ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಅಮೆರಿಕ, ಬ್ರಿಟನ್ ಸೇರಿ 56 ದೇಶದ 100 ಗಣ್ಯರು!
ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಸಾವಿರಾರು ಗಣ್ಯರನ್ನು ಆಹ್ವಾನಿಸಲಾಗಿದೆ. ಸಾಧು ಸಂತರು, ಸ್ವಾಮೀಜಿಗಳು, ಉದ್ಯಮಿ, ಕ್ರಿಕೆಟಿಗರು, ಸೆಲೆಬ್ರೆಟಿಗಳು, ಸರ್ಕಾರದ ಸಚಿವರು, ನಾಯಕರು ಸೇರಿದಂತೆ ಹಲವರು ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಜೊತೆಗೆ 56 ಇತರ ದೇಶಗಳ 100ಕ್ಕೂ ಹೆಚ್ಚು ಗಣ್ಯರು, ಸರ್ಕಾರದ ಪ್ರತಿನಿಧಿಗಳು ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಯೋಧ್ಯೆ(ಜ.20) ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಇಡೀ ದೇಶವೇ ದೀಪಾವಳಿ ಸಡಗರದಲ್ಲಿದೆ. ಆಯೋಧ್ಯೆಯಲ್ಲಿ 500 ವರ್ಷಗಳ ಬಳಿಕ ಶ್ರೀರಾಮ ಭವ್ಯ ರಾಮ ಮಂದಿರದಲ್ಲಿ ಪ್ರತಿಷ್ಠಾಪೆಗೊಳ್ಳುತ್ತಿದ್ದಾನೆ. ಈಗಾಗಲೇ ಬಹುತೇಕ ತಯಾರಿಗಳು ಪೂರ್ಣಗೊಂಡಿದೆ. ಪೂಜಾ ವಿಧಿವಿಧಾನಗಳು ನಡೆಯುತ್ತಿದೆ. ಪ್ರಾಣಪ್ರತಿಷ್ಠೆಗೆ ಸಾವಿರಾರು ಗಣ್ಯರನ್ನು ಆಹ್ವಾನಿಸಲಾಗಿದೆ. ಭಾರತದಿಂದ ಮಾತ್ರವಲ್ಲ, ವಿದೇಶಗಳ ಗಣ್ಯರಿಗೂ ಆಹ್ವಾನ ನೀಡಲಾಗಿದೆ. ಜನವರಿ 22ರಂದು ನಡೆಯುವ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ 56 ದೇಶದ 100 ಗಣ್ಯರು, ಸರ್ಕಾರದ ಪ್ರತಿನಿದಿಗಳು ಪಾಲ್ಗೊಳ್ಳುತ್ತಿದ್ದಾರೆ. ಇತ್ತ ಆಯೋಧ್ಯೆಯಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ.
ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಮಾರಿಷಸ್, ಸೌತ್ ಆಫ್ರಿಕಾ, ಸೌತ್ ಕೊರಿಯಾ ಸೇರಿದಂತೆ 56 ದೇಶದ ಗಣ್ಯರು ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸೌತ್ ಕೊರಿಯಾದ ಹ್ಯೋ ರಾಜವಶಂದ ಕಿಮ್ ಚಿಲು ಸೂ ಕೂಡ ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಬರೋಬ್ಬರಿ 7000 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಈ ಪೈಕಿ 3000 ವಿವಿಐಪಿ ಹಾಗೂ 4000 ಸಾಧು ಸಂತರನ್ನು ಆಹ್ವಾನಿಸಲಾಗಿದೆ. ಇದರ ಜೊತೆಗೆ ಕರಸೇವಕರು ಹಾಗೂ ಅವರ ಕುಟುಂಬವನ್ನು ಆಹ್ವಾನಿಸಲಾಗಿದೆ.
ಹುಸಿ ಜಾತ್ಯತೀತತೆಯ ಬಣ್ಣ ಬಯಲು ಮಾಡಿದ ಅಯೋಧ್ಯೆ ರಾಮಮಂದಿರ ಹೋರಾಟ: ಅಡ್ವಾಣಿ
ಪ್ರಧಾನಿ ನರೇಂದ್ರ ಮೋದಿ ರಾಮಲಲ್ಲಾ ಪ್ರಾಣ್ರತಿಷ್ಠೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಮೋದಿ ಒಂದು ದಿನ ಮುಂಚಿತವಾಗಿ ಆಯೋಧ್ಯೆಗೆ ತೆರಳಲಿದ್ದಾರೆ. ಆಯೋಧ್ಯೆ ಪೂಜಾ ಕೈಂಕರ್ಯದಲ್ಲಿ ಮೋದಿ ಪಾಲ್ಗೊಳ್ಳಲ್ಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಮುಖ ಸದಸ್ಯರು ಪ್ರಾಣಪ್ರತಿಷ್ಠೆ ವೇಳೆ ಉಪಸ್ಥಿತರಿರಲಿದ್ದಾರೆ.
ಯೋಗ ಗುರು ಬಾಬಾ ರಾಮದೇವ್, ಬಾಲಿವುಡ್ ಸೆಲೆಬ್ರೆಟಿಗಳಾದ ಅಬಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಕಂಗನಾ ರಣಾವತ್, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಉದ್ಯಮಿಗಳಾದ ಮುಕೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ ಸೇರಿದಂತೆ ಹಲವು ಗಣ್ಯರು ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಮಲಲ್ಲಾ ಫೋಟೋ ಲೀಕ್, ರಾಮಮಂದಿರ ಮುಖ್ಯ ಅರ್ಚಕರ ಆಕ್ರೋಶ!
ಗಣ್ಯರು, ವಿವಿಐಪಿ, ಸೆಲೆಬ್ರೆಟಿಗಳು, ಅಪಾರ ರಾಮ ಭಕ್ತರು ಆಯೋಧ್ಯೆಯತ್ತ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗಲ್ಲಿ ಗಲ್ಲಿಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.