ಬಕ್ವಾಸ್ ಮಾತಾಡ್ತಾನೆ, ಸ್ಯಾಮ್ ಪಿತ್ರೋಡಾ ರಾಜೀನಾಮೆ ಕೊಟ್ಟಿದ್ದು ಖುಷಿಯಾಯ್ತು ಎಂದ ರಾಬರ್ಟ್ ವಾದ್ರಾ!
ಪಿತ್ರೋಡಾ ಅವರಂತಹ ವಿದ್ಯಾವಂತ ವ್ಯಕ್ತಿ ಇಂತಹ ಕಾಮೆಂಟ್‌ಗಳನ್ನು ಮಾಡಿದ್ದಕ್ಕೆ ಆಘಾತ ವ್ಯಕ್ತಪಡಿಸಿದ ರಾಬರ್ಟ್ ವಾದ್ರಾ, "ಸ್ಯಾಮ್ ಪಿತ್ರೋಡಾ ಹೇಳಿದ್ದನ್ನು ನಾನು ಒಪ್ಪುವುದಿಲ್ಲ. ಆತ ಮಾತನಾಡಿದ್ದು ಬಕ್ವಾಸ್ ಎಂದು ಹೇಳಿದ್ದಾರೆ.
ನವದೆಹಲಿ (ಮೇ.9): ಉದ್ಯಮಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ಮೇ 9 ರಂದು ಸಾಗರೋತ್ತರ ಭಾರತ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಹೇಳಿರುವ ಜನಾಂಗೀಯ ಮಾತುಗಳನ್ನು ಯಾವುದೇ ಕಾರಣಕ್ಕೂ ಒಪ್ಪೋದಿಲ್ಲ ಎಂದು ಹೇಳಿದ್ದಾರೆ. ದಿ ಸ್ಟೇಟ್ಸ್‌ಮನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪಿತ್ರೋಡಾ, "ಭಾರತದಂತಹ ವೈವಿಧ್ಯಮಯ ದೇಶವನ್ನು ನಾವು ಒಟ್ಟಿಗೆ ಹಿಡಿದುಕೊಟ್ಟಿಕೊಂಡಿದ್ದೇವೆ. ಇಲ್ಲಿ ಪೂರ್ವದಲ್ಲಿರುವ ಜನರು ಚೈನೀಸ್‌ನಂತೆ ಕಾಣುತ್ತಾರೆ, ಪಶ್ಚಿಮದಲ್ಲಿರುವ ಜನರು ಅರಬ್‌ರಂತೆ ಕಾಣುತ್ತಾರೆ, ಉತ್ತರದಲ್ಲಿರುವ ಜನರು ಬಹುಶಃ ಬಿಳಿಯರಂತೆ ಮತ್ತು ಜನರು ದಕ್ಷಿಣ ಆಫ್ರಿಕನ್ನರಂತೆ ಕಾಣುತ್ತಾರೆ. ಹಾಗಿದ್ದರೂ ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು' ಎಂದಿದ್ದರು. ಪಿತ್ರೋಡಾ ಅವರಂಥ ವಿದ್ಯಾವಂಥರೇ ಇಂಥ ಹೇಳಿಕೆಗಳನ್ನು ಹೇಗೆ ನೀಡಲು ಸಾಧ್ಯ ಎಂದು ಆಘಾತ ವ್ಯಕ್ತಪಡಿಸಿದ ವಾದ್ರಾ, ಸ್ಯಾಮ್ ಪಿತ್ರೋಡಾ ಮಾತನ್ನು ನಾನು ಒಪ್ಪೋದಿಲ್ಲ. ಅವರು ಬಕ್ವಾಸ್ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಪಿತ್ರೋಡಾ ಅವರ ವೀಡಿಯೊ ವೈರಲ್ ಆದ ನಂತರ, ಗ್ರ್ಯಾಂಡ್ ಓಲ್ಡ್ ಪಾರ್ಟಿ ಅವರು ಮಾಡಿದ ವಿವಾದಾತ್ಮಕ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿತ್ತು. "ಭಾರತದ ವೈವಿಧ್ಯತೆಯನ್ನು ವಿವರಿಸಲು ಸ್ಯಾಮ್ ಪಿತ್ರೋಡಾ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಚಿತ್ರಿಸಿದ ವಿವರಣೆಗಳು ಅತ್ಯಂತ ದುರದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ವಿವರಣೆಗಳಿಂದ ಸಂಪೂರ್ಣವಾಗಿ ದೂರವಿರುತ್ತದೆ" ಎಂದು ಹೇಳಿತ್ತು.
ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು, ಯಾವುದೇ ಹೆಜ್ಜೆಯನ್ನು ತೆಗೆದುಕೊಳ್ಳುವ ಮೊದಲು ಬಹಳ ಯೋಚಿಸಬೇಕು ಎಂದು ವಾದ್ರಾ ಹೇಳಿದ್ದಾರೆ. ಏಕೆಂದರೆ ದೊಡ್ಡ ಶಕ್ತಿಯೊಂದಿಗೆ ದೊಡ್ಡ ಜವಾಬ್ದಾರಿ ಕೂಡ ಇದರಲ್ಲಿ ಇರುತ್ತದೆ ಎಂದಿದ್ದಾರೆ. "ಅವರು ರಾಜೀವ್ ಗಾಂಧಿಗೆ ಬಹಳ ಆಪ್ತವಾಗಿದ್ದರು. ಆದ ಕಾರಣ ಹೆಚ್ಚು ಜವಾಬ್ದಾರಿಯಿಂದ ಮಾತನಾಡಬೇಕಿತ್ತು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಸ್ಯಾಮ್ ಅವರ ಹೇಳಿಕೆಯಿಂದಾಗಿ ಬಿಜೆಪಿ ಅನಗತ್ಯ ವಿಷಯಗಳನ್ನು ಎತ್ತುವ ಅವಕಾಶವನ್ನು ಪಡೆಯುತ್ತದೆ" ಎಂದಿದ್ದಾರೆ.
ನಾನು ಈಗಾಗಲೇ ಸ್ಯಾಮ್ ಪಿತ್ರೋಡಾ ಅವರರಿಗೆ ಪತ್ರ ಬರೆದು ಅವರು ಹೇಳಿದ್ದು ತಪ್ಪು ಎಂದಿದ್ದೇನೆ. "ನೀವು ಇಲ್ಲಿ ಬಂದು ಈ ಸರ್ಕಾರದ ತಪ್ಪುಗಳ ಬಗ್ಗೆ ಮಾತನಾಡಬೇಕು. ಲೋಪಗಳನ್ನು ಎತ್ತಿ ತೋರಿಸಬೇಕು. ಆದರೆ ನೀವು ಸೋಫಾದಲ್ಲಿ ಕುಳಿತು ಏನು ಹೇಳುತ್ತಿದ್ದೀರಿ ಅದು ಸಂಪೂರ್ಣ ಅಸಂಬದ್ಧವಾಗಿದೆ. ಅವರು ರಾಜೀನಾಮೆ ನೀಡಿದ್ದರಿಂದ ನನಗೆ ತುಂಬಾ ಸಂತೋಷವಾಗಿದೆ. ನಾನು ನಿನ್ನೆ ಅವರಿಗೆ ಪತ್ರ ಬರೆದಿದ್ದೇನೆ," ಎಂದು ಹೇಳಿದ್ದಾರೆ.
'ನಾನು ದಕ್ಷಿಣದವಳು, ಭಾರತೀಯಳಂತೆ ಕಾಣುತ್ತೇನೆ' ಕಾಂಗ್ರೆಸ್ ನಾಯಕನಿಗೆ ತಿರುಗೇಟು ಕೊಟ್ಟ ಪ್ರಣಿತಾ ಸುಭಾಷ್
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ಸಂಜೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸ್ಯಾಮ್ ಪಿತ್ರೋಡಾ ಅವರು ಇಂಡಿಯಾ ಓವರ್‌ಸೀಸ್ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಘೋಷಿಸಿದರು.
ವರ್ಣದ್ವೇಷ ಎಂದಿಗೂ ಸಹಿಸಲ್ಲ: ಪಿತ್ರೋಡಾ ಹೇಳಿಕೆಗೆ ಪ್ರಧಾನಿ ಮೋದಿ ಕಿಡಿ