ಕರೋನಾಕ್ಕಿಂತ ಮೊದಲು ಹಾಗೂ ಕರೋನಾ ಬಂದ ತರುವಾಯ ಕೂಡ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಕಾರ್ಯ ವೈಖರಿ ಬಗ್ಗೆ ಅಷ್ಟೇನೂ ಒಳ್ಳೆ ಅಭಿಪ್ರಾಯ ಬಿಜೆಪಿ ಒಳಗಡೆ ಸಂಘ ಪರಿವಾರದಲ್ಲಿ ಕೂಡ ಇಲ್ಲ. ಹೀಗಾಗಿ ನಿರ್ಮಲಾರನ್ನು ಬದಲಿಸಿ ಒಬ್ಬ ವೃತ್ತಿಪರ ಹಣಕಾಸು ಪರಿಣಿತರನ್ನು ಕ್ಯಾಬಿನೆಟ್ ಸಚಿವರನ್ನಾಗಿ ತರಬೇಕು ಎಂಬ ಒತ್ತಡ ಹೆಚ್ಚುತ್ತಲೇ ಇದೆ.

ಇದೀಗ ಹಣಕಾಸು ಸಚಿವರಾಗಿ ಆರ್ ಬಿಐಯ್ ಗವರ್ನರ್ ಶಕ್ತಿಕಾಂತ್ ದಾಸ್ ರನ್ನು ತರಬಹುದು ಎಂಬ ಮಾತುಗಳು ನಾರ್ಥ್ ಬ್ಲಾಕ್ ಅಂಗಳದಿಂದ ಕೇಳಿ ಬರುತ್ತಿವೆ. ಅರುಣ್ ಜೇಟ್ಲಿ ಮೂಲಕ ಪ್ರಧಾನಿ ಮೋದಿಗೆ ಆತ್ಮೀಯರಾಗಿದ್ದ ಶಕ್ತಿಕಾಂತ್ ನೋಟು ರದ್ಧತಿ ಮತ್ತು ಜಿ ಎಸ್ ಟಿ ಕಾಲದಲ್ಲಿ ರೆವೆನ್ಯೂ ಕಾರ್ಯದರ್ಶಿ ಆಗಿದ್ದರು.

ಲಾಕ್‌ಡೌನ್ ಮಾಡದೇ ವಿಧಿಯಿಲ್ಲ; ಮೋದಿ ಸಾಹೇಬರಿಗೆ ಈಗ ಖಜಾನೆಯದ್ದೇ ಚಿಂತೆ

 

ಶಕ್ತಿಕಾಂತ್ ಆರ್ ಬಿಐಯ್ ಗೆ ಹೋದ ಮೇಲೆ ಸರ್ಕಾರದ ಜೊತೆಗಿನ ಸಂಬಂಧಗಳು ಸುಧಾರಿಸಿದ್ದು ಇವರನ್ನೇ ಹಣಕಾಸು ಸಚಿವರನ್ನಾಗಿ ತರಬೇಕು ಎಂಬುದು ಮೋದಿ ಆಪ್ತ ವಲಯದ ಮನಸ್ಸಿನಲ್ಲಂತೂ ಇದೆ. ಆದರೆ ಸ್ವತಃ ಮೋದಿ ಮನಸ್ಸಿನಲ್ಲೇನಿದೆ ಎಂದು ಗೊತ್ತಾಗುವುದು ಕಷ್ಟ ನೋಡಿ. ಆದರೆ ನಿರ್ಮಲಾ ಸೀತರಾಮನ್ ರನ್ನು ಬದಲಿಸಲು ಮಾತ್ರ ಕ್ಷಣ ಗಣನೆ ಆರಂಭವಾಗಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ದೆಹಲಿಯಿಂದ ಕಂಡ ರಾಜಕಾರಣ