Asianet Suvarna News Asianet Suvarna News

ಬಿಜೆಪಿ ಹೆಣೆದ ಬಲೆಗೆ ಬೀಳಬೇಡಿ: ರಾವತ್‌ ಸಲಹೆ!

* ಚುನಾಯಿತ ಸರ್ಕಾರ ಬೀಳಿಸದಂತೆ ಬಿಜೆಪಿಗೆ ಎಚ್ಚರಿಕೆ

* ಬಿಜೆಪಿ ಹೆಣೆದ ಬಲೆಗೆ ಬೀಳಬೇಡಿ: ರಾವತ್‌ ಸಲಹೆ

Rawat accuses Captain of helping BJP former CM calls it nonsense pod
Author
Bangalore, First Published Oct 2, 2021, 9:33 AM IST

ಡೆಹ್ರಾಡೂನ್‌/ಚಂಡೀಗಢ(ಅ.02): ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಸೇರಿದಂತೆ ಇನ್ನಿತರ ಬಿಜೆಪಿ ನಾಯಕರ ಜತೆ ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌(Amamrinder Singh) ಅವರು ಹೊಂದಿದ ಸಾಮಿಪ್ಯವು, ಅವರ ಜಾತ್ಯತೀತ ತತ್ವಗಳನ್ನು ಪ್ರಶ್ನಿಸುವಂತಾಗಿದೆ ಎಂದು ಪಂಜಾಬ್‌ ಕಾಂಗ್ರೆಸ್‌ ಉಸ್ತುವಾರಿ ಹರೀಶ್‌ ರಾವತ್‌(Harish Rawat) ಹೇಳಿದ್ದಾರೆ.

ಈ ಬಗ್ಗೆ ಶುಕ್ರವಾರ ಮಾತನಾಡಿದ ರಾವತ್‌ ಅವರು, ‘ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕಾಂಗ್ರೆಸ್‌ ಜತೆ ನಿಲ್ಲಬೇಕಿದ್ದ ಸಿಂಗ್‌ ಅವರು ಸಿದ್ಧಾಂತಗಳ ವಿಚಾರದಲ್ಲಿ ತಮಗೆ ಸರಿ ಹೊಂದದವರ ಜತೆ ಕೈ ಮಿಲಾಯಿಸಿದ್ದಾರೆ. ಆದರೆ ಬಹುಮತ ಇರುವ ಸರ್ಕಾರವನ್ನು ಕೆಡುವಿ ಹಾಕುವ ದುಸ್ಸಾಹಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಬಾರದು’ ಎಂದು ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್‌ ಸದಾ ಕಾಲ ಸಿಂಗ್‌ ಅವರಿಗೆ ಗೌರವ ನೀಡುತ್ತಾ ಬಂದಿದ್ದು, ಕಾಂಗ್ರೆಸ್‌ನಿಂದ ತಮ್ಮ ತೇಜೋವಧೆ ಆಗಿದೆ ಎಂಬ ಸಿಂಗ್‌ ಆರೋಪ ಸುಳ್ಳು. ಕ್ಯಾ. ಸಿಂಗ್‌ ಬಿಜೆಪಿ ಹೆಣೆದ ಬಲೆಗೆ ಸಿಲುಕಬಾರದು ಎಂದು ತಿಳಿ ಹೇಳಿದರು.

ನನ್ನ ತೇಜೋವಧೆ ಮಾಡುವ ಉದ್ದೇಶ ಕಾಂಗ್ರೆಸ್‌ಗೆ ಇಲ್ಲದಿದ್ದರೆ, ನವಜೋತ್‌ ಸಿಂಗ್‌ ಅವರಿಗೆ ನನ್ನ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಲು ಅನುಮತಿ ಏಕೆ ನೀಡಿತು. ನನ್ನ ವಿರುದ್ಧ ಬಂಡಾಯವೆದ್ದ ಸಿಧು ಅವರ ಗುಂಪುಗೆ ಪುಷ್ಟಿನೀಡಿದವರು ಯಾರು ಎಂದು ರಾವತ್‌ಗೆ ಕ್ಯಾ. ಸಿಂಗ್‌ ತಿರುಗೇಟು ನೀಡಿದರು.

ಕ್ಯಾ.ಅಮರೀಂದರ್‌ರಿಂದ ಪಂಜಾಬ್‌ ವಿಕಾಸ್‌ ಪಕ್ಷ

ಕಾಂಗ್ರೆಸ್‌ಗೆ ವಿದಾಯ ಹೇಳುವುದಾಗಿ ಈಗಾಗಲೇ ಘೋಷಿಸಿರುವ ಪಂಜಾಬ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕ್ಯಾ.ಅಮರೀಂದರ್‌ಸಿಂಗ್‌(Amarinder Singh), ಶೀಘ್ರವೇ ಹೊಸ ಪಕ್ಷವೊಂದನ್ನು ರಚಿಸಲಿದ್ದರೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಪಕ್ಷದ ಹೆಸರು ಪಂಜಾಬ್‌ ವಿಕಾಸ್‌ ಪಕ್ಷ(Punjab Vikas Party) ಎಂದಾಗಿರಲಿದೆ ಎನ್ನಲಾಗಿದೆ.

ಅಮರೀಂದರ್‌ ಸಿಂಗ್‌, ಬಿಜೆಪಿ(BJP) ಸೇರುವ ವದಂತಿ ಇತ್ತಾದರೂ ಅದನ್ನು ಅವರೇ ಸ್ಪಷ್ಟವಾಗಿ ತಳ್ಳಿಹಾಕಿದ್ದರು. ತಕ್ಷಣಕ್ಕೆ ಬಿಜೆಪಿ ಸೇರುವುದು ತಮ್ಮ ಮೂಲ ಉದ್ದೇಶವನ್ನಾ ಹಾಳು ಮಾಡುವ ಸಾಧ್ಯತೆ ಇರುವ ಕಾರಣ ಹೊಸ ಪಕ್ಷ ಸ್ಥಾಪನೆಯೇ ಸೂಕ್ತ ಎಂಬ ನಿರ್ಧಾರಕ್ಕೆ ಸಿಂಗ್‌ ಬಂದಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios