ದಕ್ಷಿಣ ಭಾರತದಿಂದ ಬರುವ ಭಕ್ತರಿಗೆ ಅನುವಾಗುವ ನಿಟ್ಟಿನಲ್ಲಿ ಅಯೋಧ್ಯೆಯ ರಸ್ತೆಗಳಲ್ಲಿ ತಮಿಳು ಹಾಗೂ ತೆಲುಗಿನಲ್ಲೂ ಸೈನ್‌ಬೋರ್ಡ್‌ಗಳು ಇರಲಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಇದರ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಯಾಕಿಲ್ಲ ಎನ್ನುವ ಪ್ರಶ್ನೆಗಳೂ ಎದ್ದಿವೆ.
ನವದೆಹಲಿ (ಡಿ. 21): ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಅಯೋಧ್ಯೆಯಲ್ಲಿ ಭಕ್ತರು ಅಪಾರ ಪ್ರಮಾಣದಲ್ಲಿ ಹೆಚ್ಚಾಗಲಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳ ಯಾತ್ರಾರ್ಥಿಗಳಿಗೆ ಅಯೋಧ್ಯೆಯಲ್ಲಿ ಸಂಚಾರ ಸುಗಮವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹೊಸ ಕ್ರಮಗಳನ್ನು ಕೈಗೊಂಡಿದೆ. ಭಾಷಾ ಅಡೆತಡೆಗಳನ್ನು ಪರಿಹರಿಸಲು ಕಾರ್ಯತಂತ್ರದ ಕ್ರಮದಲ್ಲಿ, ಆಡಳಿತವು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಸ್ತೆ ಫಲಕಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ದಕ್ಷಿಣ ಭಾರತ ಸೇರಿದಂತೆ ದೇಶದ ನಾನಾ ಭಾಗಗಳಿಂದ ಆಗಮಿಸುವ ಭಕ್ತರು ದರ್ಶನ ಮತ್ತು ಪೂಜೆಗಾಗಿ ಅಯೋಧ್ಯೆಗೆ ಯಾತ್ರೆ ಕೈಗೊಳ್ಳುವ ವೇಳೆ ಇದು ಅನುಕೂಲವಾಗಲಿದೆ. ಇದರ ನಡುವೆ ಕನ್ನಡಿಗರು ಅಯೋಧ್ಯೆಯ ರಸ್ತೆ ಫಲಕಗಳಲ್ಲಿ ಕನ್ನಡ ಯಾಕಿಲ್ಲ, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ಯಾಕೆ ಮನವಿ ಮಾಡಬಾರದು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಎಡಿಜಿ ವಲಯ ಪಿಯೂಷ್ ಮೊರ್ಡಿಯಾ ಅವರು ಈ ಬಗ್ಗೆ ಮಾತನಾಡಿದ್ದು, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸೂಚನಾ ಫಲಕಗಳನ್ನು ಆಯಕಟ್ಟಿನ ಪ್ರದೇಶಗಳಲ್ಲಿ ಹಾಗೂ ಪ್ರಮುಖ ದೇವಾಲಯಗಳಿಗೆ ಹೋಗುವ ರಸ್ತೆಗಳಲ್ಲಿ ಇರಿಸಲಾಗುತ್ತದೆ. ಇದು ಭಕ್ತರಿಗೆ ಸುಗಮ ಅನುಭವವನ್ನು ನೀಡುತ್ತದೆ ಎಂದು ತಿಳಿಸಿದ್ದಾರ.ೆ ತೀರ್ಥಯಾತ್ರೆಯ ಅನುಭವವನ್ನು ಇನ್ನಷ್ಟು ಹೆಚ್ಚಿಸಲು, ಪ್ರಮುಖ ದೇವಾಲಯಗಳಿಗೆ ಹೋಗುವ ರಸ್ತೆಗಳನ್ನು ಸೂಕ್ಷ್ಮವಾಗಿ ಗುರುತಿಸಲಾಗುತ್ತಿದೆ, ಪಾದಚಾರಿ ಮಾರ್ಗಗಳಲ್ಲಿ ವಾಹನ ದಟ್ಟಣೆಯನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಆಡಳಿತವು ವಾಹನಗಳ ಮಾರ್ಗಗಳನ್ನು ಎಚ್ಚರಿಕೆಯಿಂದ ಯೋಜಿಸುತ್ತಿದೆ. ಕೆಲವು ರಸ್ತೆಗಳು ಟ್ರಾಫಿಕ್ ಅನ್ನು ಸುಗಮಗೊಳಿಸಲು ಮತ್ತು ಒಟ್ಟಾರೆ ತೀರ್ಥಯಾತ್ರೆಯ ಅನುಭವವನ್ನು ಹೆಚ್ಚಿಸಲು ಇ-ರಿಕ್ಷಾಗಳಿಗೆ ಕೆಲವು ಮಾರ್ಗಗಳಲ್ಲಿ ನಿರ್ಬಂಧ ಕೂಡ ಹೇರಲಾಗಿದೆ.
