ಗಡ್ಡಧಾರಿ ಒಮರ್ ಅಬ್ದುಲ್ಲಾ ಫೋಟೋ ವೈರಲ್| ಅಯ್ಯೋ, ಜಮ್ಮು ಕಾಶ್ಮೀರದಲ್ಲಿ ರದ್ದಾಗಿದ್ದು, ಆರ್ಟಿಕಲ್ 370 ಯಷ್ಟೇ... ರೇಜರ್ ಅಲ್ಲ ಅಂದ್ರು ಬಿಜೆಪಿ ನಾಯಕ| 

ನವದೆಹಲಿ[ಜ.28]: ತನ್ನ ವಿಭಿನ್ನ ಹೇಳಿಕೆಗಳಿಗೇ ಫೇಮಸ್ ಆಗಿರುವ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸದ್ಯ ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾರ ವೈರಲ್ ಆದ ಫೋಟೋ ಕುರಿತು ಕೊಟ್ಟಿರುವ ಹೇಳಿಕೆ ಭಾರೀ ವೈರಲ್ ಆಗಿದೆ. ಗಡ್ಡಧಾರಿ ಒಮರ್ ಅಬ್ದುಲ್ಲಾರವರ ಈ ಫೋಟೋ ಕುರಿತು ಟ್ವೀಟ್ ಮಾಡಿರುವ ಗಿರಿರಾಜ್ ಸಿಂಗ್ 'ಕಾಶ್ಮೀರದಲ್ಲಿ ಆರ್ಟಿಕಲ್ 370ನ್ನು ರದ್ದುಗೊಳಿಸಲಾಗಿತ್ತು, ರೇಜರ್ ಅಲ್ವಲ್ಲಾ?' ಎಂದು ಪ್ರಶ್ನಿಸಿದ್ದಾರೆ.

ಓಮರ್ ಅಬ್ದುಲ್ಲಾ ಬಿಳಿ ದಾಡಿ ಫೋಟೋ ಕಂಡು ಕಣ್ಣೀರಿಟ್ಟ ಮಮತಾ!

ಗಿರಿರಾಜ್ ಸಿಂಗ್ ತಮ್ಮ ಟ್ವೀಟ್ ನಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಶೇರ್ ಮಾಡಿಕೊಂಡಿದ್ದಾರೆ. ಒಮರ್ ಫೋಟೋ ಟ್ವೀಟ್ ಮಾಡಿದ್ದ ಮಮತಾ ಬ್ಯಾನರ್ಜಿ, ಇದು ಒಮರ್ ಅಬ್ದುಲ್ಲಾರ ಫೋಟೋ ಎಂದು ಗುರುತಿಸಲೂ ನನ್ನಿಂದ ಸಾಧ್ಯವಾಗಲಿಲ್ಲ. ಇದನ್ನು ನೋಡಿ ಬಹಳ ನೋವಾಗುತ್ತಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಹೀಗಾಗುತ್ತಿದೆ ಎಂಬುವುದು ದುರಾದೃಷ್ಟಕರ. ಇದಕ್ಕೆ ಯಾವಾಗ ಕೊನೆ? ಎಂದು ಪ್ರಶ್ನಿಸಿದ್ದರು' ಇದೇ ಕಾರಣದಿಂದ ಗಿರಿರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ.

Scroll to load tweet…

ಇನ್ನು ಕಣಿವೆ ನಾಡು ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಕಡಿತಗೊಳಿಸಿದ್ದ ಇಂಟರ್ನೆಟ್ ಸೇವೆಯನ್ನು, ಜನವರಿ 25 ರಂದು ಪುನರ್ ಆರಂಭಿಸಲಾಗಿತ್ತು. ಇದರ ಬೆನ್ನಲ್ಲೇ ಇಲ್ಲಿನ ಮಾಜಿ ಸಿಎಂ ಒಮರ್ ಅಬ್ದುಲ್ಲಾರವರ ಗಡ್ಡಧಾರಿ ಫೋಟೋ ವೈರಲ್ ಆಗಿತ್ತು. ಸಮಾನ್ಯವಾಗಿ ಕ್ಲೀನ್ ಶೇವ್ ಮಾಡಿಕೊಂಡಿರುತ್ತಿದ್ದ ಒಮರ್ ಅಬ್ದುಲ್ಲಾರವರ ಈ ಫೋಟೋ ಭಾರೀ ಕುತೂಹಲ ಮೂಡಿಸಿತ್ತು. ಸದ್ಯ ಅವರು ಶ್ರೀನಗರದ ಹರಿ ನಿವಾಸದಲ್ಲಿ ಗೃಹ ಬಂಧನದಲ್ಲಿದ್ದಾರೆ.