Rampath Yatra Express... ಪುಣೆಯಿಂದ ರಾಮ ಜನ್ಮಸ್ಥಾನ ಆಯೋಧ್ಯೆಗೆ ವಿಶೇಷ ರೈಲು....

ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ನಿಗಮವೂ ಹಲವು ಯೋಜನೆಗಳನ್ನು ವಿಶೇಷ ರೈಲುಗಳನ್ನು ಮತ್ತೆ ಮತ್ತೆ ಜಾರಿಗೆ ತರುತ್ತಲೆ ಇದೆ. ಈಗ ಧಾರ್ಮಿಕ ಯಾತ್ರಾ ಕ್ಷೇತ್ರಗಳ ಪ್ರವಾಸೋದ್ಯಮದ ಉತ್ತೇಜನಕ್ಕೆ ಮುಂದಾಗಿರುವ ರೈಲ್ವೆ ಇಲಾಖೆ  ರಾಮಜನ್ಮ ಭೂಮಿ ಆಯೋಧ್ಯೆಗೆ ಹೊಸ ರೈಲು ಯೋಜನೆಯೊಂದನ್ನು ರೂಪಿಸಿದೆ.

Rampath yatra Indian railways flags off special train from pune to ayodhya akb

ಪುಣೆ(ನ.28):  ರಾಮಾಯಣ ಎಕ್ಸ್‌ಪ್ರೆಸ್‌ ರೈಲಿನ ಯಶಸ್ಸಿನ ಬಳಿಕ ಭಾರತೀಯ ರೈಲ್ವೆ ಧಾರ್ಮಿಕ ಕ್ಷೇತ್ರಗಳ ಪ್ರವಾಸೋದ್ಯಮವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ರಾಮಪಥ್‌ ಎಕ್ಸ್‌ಪ್ರೆಸ್‌ ರೈಲಿಗೆ ಶನಿವಾದ ಪುಣೆಯಲ್ಲಿ ಚಾಲನೆ ನೀಡಿದೆ. ಈ ರೈಲು ಪುಣೆ(Pune)ಯಿಂದ ಉತ್ತರಪ್ರದೇಶದ ಅಯೋಧ್ಯೆ(Ayodhya)ಗೆ ತೆರಳಲಿದೆ. ರೈಲ್ವೆ ಇಲಾಖೆ ರಾಜ್ಯ ಸಚಿವರಾದ ರಾವ್‌ ಸಾಹೇಬ್ ದಾದಾರಾವ್‌ ಪಾಟೀಲ್ ದಾನ್ವೆ( Raosaheb Dadarao Patil Danve) ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಪುಣೆ ನಿಲ್ದಾಣದಿಂದ ರಾಮ್‌ಪಥ್‌ ಯಾತ್ರಾ ಎಕ್ಸ್‌ಪ್ರೆಸ್‌ (Rampath Yatra Express)ರೈಲಿಗೆ ಚಾಲನೆ ನೀಡಿದರು. ಈ ರೈಲು  ಭಗವಾನ್‌ ರಾಮನಿಗೆ ಸಂಬಂಧಿಸಿದ 6 ಹಿಂದೂ ಧಾರ್ಮಿಕ ಯಾತ್ರಾ ಕ್ಷೇತ್ರಗಳಿಗೆ ತೆರಳಲಿದೆ.

 ನಂದಿಗ್ರಾಮ(Nandigram) ಶ್ರೀಂಗವೆರ್‌ಪುರ, ವಾರಣಾಸಿ(Varanasi), ಪ್ರಯಾಗ್‌ರಾಜ್‌,  ಚಿತ್ರಕೂಟ(Chitrakoot) ಹಾಗೂ  ಅಯೋಧ್ಯೆಗೆ ಈ ರೈಲು ಚಲಿಸಲಿದೆ. ಭಾರತೀಯ ರೈಲ್ವೆ(Indian Railway)ಕೆಟರಿಂಗ್‌ ಹಾಗೂ ಟೂರಿಸಂ ಕಾರ್ಪೋರೇಷನ್‌ (IRCTC) ಜನರಲ್‌ ಮ್ಯಾನೇಜರ್‌ ರಾಹುಲ್‌ ಹಿಮಾಲಯನ್‌ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಸಂಪೂರ್ಣವಾದ ರಾಮಾಯಣ ಯಾತ್ರವು ಹಂಪಿ(Hampi), ನಾಸಿಕ್‌ ಹಾಗೂ ರಾಮೇಶ್ವರ( Rameshwaram)ವನ್ನು ಸೇರಿಸಲಿದೆ ಎಂದು ಅವರು ಹೇಳಿದರು. ಧಾರ್ಮಿಕ ಕ್ಷೇತ್ರಗಳ ಪ್ರವಾಸೋದ್ಯಮವನ್ನು ಹೆಚ್ಚಿಸುವುದು ಈ ರೈಲು ಪಥದ ಉದ್ದೇಶವಾಗಿದೆ. ಈ ಎಲ್ಲಾ ಧಾರ್ಮಿಕ ಕ್ಷೇತ್ರಗಳ ಪ್ರವಾಸದ ಪ್ರಯಾಣಕ್ಕೆ ಈ ರೈಲು 7 ದಿನ ಹಾಗೂ 8 ರಾತ್ರಿಗಳ ಪ್ರಯಾಣ ಬೆಳೆಸಲಿದೆ.  ಈ ರೈಲು ಸ್ಲೀಪರ್ ಕ್ಲಾಸ್‌(sleeper class) ಹಾಗೂ ಎಸಿ-3 ಟೈರ್‌ ಬೋಗಿಗಳನ್ನು  ಹೊಂದಿದೆ ಎಂದು ಪುಣೆ ವಿಭಾಗದ  ವಿಭಾಗೀಯ ರೈಲ್ವೆ ಮ್ಯಾನೇಜರ್‌(DRM) ರೇಣು ಶರ್ಮಾ(Renu Sharma) ತಿಳಿಸಿದರು.  

