Asianet Suvarna News Asianet Suvarna News

Tejashwi weds Rachel ರಾಚೆಲ್‌ ಜೊತೆ ಸಪ್ತಪದಿ ತುಳಿದ ಲಾಲೂ ಪುತ್ರ ತೇಜಸ್ವಿ

  • ಹಸೆಮಣೆ ಏರಿದ ಲಾಲೂ ಪ್ರಸಾದ್‌ ಯಾದವ್‌ ಪುತ್ರ
  • ರಾಚೆಲ್‌ ಜೊತೆ ದಾಂಪತ್ಯ ಜೀವನಕ್ಕೆ
  • ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ ವಿವಾಹ
     
RJD leader Tejashwi Yadav tied knot with Rachel akb
Author
Bangalore, First Published Dec 9, 2021, 8:20 PM IST
  • Facebook
  • Twitter
  • Whatsapp

ನವದೆಹಲಿ(ಡಿ.9): ರಾಷ್ಟ್ರೀಯ ಜನತಾ ದಳದ (ಆರ್​ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್  ಅವರ ಮದುವೆ ಇಂದು ನಡೆಯುತ್ತಿದ್ದು, ಅವರ ಸಹೋದರಿ ಮದುವೆಯ ಸುಂದರ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ತೇಜಸ್ವಿ ಯಾದವ್‌(Tejashwi Yadav) ಲಾಲೂ ಪ್ರಸಾದ್‌ ಯಾದವ್‌(Lalu Yadav) ಅವರ ಅತ್ಯಂತ ಕಿರಿಯ ಹಾಗೂ ಕೊನೆಯ ಪುತ್ರರಾಗಿದ್ದಾರೆ. ತೇಜಸ್ವಿ ಸಹೋದರಿ ರೋಹಿಣಿ ಆಚಾರ್ಯ ಈ ಫೋಟೋಗಳನ್ನು ಶೇರ್‌ ಮಾಡಿದ್ದು ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.  ತೇಜಸ್ವಿ ಯಾದವ್‌ ರಾಚೆಲ್‌ ಗೊಡಿನೊ(Rachel Godino) ಅವರನ್ನು ವಿವಾಹವಾಗುತ್ತಿದ್ದು, ಇವರಿಗೆ ರೋಹಿಣಿ ಆಚಾರ್ಯ(Rohini Acharya), ಜೀವನಪೂರ್ತಿ ಖುಷಿಯಾಗಿರಿ ಎಂದು ಶುಭ ಹಾರೈಸಿದ್ದಾರೆ. 

ಈ ಫೋಟೋಗಳಲ್ಲಿ ತೇಜಸ್ವಿ ಹಾಗೂ ರಾಚೆಲ್ ಮದುವೆಯ ಸಂಪ್ರದಾಯ ವಿಧಿ ವಿಧಾನಗಳನ್ನು ನಡೆಸುತ್ತಿರುವ ಚಿತ್ರಣವಿದೆ. ಈ ಸಂದರ್ಭದಲ್ಲಿ ತೇಜಸ್ವಿ ಅವರ ತಾಯಿ ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ(Rabri Devi), ಲಾಲೂ ಪ್ರಸಾದ್‌ ಯಾದವ್‌ ಹಾಗೂ ಕುಟುಂಬದ ಇತರ ಸದಸ್ಯರಿದ್ದಾರೆ.  ಅಲ್ಲದೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಮದುವೆ ಸಮಾರಂಭದಲ್ಲಿ ಕೇವಲ 50 ಜನ ತುಂಬಾ ಆತ್ಮೀಯರಾದ ಬಂದುಗಳು ಹಾಗೂ ಕುಟುಂಬದವರು ಮಾತ್ರ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. 

Tejashwi Yadav Engagement: ಲಾಲೂ ಕಿರಿಯ ಪುತ್ರನ ನಿಶ್ಚಿತಾರ್ಥ, ಮಾಜಿ ಸಿಎಂ ಸೊಸೆಯಾಗುವಾಕೆ ಯಾರು ಗೊತ್ತಾ?

