ಕೋಳಿ ವಿಐಪಿ ಆದ ರೋಚಕ ಕತೆ, ದಿನದ 24 ಗಂಟೆ ಪಂಜಾಬ್ ಪೊಲೀಸ್ ಭದ್ರತೆ!
ಇದು ವಿಚಿತ್ರ ಆದರೂ ಸತ್ಯ. ಕೋಳಿಗೆ ಕಾಳು ಸೇರಿದಂತೆ ಆಹಾರ ನೀಡುತ್ತಾ, ದಿನದ 24 ಗಂಟೆ ಪಂಜಾಬ್ ಪೊಲೀಸರು ಭದ್ರತೆ ನೀಡುತ್ತಿದ್ದಾರೆ. ಶಿಫ್ಟ್ ರೀತಿಯಲ್ಲಿ ಪೊಲೀಸರು ಕೋಳಿಯನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕು ಸಾಮಾನ್ಯ ಕೋಳಿಯೊಂದು ವಿಐಪಿ ಆಗಿದ್ದು ಹೇಗೆ?
ಬಥಿಂದ(ಜ.25) ಭಾರತದಲ್ಲಿ ರಾಜಕಾರಣಿಗಳು, ಸೆಲೆಬ್ರೆಟಿಗಳು, ಜೀವ ಬೆದರಿಕೆ ಇರುವ ವ್ಯಕ್ತಿಗಳಿಗೆ ಭದ್ರತೆ ನೀಡಲಾಗುತ್ತದೆ. ಪೊಲೀಸ್, ಸ್ಪೆಷಲ್ ಫೋರ್ಸ್, ಎನ್‌ಎಸ್‌ಜಿ ಸೇರಿದಂತೆ ಹಲವು ಭದ್ರತಾ ಎಜೆನ್ಸಿಗಳು ಹಲವು ಸ್ತರದಲ್ಲಿ ಭದ್ರತೆ ನೀಡಲಿದೆ. ಆದರೆ ಪಂಜಾಬ್‌ನಲ್ಲಿ ಕೋಳಿಗೆ ದಿನದ 24 ಗಂಟೆಯೂ ಭದ್ರತೆ ನೀಡಲಾಗುತ್ತಿದೆ. ಪ್ರತಿ ದಿನ ಕೋಳಿಯ್ನು ಆರೈಕೆ ಮಾಡುತ್ತಾ, ಶಿಫ್ಟ್ ರೀತಿಯಲ್ಲಿ ದಿನದ 24 ಗಂಟೆ ಸೂಕ್ತ ಭದ್ರತೆ ನೀಡಲಾಗುತ್ತಿದೆ. ಇದೀಗ ಪಂಜಾಬ್‌ನಲ್ಲಿ ಹುಟ್ಟಿದರೆ ಈ ರೀತಿ ವಿಐಪಿ ಕೋಳಿಯಾಗಿ ಹುಟ್ಟಬೇಕು ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಸಾಮಾನ್ಯ ಕೋಳಿ ವಿವಿಐ ಆದ ಹಿಂದೆ ರೋಚಕ ಕತೆಯೊಂದಿದೆ.
ಪಂಜಾಬ್‌ನ ಬಾಥಿಂದ ಗ್ರಾಮದಲ್ಲಿನ ಕೋಳಿ ಇದೀಗ ಇದೇ ಗ್ರಾಮದಲ್ಲಿರುವ ಬಾಥಿಂದ ಪೊಲೀಸ್ ಠಾಣೆಯಲ್ಲಿ ವಿಐಪಿಯಾಗಿದೆ. ಕರ್ನಾಟಕ ಕೆಲ ಭಾಗದಲ್ಲಿ ಕದ್ದುಮುಚ್ಚಿ ನಡೆಯುವ ಕೋಳಿ ಅಂಕ ಪಂಜಾಬ್‌ನಲ್ಲೂ ಭಾರಿ ಜನಪ್ರಿಯ. ಕಾಕ್‌ಫೈಟ್ ಎಂದೇ ಜನಪ್ರಿಯವಾಗಿರುವ ಈ ಕೋಳಿ ಅಂಕವನ್ನು ಬಾಥಿಂದ ಗ್ರಾಮದಲ್ಲಿ ಆಯೋಜಿಸಾಗಿತ್ತು. ಈ ಮಾಹಿತಿ ಪಡೆದ ಪೊಲೀಸರು ನೇರವಾಗಿ ದಾಳಿ ಮಾಡಿದ್ದಾರೆ.
