Asianet Suvarna News Asianet Suvarna News

ಅಯೋಧ್ಯೆಯ ಗರ್ಭಗುಡಿಗೆ ಆಯ್ಕೆಯಾಗದ ಬಾಲರಾಮನ ಮೂರ್ತಿ ಇದು!

ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತಲು ಆಯ್ಕೆಯಾದ ಮೂವರು ಶಿಲ್ಪಿಗಳಲ್ಲಿ ಜೈಪುರದ ಸತ್ಯನಾರಾಯಣ ಪಾಂಡೆ ಕೂಡ ಒಬ್ಬರಾಗಿದ್ದರು.


 

Ram Lalla idol that was not chosen for Ayodhya Ram Mandir Pran Pratishtha ceremony san
Author
First Published Jan 22, 2024, 6:17 PM IST

ನವದೆಹಲಿ (ಜ.22): ಅಯೋಧ್ಯೆಯಲ್ಲಿ ಹೊಸ ರಾಮ ಮಂದಿರಕ್ಕಾಗಿ ರಾಮಲಲ್ಲಾನ ವಿಗ್ರಹವನ್ನು ಕೆತ್ತಲು ಸತ್ಯನಾರಾಯಣ ಪಾಂಡೆ ಆಯ್ಕೆಯಾದಾಗ, ಪಾಂಡೆ ಅವರಿಗೆ ಬಂದ ಮೊಟ್ಟ ಮೊದಲ ಆಲೋಚನೆ ಏನೆಂದರೆ, ಭಗವಂತ ಸ್ವತಃ ಹನುಮಂತನನ್ನು ಜೈಪುರದಿಂದ ಕರೆತರಲು ಸೂಚಿಸಿದ್ದಾನೆ ಎಂದು. ಹನುಮಂತನ ಭಕ್ತರಾಗಿರುವ 65 ವರ್ಷದ ಸತ್ಯನಾರಾಯಣ ಪಾಂಡೆ ಅವರ ಇಡೀ ಕುಟುಂಬ ಶಿಲ್ಪಿಗಳೇ ಆಗಿದ್ದಾರೆ. ಬಹುಶಃ ನಮ್ಮ ಕುಟುಂಬಕ್ಕೆ ಶಿಲ್ಪಕಲೆಗಳ ಸಂಬಂಧ ಯೋಚನೆ ಮಾಡುವುದಾದರೆ, 12 ಯುಗದ ಹಿಂದೆ ಹೋಗಬೇಕು. ನಾನು ಈ ಕಲೆಯನ್ನು ಕಲಿತಿದ್ದು ನನ್ನ ತಂದೆಯಿಂದ ಎಂದು ರಾಜಸ್ಥಾನದ ಜೈಪುರ ಮೂಲದ ಶಿಲ್ಪಿ ಹೇಳಿದ್ದಾರೆ.ಬಿಳಿ ಮಕ್ರಾನ ಅಮೃತಶಿಲೆಯಿಂದ ಕೆತ್ತಲಾದ ಸತ್ಯನಾರಾಯಣ್‌  ಪಾಂಡೆ ಅವರ ವಿಗ್ರಹವು ಕೊನೆಯ ಎರಡು ವಿಗ್ರಹಗಳ ಪೈಕಿ ಒಂದಾಗಿತ್ತು. ಈ ಎರಡರ ಪೈಕಿ ಒಂದು ಶಿಲೆಯನ್ನು ಆಯ್ಕೆ ಮಾಡುವ ಇರಾದೆಯಲ್ಲಿ ದೇವಸ್ಥಾನದ ಟ್ರಸ್ಟ್‌ ಇತ್ತು. ತಿಮವಾಗಿ ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮಲಲ್ಲಾ ಮೂರ್ತಿಯನ್ನು ಆಯ್ಕೆ ಮಾಡಲಾಯಿತು. ಸುಂದರವಾದ ಮಗುವಿನ ರೂಪದಲ್ಲಿ ವಿಗ್ರಹವನ್ನು ಕೆತ್ತುವುದರೊಂದಿಗೆ ಹಲವು ವಿಚಾರಗಳು ಅಲ್ಲಿತ್ತು. ಧ್ಯಾನ, ಪ್ರಾರ್ಥನೆ, ಭಾವಪೂರ್ಣ ಈ ಎಲ್ಲಾ ಅಂಶಗಳು ಆ ಮುಖದಲ್ಲಿರಬೇಕು ಎಂದು ಹೇಳಲಾಗಿತ್ತು. ಇದೆಲ್ಲವನ್ನು ರಾಮ ಐದು ವರ್ಷದ ಹುಡುಗನಾಗಿದ್ದಾಗ ಇರುವಂಥ ಮೂರ್ತಿಯಲ್ಲಿ ಕೆತ್ತಬೇಕಾಗಿತ್ತು.

ನಾನು ಭಗವಂತನ ರೂಪವನ್ನು ಮನಸ್ಸಿನಲ್ಲೇ ಧ್ಯಾನಿಸಿದೆ. ಭಗವಂತನ ಸೌಂದರ್ಯದ ಬಗ್ಗೆ ಶಾಸ್ತ್ರಗಳು ಹೇಳಿರುವುದನ್ನು ಅದರೊಂದಿಗೆ ಸೇರಿಸಿದೆ. ಸತ್ಸಂಗದಿಂದ ಸ್ಪೂರ್ತಿಯನ್ನು ಪಡೆದುಕೊಂಡಿದ್ದೆ. ಹೃದಯದ ಆಳಕ್ಕೆ ಇಳಿದು, ಭಕ್ತಿ ಭಾವದಿಂದ ನಾನು ಇದನ್ನು ಕೆತ್ತಿದೆ. ಅದರಂತೆ ಹನುಮಂತ ಹಾಗೂ ಭಗವಾನ್‌ ರಾಮನ ಮೂರ್ತಿಗಳು ಕಾಣಿಸಿದವು ಎಂದು ಪಾಂಡೆ ಹೇಳಿದ್ದಾರೆ.

ಭಕ್ತರು ತನ್ನ ನೋವುಗಳನ್ನು ತೋಡಿಕೊಳ್ಳುವಾಗ ಅದನ್ನೆಲ್ಲಾ ಶಮನಮಾಡುವ ಶಕ್ತಿ ನನಗಿದೆ ಎನ್ನುವ ಅರ್ಥದಲ್ಲಿ ನಗುತ್ತಿರುವಂತ ರಾಮನ ಮೂರ್ತಿಯನ್ನು ಪಾಂಡೆ ಕೆತ್ತಿದ್ದರು. ಭಕ್ತನು ಅದಾವುದೇ ಸಮಸ್ಯೆಗಳು ಇದ್ದರು. ವಿಗ್ರಹ ನೋಡಿದ ಬಳಿಕ ಆತನ ನೋವುಗಳೆಲ್ಲಾ ಮರೆಯಾಗಬೇಕು. ಆತನ ತೊಂದರೆಗಳನ್ನು ಕೇಳಿಸಿಕೊಂಡು ಪ್ರತಿಕ್ರಿಯೆ ಎನ್ನುವ ಅರ್ಥದಲ್ಲಿ ನಗುವಂತೆ ಕಾಣಬೇಕು ಎನ್ನುವುದು ತಮ್ಮ ಉದ್ದೇಶವಾಗಿತ್ತು ಎಂದು ಪಾಂಡೆ ಹೇಳಿದ್ದಾರೆ.