ಇನ್ನು ಈ ನಿರ್ಧಾರದ ಬಗ್ಗೆ ಕನ್ನಡಿಗರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಕನ್ನಡಿಗರನ್ನ ಇಷ್ಟು ಕಡೆಯಾಗಿ, ಕೀಳಾಗಿ ನೋಡ್ತಿರಲ್ಲೋ , ಇದಕ್ಕಿಂತ ಅವಮಾನ ಬೇರೊಂದಿಲ್ಲ , ಇನ್ನುಯವಾಗ ಕನ್ನಡಿಗರು ಒಟ್ಟಾಗೋದು?' ಎಂದು ಕಾಮೆಂಟ್ ಮಾಡಿದ್ದಾರೆ. “ಕನ್ನಡ ಏನು ಮಾಡಿತ್ತು, ಅದು ಯಾಕೆ ಇಲ್ಲ?”-ಕನ್ನಡ ಹೋರಾಟಗಾರ, “ಓಹೋ! ದೇಶ ಒಡೀತೀರ! ತಮಿಳು, ತೆಲುಗು ಹಾಗೆ ತುರ್ಕೀ ಭಾಷೆ ಇರೋದು ಸಾಲ್ದೇ?” -ಇಂತಿ ನಿಮ್ಮ, ಕನ್ನಡ ನೆಲದಲ್ಲಿರೋ ಕನ್ನಡ ನೀರು ಕುಡಿಯುವ ಯಾವುದಕ್ಕೂ ಬಾರದ ಇಲಿ ಸಂತತಿ, ದೋಸೆ ಮೊದಲು ಗ್ಯಾಂಗ್' ಎಂದು ಸುಷ್ಮಾ ಅಯ್ಯಂಗಾರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
ರಾಮ ಮಂದಿರ ಉದ್ಘಾಟನೆಗೆ ಸೋನಿಯಾ ಗಾಂಧಿ, ಖರ್ಗೆ ಸೇರಿ ಕಾಂಗ್ರೆಸ್ ನಾಯಕರಿಗೆ ಆಹ್ವಾನ!
'ಇಲ್ಲಿ ಕನ್ನಡ ಇಲ್ಲದಿರುವುದು ಒಂದು ರೀತಿ ಒಳ್ಳೆಯದೇ ಬಿಡಿ, ಇಲ್ಲದಿದ್ದರೆ ಈ ಒಕ್ಕೂಟ ವ್ಯಾಧಿ ಪಕ್ಷಗಳ ಭಕ್ತರುಗಳು, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಉರ್ದು ಯಾಕೆ ಅಂತ ಕೇಳಿದ್ರೆ, ಆಮೇಲೆ ಆಯೋಧ್ಯೆಯ ಫೋಟೋ ತೋರಿಸುತ್ತಿದ್ದರು! ಈಗಲಾದರೂ ಈ ಒಕ್ಕೂಟ ವ್ಯಾಧಿ ಪಕ್ಷಗಳ ಭಕ್ತರುಗಳಿಗೆ, ಈ ಒಕ್ಕೂಟದಲ್ಲಿ ಕನ್ನಡಿಗರಿಗೆ ಇರುವ ಸ್ಥಾನಮಾನದ ಬಗ್ಗೆ ಅರಿವಾದರೆ ಅಷ್ಟೇ ಸಾಕು' ಎಂದು ಮತ್ತೊಬ್ಬರು ಟ್ಬೀಟ್ ಮಾಡಿದ್ದಾರೆ. 'ಮಾತಾಡ್ರೋ ಸೋ ಕಾಲ್ಡ್ ಕನ್ನಡ ದ್ರೋಹಿ ಸಗಣಿ ಹುಳಗಳೇ. ನಮ್ಮ ಎಂ. ಪಿ ಗಳು ತಮಿಳರ ಪಾದ ತೊಳೆಯಿರಿ. ಕೇಂದ್ರ ಸಚಿವರಾದ ಏಕಿ ಮಿನಿಟ್ ಶೋಭಕ್ಕ. RSS ಧುರೀಣ ಪ್ರಲ್ಹಾದ್ ಜೋಶಿ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಏನ್ ಹೇಳ್ತಾರೆ. ಕನ್ನಡದ ಬಗ್ಗೆನೂ ಅಭಿಮಾನ ಇರದಿದ್ದರೂ ಕನ್ನಡದ ಋಣ ತೀರಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಅಯೋಧ್ಯಾ ಶ್ರೀರಾಮನಿಗೆ ಬೆಳಗಲು ಭಕ್ತನಿಂದ ಸಿದ್ಧವಾಯ್ತು 108 ಅಡಿ ಉದ್ದದ ಅಗರಬತ್ತಿ