ಈ ಹಳ್ಳೀಲಿ ಯಾರೂ ಮಂಚದ ಮೇಲೆ ಮಲಗೋಲ್ಲ, ಹುಂಜವನ್ನೂ ಸಾಕೋಲ್ಲ!
ಬಾಥಿಂದ ಗ್ರಾಮದಲ್ಲಿ ಅತೀ ದೊಡ್ಡ ಕೋಳಿಅಂಕ ಆಯೋಜಿಲಾಗಿತ್ತು. ಪೊಲೀಸರ ದಾಳಿಯಾಗುತ್ತಿದ್ದಂತೆ ಹಲವರು ಕಾಲ್ಕಿತ್ತಿದ್ದಾರೆ. ಕೋಳಿ ಅಂಕಕ್ಕೆ ಆಗಮಿಸಿದ ಹಲವರು ತಮ್ಮ ತಮ್ಮ ಕೋಳಿಗಳನ್ನ ಹಿಡಿದು ಪಲಾಯಾನ ಮಾಡಿದ್ದಾರೆ. ಕೋಳಿ ಅಂಕ ಆಯೋಜಕ ಸೇರಿದಂತೆ ಮೂವರು ಆರೋಪಿಗಳ ಪೈಕಿ ಒರ್ವನನ್ನು ಬಂಧಿಸಿದ್ದಾರೆ. ಇದೇ ವೇಳೆ ಒಂದು ಕೋಳಿ ಹಾಗೂ 12 ಟ್ರೋಫಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಕೋಳಿ ಅಂಕ ಪ್ರಕರಣದಲ್ಲಿ ಬಂಧಿತ ಓರ್ವ ಆರೋಪಿ, ಕೋಳಿ ಹಾಗೂ 12 ಟ್ರೋಫಿಗಳನ್ನು ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪೊಲೀಸರ ವಶದಲ್ಲಿರುವ ಈ ಕೋಳಿಗೆ ಇದೀಗ ಭದ್ರತೆ ನೀಡುವ ಅನಿವಾರ್ಯತೆ ಪಂಜಾಬ್ ಪೊಲೀಸರಿಗೆ ಎದುರಾಗಿದೆ. ಪೊಲೀಸ್ ಠಾಣೆಯ ಆವರಣದಲ್ಲಿ ಈ ಕೋಳಿಗೆ ಕಾಳು ಸೇರಿದಂತೆ ಆಹಾರ ನೀಡಲಾಗುತ್ತಿದೆ. ಜೊತೆಗೆ ದಿನದ 24 ಗಂಟೆ ಕೋಳಿಗೆ ಭದ್ರತೆ ನೀಡಲಾಗುತ್ತದೆ. ಕೋಳಿ ಅಂಕದ ಕೋಳಿಗೆ ಪಂಜಾಬ್‌ನಲ್ಲಿ ಬಾರಿ ಬೇಡಿಕೆ ಇದೆ. ಹೀಗಾಗಿ ರಾತ್ರಿ ವೇಳೆ ಅಥವಾ ಪೊಲೀಸರ ಕಣ್ತಪ್ಪಿಸಿ ಕೋಳಿಯನ್ನು ಅಪಹರಿಸುವ ಸಾಧ್ಯತೆ ಇದೆ. ಹೀಗಾಗಿ ಸೂಕ್ತ ಭದ್ರತೆ ನೀಡಲಾಗುತ್ತಿದೆ.
ಗೃಹಪ್ರವೇಶದ ಪೂಜೆಯಲ್ಲಿ ಎಡವಟ್ಟು, ಬಲಿಗೆ ತಂದ ಕೋಳಿ ಸೇಫ್, ವ್ಯಕ್ತಿ ಸಾವು!