* ಕೇಂದ್ರ ಚುನಾವಣಾ ಆಯುಕ್ತರಾಗಿ ಅನೂಪ್ ಚಂದ್ರ ಪಾಂಡೆ ನೇಮಕ* ನೇಮಕ ಮಾಡಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ* ಅನೂಪ್ ಚಂದ್ರ ಪಾಂಡೆ ನಿವೃತ್ತ ಐಎಎಸ್ ಅಧಿಕಾರಿ* ಉತ್ತರ ಪ್ರದೇಶ್ ಕೇಡರ್ ನಿವೃತ್ತ ಅಧಿಕಾರಿ

ನವದೆಹಲಿ(ಜೂ.09): ಉತ್ತರ ಪ್ರದೇಶ ಕೇಡರ್​ನ ನಿವೃತ್ತ ಐಎಎಸ್ ಅಧಿಕಾರಿ ಅನೂಪ್ ಚಂದ್ರ ಪಾಂಡೆಯವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಮಂಗಳವಾರ ನೇಮಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಶೀಲ್ ಚಂದ್ರ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಉತ್ತರ ಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿಯಾಗಿದ್ದ ಅನೂಪ್ ಚಂದ್ರ ಪಾಂಡೆ ಅವರನ್ನು ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದಾರೆ. ಕಾನೂನು ಮತ್ತು ನ್ಯಾಯ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ 1984ರ ಬ್ಯಾಚ್​ನ ಈ ಐಎಎಸ್ ಅಧಿಕಾರಿಯ ನೇಮಕ ಮಾಡಲಾಗಿದೆ.

ಸಂವಿಧಾನದ 324ನೇ ಪರಿಚ್ಛೇದದ ಷರತ್ತು 92)ರ ಅನುಸಾರ, ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಚುನಾವಣಾ ಆಯುಕ್ತರಾಗಿ ಶ್ರೀ ಅನೂಪ್ ಚಂದ್ರ ಪಾಂಡೆ, ಐಎಎಸ್(ನಿವೃತ್ತ) ಅವರನ್ನು ನೇಮಕ ಮಾಡಲು ರಾಷ್ಟ್ರಪತಿ ಸಂತೋಷಪಟ್ಟಿದ್ದಾರೆ ಎಂದು ಅಧಿಚೂಚನೆಯಲ್ಲಿ ತಿಳಿಸಲಾಗಿದೆ