Asianet Suvarna News Asianet Suvarna News

Endangered Species: ಅಪರೂಪದ ನಡೆದಾಡುವ ಪಿಂಕ್‌ ಹ್ಯಾಂಡ್‌ಫಿಶ್‌ ಪತ್ತೆ

  • ಅಪರೂಪದ ನಡೆದಾಡುವ ಪಿಂಕ್‌ ಹ್ಯಾಂಡ್‌ಫಿಶ್‌ ಪತ್ತೆ
  • ಆಸ್ಟ್ರೇಲಿಯಾದ ಸಮುದ್ರ ತೀರದಲ್ಲಿ ಪತ್ತೆ
  • ಕೊನೆಯ ಬಾರಿಗೆ 1999ರಲ್ಲಿ ಕಾಣಿಸಿಕೊಂಡಿದ್ದ  ಮೀನು
Rare Pink hand walking fish spotted after 22 years in Tasmanian coast akb
Author
Bangalore, First Published Dec 26, 2021, 3:16 PM IST
  • Facebook
  • Twitter
  • Whatsapp

ಸಿಡ್ನಿ(ಡಿ. 26): ಅಪರೂಪದ ನಡೆದಾಡುವ ಪಿಂಕ್‌ ಹ್ಯಾಂಡ್‌ಫಿಶ್‌ವೊಂದು ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ, ಕಾಮನ್‌ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ  (CSIRO) ಈ ನಡೆದಾಡುವ ಮೀನಿನ ಅಸ್ತಿತ್ವ ಇರುವುದನ್ನು ಖಚಿತಪಡಿಸಿದೆ. ಸುಮಾರು  22 ವರ್ಷಗಳ ಹಿಂದೆ ಈ ಅಪರೂಪದ ವಾಕಿಂಗ್ ಫಿಶ್‌ ಕಾಣಿಸಿಕೊಂಡಿತ್ತು. ಈ ಪ್ರಭೇದ ಮೀನನ್ನು ಕೊನೆಯ ಬಾರಿಗೆ 1999ರಲ್ಲಿ ನೋಡಲಾಗಿತ್ತು. ಆದರೆ ಈಗ ಮತ್ತೆ ಟ್ಯಾಸ್ಮೆನಿಯನ್ ಕರಾವಳಿ ( Tasmanian coast) ಯ ಬಳಿ ಈ ಮೀನು ಕಾಣಿಸಿಕೊಂಡಿದೆ.

CSIROದ ಲೇಖನವೊಂದರ ಪ್ರಕಾರ ಈ ವಾಕಿಂಗ್‌ ಫಿಶ್‌ಗಳು ದಕ್ಷಿಣದಿಂದ ಈಶಾನ್ಯ ಟ್ಯಾಸ್ಮೆನಿಯಾದ ಕರಾವಳಿಯವರೆಗಿನ ನೀರಿನಲ್ಲಿ ಹೇರಳವಾಗಿದ್ದವು. ಅದಾಗ್ಯೂ ಇವುಗಳ ಸಂಖ್ಯೆ ಕಡಿಮೆಯಾಗಿ ಪ್ರತ್ಯೇಕವಾದ ಉಪ ಸಂಖ್ಯೆಗೆ ಸೀಮಿತವಾಗಿದೆ.   2012 ರಲ್ಲಿ, ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯ ಸಂರಕ್ಷಣಾ ಕಾಯಿದೆ (ಇಪಿಬಿಸಿ) ಅಡಿಯಲ್ಲಿ ಈ ಪ್ರಭೇದವನ್ನು ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇಧಗಳ ಪಟ್ಟಿಗೆ ಸೇರಿಸಲಾಗಿದೆ. ಇದೀಗ, 20 ವರ್ಷಗಳ ಸುದೀರ್ಘ ಮೇಲ್ವಿಚಾರಣೆ ಮತ್ತು ಸಂರಕ್ಷಣೆಯ ನಂತರ, ಈ ವಿಶೇಷ ಮೀನುಗಳು ಟ್ಯಾಸ್ಮೆನಿಯನ್ ಕರಾವಳಿಯಲ್ಲಿ ಗುರುತಿಸಲ್ಪಟ್ಟಿವೆ.

Costly Fish: ಬಲೆಗೆ ಬಿತ್ತು ದುಬಾರಿ ಮೀನು, ಬೆಲೆ ಲಕ್ಷಕ್ಕೂ ಹೆಚ್ಚು, ಟೇಸ್ಟ್ ಸೂಪರ್

ಈ ಜಾತಿಯ ಮೀನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂರಕ್ಷಿಸುವ ಬಗ್ಗೆ ವಿಜ್ಞಾನಿಗಳು ಆಶಾವಾದಿಗಳಾಗಿದ್ದಾರೆ. ಪಿಂಕ್ ಹ್ಯಾಂಡ್ ಫಿಶ್‌ನ ವಿಶೇಷತೆ ಏನೆಂದರೆ, ಇವುಗಳ ದೇಹದ ಎರಡೂ ಬದಿಯಲ್ಲಿ ಎರಡು ಚಾಚಿಕೊಂಡಿರುವ ರೆಕ್ಕೆಗಳು ಚಿಕ್ಕ ಕೈಗಳಂತೆ ಕಾಣುತ್ತವೆ. ಆಂಗ್ಲರ್‌ಫಿಶ್ ಕುಟುಂಬಕ್ಕೆ ಸೇರಿರುವ ಮೀನು ಇದಾಗಿದೆ. ಒಟ್ಟು ಐದು ಬಾರಿ ಇದು ಕಾಣಿಸಿಕೊಂಡಿದ್ದು,  1999 ರಲ್ಲಿ ಹೋಬಾರ್ಟ್‌ನ (Hobart) ಆಗ್ನೇಯ ಭಾಗದಲ್ಲಿರುವ ಟಾಸ್ಮನ್ ಪೆನಿನ್ಸುಲಾ (Tasman Peninsula)ದ ಕರಾವಳಿಯಲ್ಲಿ ಕೊನೆಯ ಬಾರಿಗೆ ಡೈವರ್‌(diver) ಒಬ್ಬರಿಗೆ ಕಾಣಿಸಿತ್ತು. 

