ರಾಮನವಮಿ ಯಾತ್ರೆಯಲ್ಲಿ ಹಿಂದೂ ರಾಷ್ಟ್ರ ಹಾಡು ವೈರಲ್ ಹಾಡು ಹೇಳಿದ ಹೈದರಾಬಾದ್ ಬಿಜೆಪಿ ನಾಯಕ ಶಾಂತಿ ಕದಡುವ ಯತ್ನ ಆರೋಪಡಿ ಪ್ರಕರಣ ದಾಖಲು
ಹೈದರಾಬಾದ್(ಏ.12): ಈ ಬಾರಿ ದೇಶದಲ್ಲೆಡೆಯ ರಾಮನವಮಿ ಆಚರಣೆ ಸಂತಸ, ಸಂಭ್ರಮಕ್ಕಿಂತ ಹಿಂಸಾಚಾರ, ಆತಂಕ ವಾತಾರವಣವೇ ಹೆಚ್ಚಾಗಿತ್ತು. 8 ಹೆಚ್ಚೂ ರಾಜ್ಯಗಳಲ್ಲಿ ರಾಮನವಮಿ ಶೋಭಯಾತ್ರೆ ಮೇಲೆ ಕಲ್ಲು ತೂರಾಡಿದ ಘಟನೆ ನಡೆದಿದೆ. ಹಲೆವೆಡೆ ಹಿಂಸಾಚಾರಾ, ಕೊಲೆ ಕೂಡ ನಡೆದಿದೆ. ಇತ್ತ ಹೈದರಾಬಾದ್‌ನಲ್ಲಿನ ಮೆರವಣಿಗೆಯಲ್ಲಿ ಭಾರತ ಹಿಂದೂ ರಾಷ್ಟ್ರ ಗೀತೆ ಹಾಡಿದ ಬಿಜೆಪಿ ನಾಯಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗೋಶಮಾಲಾ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಮನವಮಿ ಮೆರವಣಿಗೆ ವೇಳೆ ಮೈಕ್ ಹಿಡಿದು ಹಾಡಿದ ರಾಜಾ ಸಿಂಗ್ ವಿರುದ್ಧ ಕೇಸ್ ದಾಖಲಾಗಿದೆ. ರಾಜಾ ಸಿಂಗ್ ತಮ್ಮ ಗೀತೆಯಲ್ಲಿ ಆಯೋಧ್ಯೆ ಬಳಿಕ ಕಾಶಿ, ಮಥುರಾ, ಬುಲ್ಡೋಜರ್ ಬಳಸಿ ಯೋಗಿ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತಾರೆ. ಜೈ ಶ್ರೀರಾಮ್ ಹೆಸರು ಹೇಳಲು ಸಾಧ್ಯವಾಗದ ಮಂದಿ ದೇಶ ಬಿಟ್ಟು ತೊಲಗುತ್ತಾರೆ ಎಂದು ತಮ್ಮ ಹಾಡಿನಲ್ಲಿ ಹೇಳಿದ್ದಾರೆ.
ಕೋಮು ಸಂಘರ್ಷಕ್ಕೆ ನಿಲ್ಲಿಸಲು ಪೊಲೀಸರಿಗೆ ಸಿಎಂ ಬೊಮ್ಮಾಯಿ ಸೂಚನೆ
ರಾಜಾ ಸಿಂಗ್ ಹಾಡು ಕೆಲ ಸಮುದಾಯಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಅಡ್ಡಿಪಡಿಸುವ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಆರೋಪದಡಿ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಮನವಮಿ ಆಚರಿಸಿದ ವಿದ್ಯಾರ್ಥಿಗಳಿಗೆ ಥಳಿತ
ರಾಮನವಮಿ ದಿನ ರಾಮಪೂಜೆ ವಿಚಾರವಾಗಿ ದೆಹಲಿಯಲ್ಲಿ ಜೆಎನ್‌ಯುನಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದರೆ, ಇಂಥಹದ್ದೇ ಸೌಹಾರ್ದ ಕದಡುವ ಘಟನೆಗೆ ಕೇಂದ್ರೀಯ ವಿವಿ ಆವರಣ ಸಾಕ್ಷಿಯಾಗಿದೆ. ರಾಮನವಮಿ ದಿನ ರಾಮನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ ಇಬ್ಬರು ವಿದ್ಯಾರ್ಥಿಗಳ ಮೇಲೆ ಮತ್ತಿಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ಇಲ್ಲಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿವಿ ಕ್ಯಾಂಪಸ್ಸಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಹಲ್ಲೆಗೊಳಗಾಗಿರುವ ನರೇಂದ್ರ ಹಾಗೂ ವಿಶ್ವನಾಥ ಇವರ ತಲೆ, ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದು ವಿವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಯೋಧ್ಯೆ ಶ್ರೀರಾಮ ವಿಗ್ರಹಕ್ಕೆ ಸೂರ್ಯಕಿರಣ ಸ್ಪರ್ಶದ ವ್ಯವಸ್ಥೆ : ಮೋದಿ ಸೂಚನೆ
ಗುಜರಾತಲ್ಲಿ ಓರ್ವ ಸಾವು:
ಅದೇ ರೀತಿಯಲ್ಲಿ ಗುಜರಾತಿನಲ್ಲೂ ಕೋಮು ಘರ್ಷಣೆ ನಡೆದಿದ್ದು, ಆನಂದ ಜಿಲ್ಲೆಯ ಖಾಂಬಟ್ ಹಾಗೂ ಸಾಬರ್‌ಕಾಂಠಾ ಜಿಲ್ಲೆಯ ಹಿಮ್ಮತ್ ನಗರದಲ್ಲಿ ರಾಮನವಮಿಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು. 2 ಗುಂಪುಗಳ ನಡುವೆ ಘರ್ಷಣೆ ನಡೆದ ಸ್ಥಳದಲ್ಲಿ ಸುಮಾರು 65 ವರ್ಷದ ವ್ಯಕ್ತಿಯೊಬ್ಬನ ಮೃತ ದೇಹ ದೊರೆತಿದೆ. ಇದೇ ವೇಳೆ ಹಲವಾರು ವಾಹನ ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಪೊಲೀಸರು ಅಶ್ರುವಾಯು ಪ್ರಯೋಗಿಸಿ ಪರಿಸ್ಥಿತಿಯನ್ನು ನಿಯಂತ್ರದಲ್ಲಿ ತಂದಿದ್ದಾರೆ.
ಜಾರ್ಖಂಡ್‌ನಲ್ಲೂ 2 ಸಮುದಾಯಗಳ ಸದಸ್ಯರ ನಡುವೆ ನಡೆದ ಜಟಾಪಟಿಯಲ್ಲಿ ಹಲವರು ಗಂಭೀರ ರೂಪದಲ್ಲಿ ಗಾಯಗೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.ರಾಮನವಮಿ ಆಚರಣೆ ವೇಳೆ ಖಾರ್ಗೋನ್‌ನಲ್ಲಿ ನಡೆದ ಗಲಭೆಯಲ್ಲಿ ಭಾಗವಹಿಸಿದ ಗಲಭೆಕೋರರ ವಿರುದ್ಧ ಮಧ್ಯಪ್ರದೇಶ ಕ್ರಮಕೈ ಗೊಂಡಿದೆ. ಗಲಭೆಯಿಂದಾಗಿ ಉಂಟಾದ ನಷ್ಟವನ್ನು ಭರ್ತಿಗೊಳಿಸುವುದಕ್ಕಾಗಿ ಸೋಮವಾರ ಗಲಭೆಕೋರರ ನಿವಾಸಗಳನ್ನೇ ಕೆಡವಿ ಹಾಕಿದೆ. ಈ ಮೂಲಕ ಭವಿಷ್ಯದಲ್ಲಿ ಗಲಭೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಕುರಿತು ಎಚ್ಚರಿಕೆಯನ್ನೂ ಮಧ್ಯಪ್ರದೇಶ ಸರ್ಕಾರ ನೀಡಿದೆ.
ಕೋಲಾರ ರಾಮನವಮಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಹಿಂದೂ ಸಂಘಟನೆಗಳು ಮಾಡುವ ಕಾರ್ಯಕ್ರಮಗಳಿಗೆ, ಹಿಂದೂ ದೇಶ ಕಟ್ಟಬೇಕೆಂದು ಆಸೆ ಪಡುವವರಿಗೆ ಯಾವಾಗಲೂ ನಮ್ಮ ಸರ್ಕಾರದ ಸಹಕಾರವಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ವೈ.ಎ ನಾರಾಯಣಸ್ವಾಮಿ ತಿಳಿಸಿದರು.