 

ಈ ರೈಲು ಹವಾ ನಿಯಂತ್ರಿತ ಬೋಗಿಗಳ ಜೊತೆ ಸ್ಲೀಪರ್ ಕೋಚ್‌ ಬೋಗಿಗಳನ್ನು ಹೊಂದಿದೆ.  ಈ ರೈಲಿನ ಪ್ರಯಾಣ ದರ 14,490 ರೂಪಾಯಿ. ಇದರಲ್ಲಿ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ, ಇರಲು ವ್ಯವಸ್ಥೆ, ಪ್ರಯಾಣ ಹಾಗೂ ಮಾರ್ಗದರ್ಶಕರ ವ್ಯವಸ್ಥೆಗಳನ್ನು ಇದು ಒಳಗೊಂಡಿದೆ. ಬೆಳಗ್ಗಿನ ತಿಂಡಿ ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟ ಮೂರು ಕೂಡ ಸಂಪೂರ್ಣ ಸಸ್ಯಹಾರವಾಗಿರುವುದು. ಹಾಲ್‌/ಲಾಡ್ಜ್‌, ರಾತ್ರಿ ತಂಗಲು ವ್ಯವಸ್ಥೆ, ಮುಂಜಾನೆ ರಿಫ್ರೆಶ್‌ ಆಗಲು ವ್ಯವಸ್ಥೆಯೂ ಈ ಪ್ಯಾಕೇಜ್‌ನಲ್ಲಿದೆ.  ಈ ರೈಲಿನಲ್ಲಿ ಪ್ರಯಾಣ ಮಾಡಲು ಇಚ್ಛಿಸುವವರು ತಮ್ಮ ಟಿಕೆಟ್‌ಗಳನ್ನು www.irctctourism.com ನಲ್ಲಿ ಬುಕ್‌ ಮಾಡಬಹುದಾಗಿದೆ. 

 

ಈ ವಾರದ ಆರಂಭದಲ್ಲಿ ದೆಹಲಿ  ಸರ್ಕಾರ ಕೂಡ, ರಾಷ್ಟ್ರದ ರಾಜಧಾನಿ(national capital)ಯಿಂದ ಹಿರಿಯ ನಾಗರಿಕರನ್ನು ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಕಳುಹಿಸಲು ಉಚಿತ ಯಾತ್ರಾ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯಡಿ ಹಿರಿಯ ನಾಗರಿಕರಿಗೆ ಉಚಿತವಾಗಿ ಧಾರ್ಮಿಕ ಕ್ಷೇತ್ರಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ.  ಯಾತ್ರಾರ್ಥಿಗಳು ವೈಷ್ಣೋದೇವಿ, ಶಿರ್ಡಿ, ರಾಮೇಶ್ವರಂ, ದ್ವಾರಕಾ, ಪುರಿ, ಹರಿದ್ವಾರ, ರಿಷಿಕೇಶ, ಮಥುರಾ, ಬೃಂದಾವನ ಹಾಗೂ ಇನ್ನು ಕೆಲ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬಹುದಾಗಿದೆ. ಅಲ್ಲದೇ ಈ ಪಟ್ಟಿಗೆ ಈಗ ಅಯೋಧ್ಯವನ್ನು ಕೂಡ ಸೇರಿಸಲಾಗಿದೆ. 

