ಜನಪ್ರತಿನಿಧಿಗಳು ಸರ್ಕಾರದ ನೀತಿ ನಿಯಮಗಳಿಗೆ ಅನುಗುಣವಾಗಿ ಮಾತ್ರ ಮಾತನಾಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಇಂದು ಪ್ರಕಟಿಸಲಿದೆ.

ನವದೆಹಲಿ: ಸರ್ಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಮನಬಂದಂತೆ ಮಾತನಾಡುವುದಕ್ಕೆ ನಿರ್ಬಂಧ ವಿಧಿಸಬೇಕು. ಸರ್ಕಾರದ ನೀತಿ ನಿಯಮಗಳಿಗೆ ಅನುಗುಣವಾಗಿ ಮಾತ್ರ ಮಾತನಾಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಮಂಗಳವಾರ ಪ್ರಕಟಿಸಲಿದೆ.

Add Asianetnews Kannada as a Preferred SourcegooglePreferred

ಈ ಪೀಠದ ನೇತೃತ್ವ ವಹಿಸಿರುವ ನ್ಯಾ ಎಸ್‌.ಎ.ನಜೀರ್‌ (S.A.Nazir) ಅವರು ಜ.4ರಂದು ನಿವೃತ್ತರಾಗುತ್ತಿರುವುದರಿಂದ ಇಂದು ತೀರ್ಪು ಪ್ರಕಟವಾಗುವುದು ಬಹುತೇಕ ಖಚಿತವಾಗಿದೆ. ಅಲ್ಲದೇ ಈ ಪೀಠದಲ್ಲಿ ನ್ಯಾ ಬಿ.ಆರ್‌.ಗವಾಯಿ(BR Gavai), ನ್ಯಾ. ಎ.ಎಸ್‌.ಬೋಪಣ್ಣ(A.S. Bopanna), ನ್ಯಾ. ರಾಮಸುಬ್ರಮಣಿಯನ್‌ (Ramasubramanian)ಮತ್ತು ನ್ಯಾ. ಬಿ.ವಿ.ನಾಗರತ್ನ (B.V. Nagarathna) ಅವರಿದ್ದಾರೆ. ಅರ್ಜಿಯ ಕುರಿತಾಗಿ ವಾದ ಪ್ರತಿವಾದಗಳನ್ನು ಆಲಿಸಿದ್ದ ಸುಪ್ರಿಂಕೋರ್ಟ್‌(Supreme Court) ನವಂಬರ್ 15ರಂದು ತೀರ್ಪನ್ನು ಕಾಯ್ದಿರಿಸಿತ್ತು. ಈ ಸಂಬಂಧ 2 ಪ್ರತ್ಯೇಕ ತೀರ್ಪು ಪ್ರಕಟವಾಗಲಿ ಎಂದು ಕೋರ್ಟ್‌ನ ಲಿಸ್ಟಿಂಗ್‌ ಹೇಳಿದೆ.

ಅರ್ಜಿ ವಿಚಾರಣೆಯ ವೇಳೆ ವಾಕ್‌ ಸ್ವಾತಂತ್ರ್ಯವಿದ್ದರೂ ಅದಕ್ಕೆ ದೇಶದಲ್ಲಿ ಸಾಂವಿಧಾನಿಕ ಮಿತಿ ಇದೆ. ಅದರಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಏನು ಹೇಳಬೇಕು ಎಂಬುದರ ಮೇಲೆ ಅಂತರ್ಗತ ಮಿತಿ ಅಥವಾ ನಿರ್ಬಂಧವಿದೆ ಎಂಬುದನ್ನು ಕೋರ್ಟ್‌ ಗಮನಿಸಿದೆ ಎಂದು ಹೇಳಿತ್ತು. ಬುಲಂದ್‌ಶಹರ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆಜಂ ಖಾನ್‌ (Minister Azam Khan) ನೀಡಿದ್ದ ಹೇಳಿಕೆ ವಿವಾದಾತ್ಮಕವಾಗಿತ್ತು. ಹೀಗಾಗಿ, ‘ಸಾರ್ವಜನಿಕವಾಗಿ ಹೀಗೆ ಮಾತನಾಡುವುದಕ್ಕೆ ನಿರ್ಬಂಧ ವಿಧಿಸಬೇಕು’ ಎಂದು ಸಂತ್ರಸ್ತೆಯ ಪತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ನೋಟ್‌ ಬ್ಯಾನ್‌ ಉದ್ದೇಶ ಒಳ್ಳೇದು, ಆದ್ರೆ ಕಾನೂನು ಬಾಹಿರ ಎಂದ ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ ಜಡ್ಜ್..!

ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ: ಸುಪ್ರೀಂಕೋರ್ಟ್ ನ್ಯಾ.ಅಬ್ದಲ್ ನಜೀರ್