ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರಕ್ಕೆ ಹಲವು ಉದ್ಯಮಿಗಳು ಭಾರೀ ಪ್ರಮಾಣದ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ. ಗುಜರಾತ್‌ನ ಸೂರತ್‌ನಲ್ಲಿ ಅತಿದೊಡ್ಡ ವಜ್ರದ ವ್ಯಾಪಾರಿ ಕುಟುಂಬವಾಗಿರುವ ದಿಲೀಪ್ ಕುಮಾರ್. ವಿ ಲೇಖಿ ಅವರು ರಾಮಮಂದಿರಕ್ಕೆ 101 ಕೇಜಿ ಚಿನ್ನವನ್ನು ದಾನವಾಗಿ ನೀಡಿದ್ದಾರೆ.
ಅಯೋಧ್ಯೆ: ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರಕ್ಕೆ ಹಲವು ಉದ್ಯಮಿಗಳು ಭಾರೀ ಪ್ರಮಾಣದ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ. ಗುಜರಾತ್‌ನ ಸೂರತ್‌ನಲ್ಲಿ ಅತಿದೊಡ್ಡ ವಜ್ರದ ವ್ಯಾಪಾರಿ ಕುಟುಂಬವಾಗಿರುವ ದಿಲೀಪ್ ಕುಮಾರ್. ವಿ ಲೇಖಿ ಅವರು ರಾಮಮಂದಿರಕ್ಕೆ 101 ಕೇಜಿ ಚಿನ್ನವನ್ನು ದಾನವಾಗಿ ನೀಡಿದ್ದಾರೆ. ಇದನ್ನು ದೇಗುಲದ ಬಾಗಿಲುಗಳಿಗೆ, ಗರ್ಭಗೃಹಕ್ಕೆ, ತ್ರಿಶೂಲ, ಡಮರು ಹಾಗೂ ಮಂದಿರದ ಕಂಬಗಳಿಗೆ ಲೇಪನ ಮಾಡಲು ಬಳಕೆ ಮಾಡಲಾಗಿದೆ. ಇದು ರಾಮಮಂದಿರಕ್ಕೆ ನೀಡಲಾದ ಅತಿದೊಡ್ಡ ಕೊಡುಗೆಯೂ ಸಹ ಆಗಿದೆ. ದೇವಸ್ಥಾನದ ನೆಲಮಹಡಿಯಲ್ಲಿ 14 ಚಿನ್ನದ ಬಾಗಿಲುಗಳನ್ನು ಅಳವಡಿಸಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕುಟುಂಬ ರಾಮಮಂದಿರಕ್ಕೆ 33 ಕೇಜಿ ಚಿನ್ನ ಹಾಗೂ 3 ಚಿನ್ನದ ಕಿರೀಟಗಳನ್ನು ದಾನವಾಗಿ ನೀಡಿದೆ ಎನ್ನಲಾಗಿದೆ. ಇದಲ್ಲದೇ ಸೂರತ್‌ನ ಮತ್ತೊಬ್ಬ ವಜ್ರದ ವ್ಯಾಪಾರಿ ಬರೋಬ್ಬರಿ 11 ಕೋಟಿ ರು. ಬೆಲೆ ಬಾಳುವ ಚಿನ್ನದ ಕಿರೀಟವನ್ನು ದಾನವಾಗಿ ನೀಡಿದ್ದಾರೆ. 6 ಕೇಜಿ ತೂಕವಿರುವ ಈ ಕಿರೀಟದಲ್ಲಿ 4.5 ಕೇಜಿಯಷ್ಟು ಚಿನ್ನವಿದ್ದು, ವಜ್ರ ಮತ್ತು ರತ್ನಗಳಿಂದ ಅಲಂಕಾರ ಮಾಡಲಾಗಿದೆ. ಮತ್ತೊಬ್ಬ ದಾನಿ 16.3 ಕೋಟಿ ರು.ಗಳನ್ನು ದಾನವಾಗಿ ನೀಡಿದ್ದಾರೆ.