ಈ ಯೋಜನೆಯ ಮೊದಲ ರೈಲು ಅಯೋಧ್ಯೆಗೆ ಡಿಸೆಂಬರ್‌ 3ರಂದು ತೆರಳಲಿದೆ. ಇದಕ್ಕಾಗಿ ರಿಜಿಸ್ಟ್ರೇಶನ್‌ ಶುರುವಾಗಿದೆ. ಈ ರೈಲಿನಲ್ಲಿ ಸರಿ ಸುಮಾರು 1000 ಮಂದಿ ಅಯೋಧ್ಯೆಗೆ ಪ್ರಯಾಣಿಸಲಿದ್ದಾರೆ. ಒಟ್ಟಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಭಾರತೀಯ ರೈಲ್ವೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. 

Indian Railway : ಪ್ರವಾಸ ಪ್ರಿಯರಿಗೆ IRCTC ಗುಡ್ ನ್ಯೂಸ್

ಭಾರತೀಯ ರೈಲ್ವೆ ಕ್ಯಾಟರಿಂಗ್‌ ಮತ್ತು ಟೂರಿಸಮ್‌ ಕಾರ್ಪೊರೇಷನ್‌ ಲಿಮಿಟೆಡ್‌ (IRCTC) ರೈಲ್ವೆ ಸಚಿವಾಲಯ (Railway Ministry) ಅಡಿಯಲ್ಲಿನ ಒಂದು ಸಾರ್ವಜನಿಕ ಉದ್ಯಮವಾಗಿದೆ.  ಸಾರ್ವಜನಿಕರು ಮತ್ತು ಯಾತ್ರಾರ್ಥಿಗಳಿಗಾಗಿ ವಿವಿಧ ಯಾತ್ರಾ ಯೋಜನೆಗಳನ್ನು ಇದು ಆರಂಭಿಸಿದೆ. ಇತ್ತೀಚೆಗಷ್ಟೇ ಇದು ಹರಿಹರ ದರ್ಶನ ಯಾತ್ರಾ ಮತ್ತು ಸರ್ದಾರ್‌ ವಲ್ಲಭಾಯಿ ಪಟೇಲ್‌ ಪ್ರತಿಮೆ ವೀಕ್ಷಣೆ ಎಂಬ 10 ರಾತ್ರಿ, 11 ಹಗಲುಗಳ ಒಂದು ವಿಶೇಷ ಪ್ರವಾಸಿ ರೈಲು ಪ್ರವಾಸವನ್ನು (Tailway Tour) ಆಯೋಜಿಸಿತ್ತು. ಈ ವಿಶೇಷ ಪ್ರವಾಸಿ ರೈಲು ಡಿ. 10 ರಂದು ಮಧುರೈ ರೈಲು ನಿಲ್ದಾಣದಿಂದ ಹೊರಟರೆ ಅಹಮದಾಬಾದ್‌ ಅಕ್ಷರ್‌ ಧಾಮ್‌ ಮಂದಿರ್‌- ನಿಶ್ಕಳಂಕ ಮಹಾದೇವ -ದ್ವಾರಕಾ-ಬೆಟ್‌ ದ್ವಾರಕಾ-ನಾಗೇಶ್ವರ್‌ (ಜ್ಯೋತಿರ್ಲಿಂಗ್‌)-ಸೋಮನಾಥ (ಜ್ಯೋತಿರ್ಲಿಂಗ)-ಉಜ್ಜಯಿನಿ ಮಹಾಕಾಳೇಶ್ವರ (ಜ್ಯೋತಿರ್ಲಿಂಗ)- ಓಂಕಾರೇಶ್ವರ (ಜ್ಯೋತಿರ್ಲಿಂಗ) ಮತ್ತು ಸರ್ದಾರ್‌ ವಲ್ಲಭಾಯಿ ಪಟೇಲ್‌ ಅವರ ಪ್ರತಿಮೆ ವೀಕ್ಷಣೆ ಮಾಡಬಹುದು.

Jobs in Konkan Railway: ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟಂಟ್‌ ಹುದ್ದೆಗಳಿಗೆ ವಾಕ್ ಇನ್ ಇಂಟರ್‌ವ್ಯೂ

ಕರ್ನಾಟಕದ (Karnataka) ಭಕ್ತರು ಹಾಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಈ ಪ್ರವಾಸಿ ರೈಲು ಬೆಂಗಳೂರು (Bengaluru), ತುಮಕೂರು (Tumakuru), ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ (Hubli) ಮತ್ತು ಬೆಳಗಾವಿ ಮಾರ್ಗವಾಗಿ ಹೋಗಲಿದೆ.

Latest Videos
Follow Us:
Download App:
  • android
  • ios