Asianet Suvarna News Asianet Suvarna News

ಇಂದು ಅಯೋಧ್ಯೆಯಲ್ಲಿ ಏನೇನು ಕಾರ್ಯಕ್ರಮ? ಇಲ್ಲಿದೆ ವೇಳಾಪಟ್ಟಿ

ಅಯೋಧ್ಯೆ ರಾಮ ಮಂದಿರಕ್ಕೆ ಶಿಲಾನ್ಯಾಸ| ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಶಿಲಾನ್ಯಾಸ| ಇಲ್ಲಿದೆ ಕಾರ್ಯಕ್ರಮದ ವೇಳಾಪಟ್ಟಿ

Ram Mandir foundation stone laying ceremony in Ayodhya Here is the Time Table
Author
Bangalore, First Published Aug 5, 2020, 9:48 AM IST

ಅಯೋಧ್ಯೆ(ಆ.05): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಐತಿಹಾಸಿಕ ದಿನವಿದು. ಶತಮಾನದ ಕನಸಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ನಡೆಸಲಿದ್ದು, ಇಡೀ ದೇಶವೇ ಈ ಅಪರೂಪದ ಕ್ಷಣಕ್ಕಾಗಿ ಕುತೂಹಲದಿಂದ ಕಾಯುತ್ತಿದೆ. ಹೀಗಿರುವಾಗ ಇಂದು ಅಯೋಧ್ಯೆಯಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯಲಿವೆ? ಪ್ರಧಾನಿ ಮೋದಿ ಯಾವೆಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ? ಇಲ್ಲಿದೆ ವೇಳಾಪಟ್ಟಿ

ಪಂಚ ಶತಮಾನದ ಶಂಕು:ರಂಗೇರಿದ ಅಯೋಧ್ಯೆ, ಬೆಳಗಲಿದೆ 1.5 ಲಕ್ಷ ದೀಪ!

* ಬೆಳಗ್ಗೆ 9 ಗಂಟೆಗೆ ಉ ಪ್ರ ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಆಗಮನ, ಒಂದು ಗಂಟೆ ಪೂಜೆಯಲ್ಲಿ ಭಾಗಿ

* 10 ಗಂಟೆಗೆ ರಾಮ ಜನ್ಮ ಸ್ಥಳದ ಪರಿಸರ ವೀಕ್ಷಣೆ

* 10:20 ರ ತನಕ ಅಂತಿಮ ವ್ಯವಸ್ಥೆಗಳ ಪರಿಶೀಲನೆ

* 10:30 ಕ್ಕೆ ಕೆಎಸ್ ಸಾಕೇತ್ ಪಿಜಿ ಕಾಲೇಜ್ ಹೆಲಿಪ್ಯಾಡ್‌ಗೆ ಯೋಗಿ ಆಗಮನ

* ಅಯೋಧ್ಯೆ ಯಲ್ಲಿ ನಾಲ್ಕು ತಾಸು ಇರಲಿರುವ ಪ್ರಧಾನಿ

* 10:45ಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಲಿಪ್ಯಾಡ್ ಗೆ ಆಗಮನ

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿ ಹಸ್ತಾಂತರ!

* ಪ್ರಧಾನಿಯನ್ನು ಸ್ವಾಗತಿಸಲಿರುವ ಸಿಎಂ ಯೋಗಿ ಆದಿತ್ಯನಾಥ್ & ಗವರ್ನರ್ ಆನಂದಿಬೆನ್ ಪಟೇಲ್

45 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಲಿರುವ ಪ್ರಧಾನಿ ನರೇಂದ್ರ ಮೋದಿ

* 11:30ಕ್ಕೆ ಪ್ರಧಾನಿ ಮೋದಿ ಹನುಮಾನ್ ಗಡಿಗೆ ಭೇಟಿ, * 10 ನಿಮಿಷಗಳ ಕಾಲ ವಿಶೇಷ ಪೂಜೆ ಜೊತೆಗೆ ಹನುಮಾನ್ ದರ್ಶನ

* ಬಳಿಕ ರಾಮಲಲ್ಲಾ ದೇವಸ್ಥಾನಕ್ಕೆ ಭೇಟಿ, 12:10ಕ್ಕೆ  ಪೂಜೆ

* 25 ನಿಮಿಷಗಳ ಕಾಲ ನಡೆಯುವ ರಾಮ ಲಲ್ಲಾ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗಿ

* 12:30 ರಿಂದ 12:45ರೊಳಗೆ ಅಭಿಜಿನ್ ಲಗ್ನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ

* 1 ಗಂಟೆ 15 ನಿಮಿಷಗಳ ಕಾಲ ವೇದಿಕೆ ಕಾರ್ಯಕ್ರಮ

* 2:10 ಕ್ಕೆ ಹೆಲಿಪ್ಯಾಡ್ ಗೆ ವಾಪಸ್ಸಾಗಲಿರುವ ನರೇಂದ್ರ ಮೋದಿ

ಬಳಿಕ ದೆಹಲಿಗೆ ತೆರಳಲಿರುವ ಮೋದಿ

ರಾಮಮಂದಿರ ನಿರ್ಮಾಣದ ಹೆಜ್ಜೆಗುರುತುಗಳು

"

Follow Us:
Download App:
  • android
  • ios