ಭೋಪಾಲ್[ಡಿ.30]: ರಾಜ್ ಘಡ್ ಜಿಲ್ಲೆಯ ಪೊಲೀಸರು ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಿ, ಅವರ ಬಳಿ ಇದ್ದ 1.25 ಕೋಟಿ ಮೌಲ್ಯದ ಎರಡು ತಲೆ ಹಾವನ್ನು ವಶಪಡಿಸಿಕೊಂಡಿದ್ದಾರೆ. 

ಇಲ್ಲಿನ ನರಸಿಂಹಘಡ ಠಾಣೆಯ ಪೊಲೀಸ್ ಅಧಿಕಾರಿ ಕೈಲಾಶ್ ಭಾರದ್ವಾಜ್ ಘಟನೆ ಸಂಬಂಧ ಮಾಹಿತಿ ನೀಡುತ್ತಾ 'ನಾವು ಭಾನುವಾರದಂದು ಎರಡು ತಲೆಯ ಹಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಐವರನ್ನು ಬಂಧಿಸಿದ್ದೇವೆ. ಅಲ್ಲದೇ ಅವರ ವಶದಲ್ಲಿದ್ದ 1.25 ಕೋಟಿ ಮೌಲ್ಯದ ಎರಡು ತಲೆ ಹಾವನ್ನೂ(Red Sand Boa Snake) ವಶಪಡಿಸಿಕೊಂಡಿದ್ದೇವೆ' ಎಂದಿದ್ದಾರೆ.

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು

ಅಲ್ಲದೇ 'ನರಸಿಂಹಘಡ ಬಸ್ ನಿಲ್ದಾಣ ಬಳಿ ಮೂವರು ಅನುಮನಾಸ್ಪದ ವ್ಯಕ್ತಿಗಳಿದ್ದಾರೆ. ಇವರು ಹಾವು ಮಾರಾಟ ಹಾಗೂ ಖರೀದಿ ಕುರಿತು ಯಾರ ಬಳಿಯೋ ಮಾತನಾಡುತ್ತಿದ್ದಾರೆಂಬ ಗೌಪ್ಯ ಮಾಹಿತಿ ಲಭ್ಯವಾಗಿತ್ತು. ಈ ಗೌಪ್ಯ ಮಾಹಿತಿಯನ್ನಾಧರಿಸಿ ನಾವು ಬಸ್ ನಿಲ್ದಾಣದ ಬಳಿ ತಲುಪಿದಾಗ, ಲ್ಲಿ ನಿಂತಿದ್ದವರ ಪೈಕಿ ಒಬ್ಬಾತ ಓಡಲಾರಂಭಿಸಿದ್ದಾರೆ. ಹೀಗಿರುವಾಗ ಪೊಲೀಸರು ಆತನನ್ನು ಸುತ್ತುವರೆದು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೊಳಪಡಿಸಿ ಆತನ ಸಹಚರರನ್ನೂ ಬಂಧಿಸಿದ್ದೇವೆ' ಎಂದಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಪವನ್ ನಾಗರ್ ಹಾಗೂ ಶ್ಯಾಮ್ ಗುರ್ಜರ್ ಇಬ್ಬರು ವಯಸ್ಕರಾಗಿದ್ದರೆ, ಇನ್ನುಳಿದ ಮೂವರು ಆರೋಪಿಗಳು ಅಪ್ರಾಪ್ತರು. ಇನ್ನು ಪವನ್ ಬಳಿ ಇದ್ದ ಪ್ಲಾಸ್ಟಿಕ್ ಚೀಲ ಪರಿಶೀಲಿಸಿದಾಗ ಅದರೊಳಗೆ ಹಾವು ಪತ್ತೆಯಾಗಿದೆ. 

ಪೊಲೀಸರು ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಬಂಧಿತ ಆರೋಪಿಗಳಲ್ಲೊಬ್ಬನಾದ ನಾಗರ್ ಈ ಎರಡು ತಲೆ ಹಾವನ್ನು ತಾವು ಮಧ್ಯಪ್ರದೇಶದ ಸಿಹೋರಾ ಜಿಲ್ಲೆಯಲ್ಲಿ ಖರೀದಿಸಿದ್ದೇವೆ. ಇದನ್ನು ತನ್ನ ಸಹಚರರೊಂದಿಗೆ ಸೇರಿ ನರಸಿಂಹಘಡದಲ್ಲಿ ಮಾರಲು ಬಂದಿದ್ದೆ ಎಂದು ಬಾಯ್ಬಿಟ್ಟಿದ್ದಾನೆ.

ಎರಡು ತಲೆಯ ಹಾವು ಪತ್ತೆ, ಹಾಲೆರೆದು ಪೂಜಿಸಿದ ಜನ!

 ಅಳಿವಿನಂಚಿನಲ್ಲಿರುವ ಈ ಎರಡು ತಲೆ ಹಾವಿನ್ನು ಹಿಡಿದು ಈ ಐವರು ಅಕ್ರಮವಾಗಿ ಹಣ ಸಂಪಾದಿಸಲು ಪ್ಲಾನ್ ಮಾಡಿದ್ದರು. ಸದ್ಯ ಇವರನ್ನು ಬಂಧಿಸಲಾಗಿದ್ದು, ವನ್ಯಜೀವಿ ಸಂರಕ್ಷಣಾ ನಿಯಮದಡಿ ಬರುವ ಸೆಕ್ಷನ್ ಅನ್ವಯ ಕೇಸ್ ದಾಖಲಿಸಲಾಗಿದೆ. 

ಅಳಿವಿನಂಚಿನಲ್ಲಿರುವ ಈ ಹಾವನ್ನು ಔಷಧ ತಯಾರಿ ಹಾಗೂ ಸೌಂದರ್ಯವರ್ಧಕ ತಯಾರಿಯಲ್ಲಿ ಬಳಸಲಾಗುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಾವಿಗೆ ಭಾರೀ ಬೇಡಿಕೆ ಇದೆ.