ಮೊಬೈಲ್‌ನಿಂದ ವೈರಸ್‌ ಭೀತಿ| ಆಸ್ಪತ್ರೆಗಳಲ್ಲಿ ನಿಷೇಧಕ್ಕೆ ವೈದ್ಯರ ಆಗ್ರಹ|  ಬಿಜಿಎಂ ಗ್ಲೋಬರ್‌ ಹೆಲ್ತ್‌ ಕೇರ್‌ ನಿಯತಕಾಲಿಕೆಯಲ್ಲಿ ಈ ಕುರಿತ ಟಿಪ್ಪಣಿ

ನವದೆಹಲಿ(ಮೇ.16): ಮೊಬೈಲ್‌ ಫೋನ್‌ನಿಂದಲೂ ಕೊರೋನಾ ವೈರಸ್‌ ಹಬ್ಬುವ ಸಾಧ್ಯತೆ ಹೆಚ್ಚಿರುವುದರಿಂದ ಆಸ್ಪತ್ರೆಗಳಲ್ಲಿ ಮೊಬೈಲ್‌ ಬಳಕೆ ನಿಷೇಧಿಸುವಂತೆ ರಾಯ್‌ಪುರ ಏಮ್ಸ್‌ ವೈದ್ಯರ ತಂಡ ಸಲಹೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜಿಎಂ ಗ್ಲೋಬರ್‌ ಹೆಲ್ತ್‌ ಕೇರ್‌ ನಿಯತಕಾಲಿಕೆಯಲ್ಲಿ ಈ ಕುರಿತ ಟಿಪ್ಪಣಿ ಪ್ರಕಟವಾಗಿದ್ದು ಅದರಲ್ಲಿ, ಮೊಬೈಲ್‌ ಫೋನ್‌ಗಳ ಮೇಲ್ಭಾಗ ಅಥವಾ ಸ್ಕ್ರೀನ್‌ ಕೊರೋನಾ ಹರಡುವಲ್ಲಿ ಅತಿ ಹೆಚ್ಚು ಅಪಾಯಕಾರಿ. ಕೈಗಳನ್ನು ಸ್ವಚ್ಛಗೊಳಿಸಿಕೊಂಡರೂ ಮೊಬೈಲ್‌ ಫೋನ್‌ ಮುಖ ಮತ್ತು ಬಾಯಿಯ ನೇರ ಸಂಪರ್ಕಕ್ಕೆ ಬರುತ್ತದೆ.

ಸಮೀಕ್ಷೆಯೊಂದರ ಪ್ರಕಾರ, ವೈದ್ಯ ಸಿಬ್ಬಂದಿಗಳು ಪ್ರತಿ 2 ಗಂಟೆಗಳಲ್ಲಿ ಕನಿಷ್ಠ 15 ನಿಮಿಷ ಮೊಬೈಲ್‌ ಬಳಸುತ್ತಾರೆ. ಹಾಗಾಗಿ ಮೊಬೈಲ್‌ನಿಂದಾಗಿ ವೈದ್ಯ ಸಿಬ್ಬಂದಿಗಳಿಗೆ ಕೊರೋನಾ ತಗುಲುವ ಅಪಾಯ ಇದೆ ಎಂದು ಎಚ್ಚರಿಸಿದ್ದಾರೆ. ಹಾಗೂ ಆಸ್ಪತ್ರೆಗಳಲ್ಲಿ ಮೊಬೈಲ್‌ ನಿಷೇಧಿಸುವಂತೆ ಸಲಹೆ ನೀಡಿದ್ದಾರೆ.