ಚಂದಗಡ  [ಅ.25]: ಕರ್ನಾಟಕದ ಮಾಜಿ ಸಚಿವ ಹಾಗೂ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರ ಅಳಿಯ ವಿನಾಯಕ ಅಲಿಯಾಸ್‌ ಅಪ್ಪಿ ವೀರಗೌಡ ಪಾಟೀಲ್‌ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 11,012 ಮತದಿಂದ ಸೋತಿದ್ದಾರೆ. 

ಚಂದಗಡ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಪ್ಪಿ ಅವರಿಗೆ 43,839 ಮತಗಳು ಬಂದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರಾಜೇಶ ಪಾಟೀಲ್‌ ಅವರಿಗೆ 54,851 ಮತಗಳು ಬಂದವು. 

ಸಾಲ ತೀರಿಸೋಕೆ ರಮೇಶ ಬಿಜೆಪಿಗೆ: ಸತೀಶ್‌ ಆರೋಪ...

ಕಳೆದ ಚುನಾವಣೆಯಲ್ಲೂ ಅಪ್ಪಿ ವೀರಗೌಡ ಪಾಟೀಲ್‌ ಸೋಲನ್ನಪ್ಪಿದ್ದರು. ಆಗ ಅವರಿಗೆ 28847 ಮತಗಳು ಸಿಕ್ಕಿದ್ದವು. ಆದರೆ ಈ ಬಾರಿ ಮತ ಗಳಿಕೆ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.