ಕೇಂದ್ರದ ನೂತನ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾಗಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು ಗುರುವಾರ ಅಧಿಕಾರ ಸ್ವೀಕಾರ ಕೌಶಲ್ಯಾಭಿವೃದ್ಧಿ ಸಚಿವರಾಗಿ ಶಕ್ತಿ ಮೀರಿ ಕೆಲಸ ಮಾಡುವುದಾಗಿ ತಿಳಿಸಿರುವ ಅವರು, ಯುವಕರ ಭವಿಷ್ಯಕ್ಕೆ ನೆರವಾಗುವ ರೀತಿಯಲ್ಲಿ ಕಾರ‍್ಯ ನಿರ್ವಹಿಸುವ ಭರವಸೆ 

ನವದೆಹಲಿ (ಜು.09):  ಕೇಂದ್ರದ ನೂತನ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾಗಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಕೌಶಲ್ಯಾಭಿವೃದ್ಧಿ ಸಚಿವರಾಗಿ ಶಕ್ತಿ ಮೀರಿ ಕೆಲಸ ಮಾಡುವುದಾಗಿ ತಿಳಿಸಿರುವ ಅವರು, ಯುವಕರ ಭವಿಷ್ಯಕ್ಕೆ ನೆರವಾಗುವ ರೀತಿಯಲ್ಲಿ ಕಾರ‍್ಯ ನಿರ್ವಹಿಸುವ ಭರವಸೆ ನೀಡಿದ್ದಾರೆ.

ಪ್ರಮಾಣವಚನ ಮುಗಿದ 24 ಗಂಟೆಯೊಳಗೆ ಅಧಿಕಾರ ಸ್ವೀಕರಿಸಿದ ಸಚಿವ ರಾಜೀವ್ ಚಂದ್ರಶೇಖರ್ ..

ಕೇಂದ್ರ ಸಚಿವರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದ ಅವರು ದೆಹಲಿಯ ಶ್ರಮಶಕ್ತಿ ಭವನದಲ್ಲಿರುವ ಕೌಶಲ್ಯ ಅಭಿವೃದ್ಧಿ ಸಚಿವಾಲಯದಲ್ಲಿ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನಂತರ ಮಾತನಾಡಿ, ಸಚಿವ ಸ್ಥಾನದ ಮೂಲಕ ದೇಶ ಸೇವೆ ಮಾಡಲು ಪ್ರಧಾನಿ ಮೋದಿ ಅವಕಾಶ ನೀಡಿದ್ದಾರೆ. 

ಇದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಶಕ್ತಿ ಮೀರಿ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ಕೌಶಲ್ಯ ಅಭಿವೃದ್ಧಿ ಇಲಾಖೆ ಪ್ರಧಾನಿ ಮೋದಿ ಕನಸು. ಇದು ತುಂಬಾ ಮಹತ್ವದ ಇಲಾಖೆ. ಯುವಕರ ಭವಿಷ್ಯಕ್ಕೆ ನೆರವಾಗುವ ರೀತಿ ನಾನು ಕೆಲಸ ನಿರ್ವಹಿಸುತ್ತೇನೆ. ಇಲಾಖೆಯಲ್ಲಿ ಯುವಕರಿಗೆ ಸಾಕಷ್ಟುನೆರವು ನೀಡುವ ಬಗ್ಗೆ ಚಿಂತಿಸಲಾಗುವುದು ಎಂದರು.