Asianet Suvarna News Asianet Suvarna News

ದಿಲ್ಲಿ ಬೆನ್ನಲ್ಲೇ ರಾಜಕೋಟ್‌ ಏರ್‌ಪೋರ್ಟ್‌ ಮೇಲ್ಛಾವಣಿ ಕುಸಿತ: ದೇಶದ ಎಲ್ಲಾ ಏರ್‌ಪೋರ್ಟ್‌ಗಳ ಪರಿಶೀಲನೆಗೆ ಕೇಂದ್ರ ಆದೇಶ

ಸತತ 3ನೇ ದಿನವಾದ ಶನಿವಾರ ಕೂಡ ಏರ್‌ಪೋರ್ಟ್ ದುರ್ಘಟನೆಯೊಂದು ಸಂಭವಿಸಿದೆ.  ಭಾರೀ ಮಳೆಯ ನಡುವೆ ಗುಜರಾತ್‌ನ ರಾಜಕೋಟ್‌ ವಿಮಾನ ನಿಲ್ದಾಣದ ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ಕೆನೋಪಿ ಮೇಲ್ಛಾವಣಿ ಕುಸಿದು ಬಿದ್ದಿದೆ. 

Rajkot Airport Roof Collapses Soon After Delhi Airport Central Order to Inspect All airport Stations in the Country akb
Author
First Published Jun 30, 2024, 8:48 AM IST

ರಾಜಕೋಟ್‌: ಸತತ 3ನೇ ದಿನವಾದ ಶನಿವಾರ ಕೂಡ ಏರ್‌ಪೋರ್ಟ್ ದುರ್ಘಟನೆಯೊಂದು ಸಂಭವಿಸಿದೆ. ಭಾರೀ ಮಳೆಯ ನಡುವೆ ಗುಜರಾತ್‌ನ ರಾಜಕೋಟ್‌ ವಿಮಾನ ನಿಲ್ದಾಣದ ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ಕೆನೋಪಿ ಮೇಲ್ಛಾವಣಿ ಕುಸಿದು ಬಿದ್ದಿದೆ. 
ಮಧ್ಯಪ್ರದೇಶದ ಜಬಲ್ಪುರ ಏರ್‌ಪೋರ್ಟ್ ಮೇಲ್ಛಾವಣಿ ಹಾಗೂ ನವದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಛಾವಣಿ ನಂತರದ 3ನೇ ಘಟನೆ ಇದಾಗಿದೆ. ಈ ಎರಡೂ ಘಟನೆಗಳು ಗುರುವಾರ ಹಾಗೂ ಶುಕ್ರವಾರ ಸಂಭವಿಸಿದ್ದವು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾವುದೇ ಗಾಯಗಳು ಅಥವಾ ಸಾವು ನೋವುಗಳ ವರದಿಯಾಗಿಲ್ಲ. ಘಟನೆಯ ಬೆನ್ನಲ್ಲೇ ಕೆನೋಪಿ ಮೇಲ್ಛಾವಣಿಯನ್ನು ದುರಸ್ತಿ ಮಾಡಲಾಗುತ್ತಿದೆ. ಅಲ್ಲದೆ, ಘಟನೆಯ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಏತನ್ಮಧ್ಯೆ, ನೈಋತ್ಯ ಮಾನ್ಸೂನ್ ಗುಜರಾತ್‌ನಲ್ಲಿ ಮತ್ತಷ್ಟು ಮುನ್ನಡೆಯುತ್ತಿದ್ದಂತೆ ಗುಜರಾತ್‌ನಲ್ಲಿ ಭಾರಿ ಮಳೆಯಾಗುತ್ತಿದೆ.

ಭಾರೀ ಮಳೆಗೆ ಬೃಹದಾಕಾರದ ಗುಂಡಿ ಬಿದ್ದ ಅಯೋಧ್ಯೆಯ ರಾಮಪಥ, 6 ಅಧಿಕಾರಿಗಳ ಅಮಾನತು ಮಾಡಿದ ಯೋಗಿ!

ದೇಶದ ಎಲ್ಲಾ ನಿಲ್ದಾಣ ಪರಿಶೀಲನೆಗೆ ಕೇಂದ್ರ ಆದೇಶ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಗುಜರಾತ್‌ನ ರಾಜಕೋಟ್‌ ವಿಮಾನ ನಿಲ್ದಾಣ ಛಾವಣಿ ಕುಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಎಚ್ಚೆತ್ತಿದ್ದು, ದೇಶಾದ್ಯಂತ ಇರುವ ಎಲ್ಲಾ ಸಣ್ಣ ಹಾಗೂ ದೊಡ್ಡ ವಿಮಾನ ನಿಲ್ದಾಣಗಳಿಗೆ ಕಟ್ಟಡಗಳ ವಸ್ತುಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ 2 ರಿಂದ 5 ದಿನದಲ್ಲಿ ವರದಿ ಸಲ್ಲಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿದೆ. ವಿಮಾನ ನಿಲ್ದಾಣಗಳು ಸಲ್ಲಿಸುವ ವರದಿ ಬಳಿಕ ಭದ್ರತೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ ದೆಹಲಿಯಲ್ಲಿ ವಿಮಾನ ನಿಲ್ದಾಣ ಕುಸಿತದ ಕಾರಣ ಯಾವುದೇ ವಿಮಾನಯಾನ ಕಂಪನಿಗಳು ಟಿಕೆಟ್‌ ದರದಲ್ಲಿ ಏರಿಕೆ ಮಾಡಬಾರದು ಎಂದು ಸಚಿವಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಲಕ್ಷದಲ್ಲಿ ಸ್ಯಾಲರಿ, ಗೌರವಾನ್ವಿತ ಹುದ್ದೆ ಆದ್ರೂ ಮಾಡಿದ್ದು ಮಣ್ಣು ತಿನ್ನೊ ಕೆಲಸ: ನೇವಿ ಅಧಿಕಾರಿಯ ಬಂಧನ

Latest Videos
Follow Us:
Download App:
  • android
  • ios