Rare Fish: ಮನುಷ್ಯನ ಮುಖ ಹೋಲುವ ಮೀನು: ಹಲ್ಲಿರುವ ಫಿಶ್‌ ಎಂದಾದ್ರೂ ನೋಡಿದ್ದೀರಾ?

ಆದರೆ ರಾಷ್ಟ್ರೀಯವಾಗಿ ಸಂರಕ್ಷಿಸಲ್ಪಟ್ಟ ಪ್ರದೇಶದಲ್ಲಿ ಟ್ಯಾಸ್ಮನ್ ಫ್ರಾಕ್ಚರ್ ಮೆರೈನ್ ಪಾರ್ಕ್‌ (Tasman Fracture Marine Park) ನಡೆಸಿದ ಇತೀಚಿನ ಸಮೀಕ್ಷೆಯಲ್ಲಿ ಹವಳ, ರಾಕ್‌ ಲಾಬಸ್ಟರ್‌, ಹಾಗೂ ಸ್ಟ್ರೈಪಡ್‌ ಟ್ರಂಪೆಟರ್‌ ಮೀನು (striped trumpeter fish) ಗಳ ಪರೀಕ್ಷೆ ಮಾಡುತ್ತಿದ್ದಾಗ ಅವರು ನಿರೀಕ್ಷೆ ಮಾಡಿರದ ಆವಿಷ್ಕಾರವೊಂದು ಕಂಡುಬಂತು. ಪಾರ್ಕ್ಸ್ ಆಸ್ಟ್ರೇಲಿಯಾಕ್ಕಾಗಿ ವಿವರವಾದ ಸಂಶೋಧನಾ ಅಧ್ಯಯನವನ್ನು ಮಾಡಲು ನಾವು ಸಾಕಷ್ಟು ಅದೃಷ್ಟಶಾಲಿಯಾಗಿದ್ದೇವೆ. ಸಂಪೂರ್ಣ ಶ್ರೇಣಿಯ ಮೀನು ಪ್ರಭೇದಗಳು ಮತ್ತು ಹವಳಗಳು ಮತ್ತು ಕೆಳಭಾಗದಲ್ಲಿ ವಾಸಿಸುವ ವಸ್ತುಗಳನ್ನು ನೋಡುತ್ತಿದ್ದೇವೆ ಎಂದು ಟ್ಯಾಸ್ಮೆನಿಯಾ ವಿಶ್ವವಿದ್ಯಾಲಯದ ಅಂಟಾರ್ಕ್ಟಿಕ್ ಮತ್ತು ಸಾಗರ ಅಧ್ಯಯನಗಳ ಸಂಸ್ಥೆಯ ಪ್ರೊಫೆಸರ್ ನೆವಿಲ್ಲೆ ಬ್ಯಾರೆಟ್ ( Neville Barrett) ಈ ಸಮೀಕ್ಷೆ ಬಗ್ಗೆ ಹೇಳಿದ್ದಾರೆ. 

ಇತ್ತೀಚೆಗೆ ಕರ್ನಾಟಕದ ಕೊಪ್ಪಳದಲ್ಲಿ ಮನುಷ್ಯನ ಮುಖದ ಹೋಲಿಕೆ ಇರುವ ಮೀನು(Fish) ಪತ್ತೆಯಾಗಿದೆ. ಕೊಪ್ಪಳ(Koppal) ಜಿಲ್ಲೆಯ ಗಂಗಾವತಿ(Gangavati) ಆನೆಗೊಂದಿ, ವಿರುಪಾಪುರಗಡ್ಡಿ ಬಳಿಯ ತುಂಗಭದ್ರಾ ನದಿಯಲ್ಲಿ(Tungabhadra River) ಮೀನು ಹಿಡಿಯುವ ವೇಳೆ ಈ ಅಪರೂಪದ ಮೀನು ಪತ್ತೆಯಾಗಿತ್ತು. ಮೀನುಗಾರ(fisherman) ರಫಿ ಅವರ ಬಲೆಯಲ್ಲಿ ಈ ಮೀನು ಸಿಕ್ಕಿದ್ದು, ಇದರ ಬಾಯಿಯಲ್ಲಿ ಹಲ್ಲುಗಳು(Teeth) ಸಹ ಕಂಡು ಬಂದಿದೆ. ಇದು ಮೀನುಗಾರರಿಗೆ ಅಚ್ಚರಿ ಮೂಡಿಸಿದೆ.  ಇಲ್ಲಿಯವರೆಗೆ ಬಾಯಲ್ಲಿ ಹಲ್ಲಿರುವ ಮೀನು ನೋಡೇ ಇಲ್ಲ ಅಂತ ಮೀನುಗಾರರು ಹೇಳಿದ್ದಾರೆ. ಅಪರೂಪಕ್ಕೆ ಸಿಗುವ ಈ ಮೀನನ್ನು ರೂಪ್‌ಚಾಂದ್(Roopchand) ಅಥವಾ ಪಕು(Paku) ಎಂದು ಕರೆಯಲಾಗುತ್ತದೆ. 

Follow Us:
Download App:
  • android
  • ios