಗೆ ಇಡಬೇಡಿ ಕಿಚ್ಚು!
ಊಟಕ್ಕೂ, ಧರ್ಮಕ್ಕೂ ಸಂಬಂಧವಿಲ್ಲ ಎಂದ ಸಚಿವ:
ಇನ್ನು ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳ ಪ್ರವಾಸೋದ್ಯಮ ಸಚಿವ ಕೆ. ಸುರೇಂದ್ರನ್, ಊಟಕ್ಕೂ ಧರ್ಮಕ್ಕೂ ತಳುಕು ಹಾಕುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಪ್ರವಾಸಿಗರನ್ನು ಸೆಳೆಯಲು ಕೇರಳದ ಸಾಂಪ್ರದಾಯಿಕ ಖಾದ್ಯಗಳ ಕುರಿತು ಇಲಾಖೆಯ ಟ್ವೀಟ್’ನಲ್ಲಿ ಮಾಹಿತಿ ನೀಡಲಾಗಿದ್ದು, ಯಾವುದೇ ಧರ್ಮದ ನಂಬಿಕೆಗಳಿಗೆ ನೋವನ್ನುಂಟು ಮಾಡುವ ಉದ್ದೇಶವಿಲ್ಲ ಎಂದು ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.
ಕೇರಳ ಸರ್ಕಾರದ ವಿರುದ್ಧ ಹತರಿಹಾಯ್ದ ಶೋಭಾ ಕರಂದ್ಲಾಜೆ:
ಇನ್ನು ಕೇರಳ ಪ್ರವಾಸೋದ್ಯಮ ಟ್ವೀಟ್ ವಿರುದ್ಧ ಕಿಡಿಕಾರಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಕೇರಳದ ಕಮ್ಯೂನಿಸ್ಟ್ ಸರ್ಕಾರ ಹಿಂದೂಗಳ ಭಾವನೆಗೆ ಧಕ್ಕೆ ತರುವಲ್ಲಿ ನಿರತವಾಗಿದೆ ಎಂದು ಹರಿಹಾಯ್ದಿದ್ದಾರೆ.