'ಹನುಮಾನ್ ಚಾಲೀಸಾ ಪಠಣ ಮಾಡೋದ್ರಿಂದ ಕೊರೋನಾ ಮಂಗಮಾಯ'
ಕೊರೋನಾ ವೈರಸ್ ಗೆ ಮದ್ದು ಕಂಡುಹಿಡಿದ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ/ ಕುಟುಂಬದವರೆಲ್ಲ ಕುಳಿತು ಹನ್ನೊಂದು ಸಾರಿ ಹನುಮಾನ್ ಚಾಲೀಸಾ ಪಠಣ ಮಾಡಿ/ ಹನುಮಾನ್ ಚಾಲೀಸಾದಿಂದ ಸರ್ವರೋಗವೂ ದೂರ
ಭೋಪಾಲ್(ಜೂ. 12) ಕೊರೋನಾ ವೈರಸ್ ಗೆ ಹನುಮಾನ್ ಚಾಲೀಸಾ ಪಠಣ ಮದ್ದು ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್ ಸೋಂಕು 2.84 ಲಕ್ಷ ಜನರಿಗೆ ತಲುಪಿದೆ. ಪ್ರತಿದಿನ 8 ಸಾವಿರ ಜನ ಸರಾಸರಿ ಸೋಂಕಿಗೆ ಗುರಿಯಾಗುತ್ತಿದ್ದಾರೆ.
ಮಧ್ಯಪ್ರದೇಶದ ಶಾಸಕರಾಗಿರುವ ರಮೇಶ್ ಸಕ್ಸೆನಾ ಸುದ್ದಿಗಾರೊಂದಿಗೆ ಮಾತನಾಡುದ್ದ ಹನುಮಾನ್ ಚಾಲೀಸಾದ ಮಹತ್ವ ಬಿಚ್ಚಿಟ್ಟಿದ್ದಾರೆ. 1993 ರಿಂದ 2008 ರ ನಡುವೆ ನಾಲ್ಕು ಸಾರಿ ಶಾಸಕರಾಗಿ ಸಕ್ಸೇನಾ ಆಯ್ಕೆಯಾಗಿದ್ದಾರೆ.
ಭಾರತೀಯ ವೈದ್ಯನ ಚಮತ್ಕಾರ, ಕೊರೋನಾ ಸೋಂಕಿತೆಗೆ ಶ್ವಾಸಕೋಶ ಕಸಿ
ಕುಟುಂಬದವೆರಲ್ಲ ಒಂದಾಗಿ ಹನ್ನೊಂದು ಸಾರಿ ಹನುಮಾನ್ ಚಾಲೀಸಾ ಪಠಣ ಮಾಡಬೇಕು. ಸುಮಾರು ಅರ್ಧ ಗಂಟೆ ಕಾಲ ಇದಕ್ಕೆ ಹಿಡಿಯುವುದು. ಹನುಮಾನ್ ಚಾಲೀಸಾ ಪಠಿಸಿದರೆ ಕೊರೋನಾ ಹತ್ತಿರವೂ ಸುಳಿಯಲ್ಲ ಎಂದು ರಮೇಶ್ ಹೇಳಿದ್ದಾರೆ.
ಸ್ವತಂತ್ರವಾಗಿ ಗೆದ್ದಿದ್ದ ಸಕ್ಸೇನಾ ನಂತರ ಬಿಜೆಪಿಯಿಂದ ಶಾಸಕರಾಗುತ್ತಿದ್ದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಸೇರಿದ್ದರು. ಹನುಮಾನ್ ಚಾಲೀಸಾದಲ್ಲಿ ಒಂದು ಸಾಲಿದೆ. ಭಗವಾನ್ ಹನುಮಂತನ ಧ್ಯಾನ ಮಾಡಿದರೆ ಎಲ್ಲ ರೋಗ ನಿವಾರಣೆಯಾಗುತ್ತದೆ ಎಂದು ಅದು ಹೇಳುತ್ತಿದ್ದು ನಾವು ಭರವಸೆ ಇಡಬೇಕು ಎಂದು ಸಕ್ಸೇನಾ ಹೇಳಿದ್ದಾರೆ.
2018 ರಲ್ಲಿಯೂ ಸಕ್ಸೇನಾ ಇಂಥದ್ದೇ ಕಮೆಂಟ್ ಮಾಡಿದ್ದರು. ರೈತರು ಮಳೆಯಿಂದ ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳಲು ಐದು ನೂರು ಸಾರಿ ಹನುಮಾನ್ ಚಾಲೀಸಾ ಪಠಣ ಮಾಡಬೇಕು ಎಂದಿದ್ದರು.
ನಾವು ದೇವರಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿದ್ದೇವೆ. ಆದರೆ ಇಂಥ ಹೇಳಿಕೆಗಳು ಜನರಲ್ಲಿ ಮತ್ತಷ್ಟು ಗೊಂದಲ ಸೃಷ್ಟಿ ಮಾಡುತ್ತವೆ ಎಂದು ಆರೋಗ್ಯ ಇಲಾಖೆಯ ಮಾಜಿ ನಿರ್ದೇಶಕ ಡಾ. ಕೆಎಲ್ ಸಾಹು ಪ್ರತಿಕ್ರಿಯೆ ನೀಡಿದ್ದಾರೆ.
ದೇವರ ನಾಮ ಸ್ಮರಣೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಮಾಡುತ್ತದೆ ಎಂದು ಬಿಜೆಪಿ ಇನ್ನೊಂದು ಕಡೆ ಪ್ರತಿಕ್ರಿಯೆ ನೀಡಿದೆ. ಸಕ್ಸೇನಾ ಪ್ರಕಾರ ಹನುಮಾನ್ ಚಾಲೀಸಾ ಮದ್ದು ಇರಬಹುದು ಆದರೆ ಇದು ಕಾಂಗ್ರೆಸ್ ಪಕ್ಷದ ಮಾತಲ್ಲ ಎಂದು ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತ ಹೇಳಿದ್ದಾರೆ.
News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"