ಲಾಲೂ ಪ್ರಸಾದ್‌ ಯಾದವ್‌ ಹಾಗೂ ರಾಬ್ರಿ ದೇವಿ ದಂಪತಿಗೆ ಒಟ್ಟು ಒಂಭತ್ತು ಜನ ಗಂಡು ಮಕ್ಕಳಿದ್ದು ತೇಜಸ್ವಿ ಎಲ್ಲರಿಗಿಂತಲೂ ಕಿರಿಯ ಪುತ್ರ. 7 ಸಹೋದರಿಯರು ಹಾಗೂ ಒಬ್ಬ ಅಣ್ಣ ತೇಜ್‌ ಪ್ರತಾಪ್‌ ಅವರನ್ನು ತೇಜಸ್ವಿ ಹೊಂದಿದ್ದಾರೆ. ಇವರಲ್ಲಿ ತೇಜ್‌ ಪ್ರತಾಪ್‌ ಈಗಾಗಲೇ ವಿವಾಹವಾಗಿ ಪತ್ನಿಯಿಂದ ದೂರವಿದ್ದಾರೆ. ಮದುವೆ ಫೋಟೋಗಳಲ್ಲಿ ತೇಜ್‌ ಪ್ರತಾಪ್ ನೂತನ ವಧುವರರೊಂದಿಗೆ ಮಿಂಚುತ್ತಿರುವ ಫೋಟೋ ಇದೆ. ಇನ್ನು ಮದುವೆಯ ಫೋಟೋಗಳಲ್ಲಿ ರಾಷ್ಟ್ರೀಯ ಜನತಾ ದಳದ ಅನೇಕ ನಾಯಕರು, ಬೆಂಬಲಿಗರು ನವ ದಂಪತಿಯನ್ನು ಭೇಟಿ ಮಾಡಿ ಹರಸುತ್ತಿದ್ದಾರೆ. ಮೂವತ್ತೆರಡು ವರ್ಷದ ತೇಜಸ್ವಿ ಯಾದವ್‌ ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಕಳೆದ ವರ್ಷ ನಡೆದ ಬಿಹಾರ ಚುನಾವಣೆಯಲ್ಲಿ ತೇಜಸ್ವಿ ಯಾದವ್‌ ಪಕ್ಷವನ್ನು ಪ್ರಬಲವಾಗಿ ಮುನ್ನಡೆಸಿದ್ದರು. ಆದಾಗ್ಯೂ ನಿತೀಶ್‌ ಕುಮಾರ್‌ ನೇತೃತ್ವದ ನ್ಯಾಷನಲ್‌ ಡೆಮಾಕ್ರಟಿಕ್‌ ಅಲಿಯನ್ಸ್‌(National Democratic Alliance) ಮುಂದೆ ಅವರು ಸೋಲಬೇಕಾಯಿತು.

ತಂದೆಯ ಲಾಲೂ ಯಾದವ್ ರೆಕಾರ್ಡ್ ಮುರಿದ ಮಗ ತೇಜಸ್ವಿ!

ನಮಗೆ ಈ ಮದುವೆಯಿಂದ ತುಂಬಾ ಖುಷಿಯಾಗಿದೆ. ನಾವು ಒಂಭತ್ತು ಜನರ ಪೈಕಿ ತೇಜಸ್ವಿ ಒಬ್ಬನೇ ಮದುವೆಯಾಗಲು ಬಾಕಿ ಇದ್ದ ಎಂದು ತೇಜಸ್ವಿ ಸಹೋದರ ಹಾಗೂ ಆರ್‌ಜೆಡಿಯ ಶಾಸಕರೂ ಹಾಗೂ ವಕ್ತಾರರು ಆಗಿರುವ ವೀರೇಂದ್ರ ಹೇಳಿದರು. ನಿಶ್ಚಿತಾರ್ಥದ ನಂತರ ನಾವು ಅದ್ದೂರಿಯಾಗಿ ಮದುವೆ ಮಾಡುವುದಕ್ಕೆ ಕಾಯುತ್ತಿದ್ದೆವು ಎಂದರು..  ಇಡೀ ಬಿಹಾರವೇ ಅವರ ನೆಚ್ಚಿನ ನಾಯಕನ ಮದುವೆಗೆ ಆಗಮಿಸುವುದರಲ್ಲಿತ್ತು. ಅನೇಕ ಬೆಂಬಲಿಗರು ತಾವಿದ್ದಲ್ಲಿಯೇ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ ಎಂದರು ವೀರೇಂದ್ರ ಹೇಳಿದರು.

 

ಕೋವಿಡ್‌  ಹಾಗೂ ಹೊಸ ರೂಪಾಂತರಿ ಓಮಿಕ್ರಾನ್‌ ಕಾರಣದಿಂದಾಗಿ ಮದುವೆಯನ್ನು ಕುಟುಂಬ ಸದಸ್ಯರು ಹಾಗೂ ಕೆಲವೇ ಆತ್ಮೀಯರ ಉಪಸ್ಥಿತಿಯಲ್ಲಿ ಮಾಡಲಾಗುತ್ತಿದೆ. 2020ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಮತ್ತು ತಂದೆಗೆ ಜಾಮೀನು ಸಿಕ್ಕ ನಂತರ ಮದುವೆಯಾಗುವುದಾಗಿ ತೇಜಸ್ವಿ ಯಾದವ್ ಈ ಹಿಂದೆಯೇ ಸುಳಿವು ನೀಡಿದ್ದರು. ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್ ರಾಯ್ ಅವರ ಮೊಮ್ಮಗಳು ಐಶ್ವರ್ಯಾ ರೈ ಅವರನ್ನು ಮೇ 2018ರಲ್ಲಿ ವಿವಾಹವಾಗಿದ್ದರು. ಆದರೆ, ಆರು ತಿಂಗಳೊಳಗೆ ಅವರ ಸಂಬಂಧ ಹದಗೆಟ್ಟಿದ್ದರಿಂದ ವಿಚ್ಛೇದನ ಪಡೆದಿದ್ದರು.

 

 

Follow Us:
Download App:
  • android
  • ios