ಮತ್ತೊಬ್ಬ ಕನ್ನಡಿಗ ಇಡಗುಂಜಿಯ ಗಣೇಶ್ ಭಟ್ ಅಯೋಧ್ಯೆಗಾಗಿ ಕೆತ್ತಿದ್ದ ರಾಮನ ವಿಗ್ರಹ ಅನಾವರಣ
ನಿನ್ನೆಯೂ ಅಯೋಧೆಗೆ 3 ಲಕ್ಷ ಜನ: ಮೊದಲ ದಿನ 3.17 ಕೋಟಿ ಕಾಣಿಕೆ
ಅಯೋಧ್ಯೆ: ಸೋಮವಾರ ಪ್ರತಿಷ್ಠಾಪಿಸಲಾದ ಅಯೋಧ್ಯೆ ಶ್ರೀರಾಮನ ವಿಗ್ರಹವನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಿದ 2ನೇ ದಿನವೂ 3 ಲಕ್ಷ ಮಂದಿ ಬಾಲರಾಮನ ದರ್ಶನ ಪಡೆದಿದ್ದಾರೆ. ಮೊದಲ ದಿನ ಉಂಟಾಗಿದ್ದ ನೂಕುನುಗ್ಗಲು ಸಮಸ್ಯೆಯನ್ನು ಪರಿಹರಿಸಿರುವ ಸ್ಥಳೀಯ ಆಡಳಿತ ಉತ್ತಮ ಸರತಿ ಸಾಲು ವ್ಯವಸ್ಥೆಯನ್ನು ರೂಪಿಸಿದೆ. 2ನೇ ದಿನ 3 ಲಕ್ಷ ಮಂದಿ ರಾಮನ ದರ್ಶನ ಪಡೆದಿದ್ದಾರೆ. ಮೊದಲ ದಿನ ಒಟ್ಟಾರೆ 5 ಲಕ್ಷ ಜನರು ದೇಗುಲಕ್ಕೆ ಆಗಮಿಸಿದ್ದರು. ಜೊತೆಗೆ ಮೊದಲ ದಿನ 3.17 ಕೋಟಿ ರು. ಕಾಣಿಕೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಪ್ರಾಣಪ್ರತಿಷ್ಠಾಪನೆ ಇದ್ದ ಕಾರಣ ಮಂದಿರಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು.
ಅಯೋಧ್ಯೆಗೆ ಹರಿದು ಬರುತ್ತಿರುವ ಜನಸಾಗರ : ಉತ್ತರಪ್ರದೇಶ ಬೊಕ್ಕಸಕ್ಕೆ ಹೆಚ್ಚುವರಿ 1 ಲಕ್ಷ ಕೋಟಿ ರು. ಆದಾಯ
ಮಧ್ಯಾಹ್ನದ ವಿರಾಮ ಕಡಿತ: ರಾಮಮಂದಿರದಲ್ಲಿ ನೈವೇದ್ಯದ ಬಳಿಕ ಮಧ್ಯಾಹ್ನ 2 ಗಂಟೆಗಳ ಬಿಡುವನ್ನು ಘೋಷಿಸಲಾಗಿತ್ತು. ಆದರೆ ದೇವಸ್ಥಾನದ ಬಳಿ ನೆರೆದಿರುವ ಭಕ್ತರಿಗೆ ದರ್ಶನ ಒದಗಿಸುವ ನಿಟ್ಟಿನಲ್ಲಿ ಈ ವಿರಾಮದ ಸಮಯವನ್ನು 1 ಗಂಟೆಗೆ ಕಡಿತಗೊಳಿಸಲಾಗಿದೆ.
ಸಕಲ ವ್ಯವಸ್ಥೆಗೆ ಯೋಗಿ ಕರೆ: ರಾಮನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಮುಖ್ಯವಾಗಿ ದೇವಸ್ಥಾನದ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ.