ಭಗವಾನ್‌ ರಾಮನ ಮೂರ್ತಿಯನ್ನು ಕೆತ್ತುವ ವಿಚಾರದಲ್ಲಿ ತಮಗೆ ಬಹಳ ವಿಶ್ವಾಸವಿತ್ತು ಎಂದು ಪಾಂಡೆ ಹೇಳಿದ್ದಾರೆ. ಹಾಗೇನಾದರೂ ನನ್ನ ಕೈಲಿ ಈ ಮೂರ್ತಿ ಕೆತ್ತಲು ಸಾಧ್ಯವಾಗದೇ ಇದ್ದರೆ, ಸರಯೂ ನದಿಯಲ್ಲೇ ಜಲಸಮಾಧಿಯಾಗುತ್ತೇನೆ ಎಂದು ನೃಪೇಂದ್ರ ಮಿಶ್ರಾ (ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷರು) ಅವರಿಗೆ ಹೇಳಿದ್ದೆ ಎಂದು ಪಾಂಡೆ ತಿಳಿಸಿದ್ದಾರೆ.

ಬೆಂಗಳೂರಿಂದ ಅಯೋಧ್ಯೆಗೆ ಕೇವಲ 1622 ರೂ.ಗೆ ಫ್ಲೈಟ್‌ನಲ್ಲಿ ಪ್ರಯಾಣಿಸಲು ಇಲ್ಲಿದೆ ಸೂಪರ್‌ ಆಫರ್‌!

ಮೂರ್ತಿ ಕೆತ್ತುವ ಸಮಯದಲ್ಲಿ ಏನಾದರೂ ಸಮಸ್ಯೆಗಳು ಎದುರಾದಲ್ಲಿ ನಾನು ಹನಮುಂತನನ್ನೆ ನೆನಪಿಸಿಕೊಂಡು ಕಣ್ಣೀರಿಟ್ಟು ಬೇಡಿಕೊಳ್ಳುತ್ತಿದ್ದೆ. ಇಡೀ ಮೂರ್ತಿ ಕೆತ್ತು ಪ್ರಕ್ರಿಯೆಯಲ್ಲಿ ಹನುಮಂತ ಕೂಡ ನನ್ನೊಂದಿಗೆ ಇದ್ದ ಎಂದು ಹೇಳಿದ್ದಾರೆ. ಪಾಂಡೆ ಅವರಿಗೆ ಈ ಕೆಲಸದಲ್ಲಿ ಅವರ 42 ವರ್ಷದ ಪುತ್ರ ಪ್ರಶಾಂತ್‌ ಕೂಡ ಸಹಾಯ ಮಾಡಿದ್ದಾರೆ. ತಮ್ಮ ಮೂರ್ತಿ ಆಯ್ಕೆಯಾಗದೇ ಇದ್ದಿದ್ದಕ್ಕೆ ಬೇಸರವಿದೆಯೇ ಎನ್ನುವ ಪ್ರಶ್ನೆಗೆ, ನಿಜವಾದ ಭಕ್ತನಿಗೆ ಯಾವುದೇ ನಿರಾಸೆಯಾಗೋದಿಲ್ಲ. 500 ವರ್ಷದ ಹೋರಾಟ ಅಂತ್ಯವಾಗಿದೆ ಅನ್ನೋದಷ್ಟೇ ಖುಷಿ. ಅಂದು ಅವರು ಮಾಡಿದ ತ್ಯಾಗದಿಂದ ಇದು ಸಾಧ್ಯವಾಗಿದೆ. ಈ ಮೂರ್ತಿ ಕೂಡ ಅಯೋಧ್ಯೆಯಲ್ಲಿ ಸ್ಥಾನ ಪಡೆಯಲಿದೆ ಎಂದು ಹೇಳಿದ್ದಾರೆ.

ರಾಮಲಲ್ಲಾ ಪ್ರತಿಷ್ಠಾಪನೆಗೆ ಪ್ರಥಮ್​ ಧಮಾಕಾ: ರಜೆ, ಡಬಲ್​ ಸಂಬಳ ಜೊತೆ ವಿಮಾನದಲ್ಲಿ ಅಯೋಧ್ಯೆ ದರ್ಶನ!

Latest Videos
Follow Us:
Download App:
  • android
  • ios