ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಹೆಸರಲ್ಲಿ ನೀಡುತ್ತಿದ್ದ ಪ್ರಶಸ್ತಿಗೆ ತನ್ನ ತಂದೆ ಹೆಸರಿಡುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ. ಇದು ವಿವಾದಕ್ಕೀಡಾಗಿದೆ. ಈ ಪ್ರಶಸ್ತಿಗೆ ವೈಎಸ್‌ಆರ್‌ ವಿದ್ಯಾ ಪುರಸ್ಕಾರ್‌ ಎಂದು ಮರು ನಾಮಕರಣ ಮಾಡಲಾಗಿತ್ತು. 

ಅಮರಾವತಿ (ನ. 06): ಗ್ರಾಮ ಪಂಚಾಯಿತಿಗಳಿಗೆ ಪಕ್ಷದ ಬಣ್ಣ ಬಳಿಸಿ ವಿವಾದ ಸೃಷ್ಟಿಸಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್‌ ರೆಡ್ಡಿ, ಇದೀಗ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಹೆಸರಲ್ಲಿ ನೀಡುತ್ತಿದ್ದ ಪ್ರಶಸ್ತಿಗೆ ತನ್ನ ತಂದೆ ಹೆಸರಿಡುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Scroll to load tweet…

ಈ ನಿರ್ಧಾರ ಭಾರೀ ಟೀಕೆಗೆ ಗುರಿಯಾದ ಬೆನ್ನಲ್ಲೇ ಅವರು ತಮ್ಮ ಆದೇಶ ವಾಪಸ್‌ ಪಡೆದಿದ್ದಾರೆ. ದೇಶದ ಮೊದಲ ಶಿಕ್ಷಣ ಮಂತ್ರಿ ಅಬ್ದುಲ್‌ ಕಲಾಂ ಅಜಾದ್‌ ಅವರ ಜನ್ಮದಿನವಾದ ನ.11ರಂದು ನಡೆಯುವ ರಾಷ್ಟ್ರೀಯ ಶಿಕ್ಷಣ ದಿನದಂದು ಉತ್ತಮ ಸಾಧನೆ ಮಾಡುವ ಮಕ್ಕಳಿಗೆ ಪ್ರದಾನ ಮಾಡಲಾಗುವ ‘ಎಪಿಜೆ ಅಬ್ದುಲ್‌ ಕಲಾಂ ಪ್ರತಿಭಾ ಪುರಸ್ಕಾರ’ ಪ್ರಶಸ್ತಿಯನ್ನು ‘ವೈಎಸ್‌ಆರ್‌ ವಿದ್ಯಾ ಪುರಸ್ಕಾರ್‌’ ಎಂದು ಮರುನಾಮಕರಣ ಮಾಡಲಾಗಿತ್ತು. ಇದಕ್ಕೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಮಂದಿ ವಿರೋಧ ವ್ಯಕ್ತ ಪಡಿಸಿದ್ದರು.