ವಕ್ಫ್ ಬೋರ್ಡ್ ತಿದ್ದುಪಡಿ ಕುರಿತು ರಚಿಸಿರುವ ಜೆಪಿಸಿ ಬಹಿಷ್ಕರಿಸಿದ ವಿಪಕ್ಷಗಳ ನಡೆಯನ್ನು ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದರೆ. ಇದೇ ವೇಳೆ ಬಹಿಷ್ಕಾರದ ಹಿಂದಿನ ವಿಪಕ್ಷಗಳ ಅಜೆಂಡಾ ಬಯಲು ಮಾಡಿದ್ದಾರೆ.  

ನವದೆಹಲಿ(ಅ.15): ವಕ್ಫ್ ಬೋರ್ಡ್ ಅಕ್ರಮ ತಡೆಗಟ್ಟಲು ಕೇಂದ್ರ ಸರ್ಕಾರ ಹೊಸ ಮಸೂದೆ ಮೂಲಕ ಶ್ರಮಿಸುತ್ತಿದೆ. ಆದರೆ ಕೇಂದ್ರ ತರಲು ಹೊರಟಿರುವ ವಕ್ಪ್ ಬೋರ್ಡ್ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದೆ. ವಿಪಕ್ಷಗಳ ಆಗ್ರಹದಂತೆ ವಕ್ಪ್ ಬೋರ್ಡ್ ತಿದ್ದುಪಡಿ ಮಸೂದೆ ಕುರಿತು ರಚಿಸಿರುವ ಜಂಟಿ ಸಂಸದೀಯ ಸಮಿತಿ(JPC)ಸಭೆಯನ್ನು ವಿಪಕ್ಷಗಳು ಬಹಿಷ್ಕರಿಸಿದೆ. ಇದಕ್ಕೆ ಮುಖ್ಯ ಕಾರಣ ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಅತೀ ದೊಡ್ಡ ವಕ್ಪ್ ಬೋರ್ಡ್ ಹಗರಣವನ್ನು ಬಯಲಿಗೆಳೆದ ಅನ್ವರ್ ಮಣಿಪ್ಪಾಡಿ ದಾಖಲೆಗಳನ್ನು ಕಡೆಗಣಿಸಿರು ವಿಪಕ್ಷಗಳು ಇದೀಗ ಭ್ರಷ್ಟರ ರಕ್ಷಿಸಲು ವಿಪಕ್ಷ ವಕ್ಪ್ ಬೋರ್ಡ್ ಜೆಪಿಸಿ ಸಭೆ ಬಹಿಷ್ಕರಿಸಿದೆ ಎಂದು ಕೇಂದ್ರ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ. 

ವಕ್ಫ್ ಬೋರ್ಡ್‌ನಲ್ಲಿ ರಚನೆಯಾದ ಜೆಪಿಸಿ ಸಭೆಯನ್ನು ಬಹಿಷ್ಕರಿಸಿರುವ ವಿಪಕ್ಷಗಳ ಅಜೆಂಡಾವನ್ನು ರಾಜೀವ್ ಚಂದ್ರಶೇಖರ್ ಬಹಿರಂಗಪಡಿಸಿದ್ದಾರೆ. ವಿರೋಧ ಪಕ್ಷವು ಅನ್ವರ್ ಮಣಿಪ್ಪಾಡಿ ಅವರನ್ನು ಗುರಿಯಾಗಿಸಿಕೊಂಡು ವಕ್ಫ್ ಬೋರ್ಡ್ ಜೆಪಿಸಿಯನ್ನು ವಿರೋಧಿಸುತ್ತಿದೆ ಎಂದಿದ್ದಾರೆ. ಕರ್ನಾಟಕದಲ್ಲಿ ನಡೆದ ಅತೀ ದೊಡ್ಡ ವಕ್ಫ್ ಭೂ ಹಗರಣವನ್ನು ಬಯಲಿಗೆಳೆದ ವ್ಯಕ್ತಿ ಅನ್ವರ್ ಮಣಿಪ್ಪಾಡಿ, ಕೆಲ ನಾಯಕರ ಭೂ ಹಗರಣವನ್ನು ಮಣಿಪ್ಪಾಡಿ ಬಯಲಿಗೆಳೆದಿದ್ದಾರೆ. ಆದರೆ ಭ್ರಷ್ಟರ ರಕ್ಷಣೆಗಾಗಿ ವಿಪಕ್ಷಗಳು ಇದೀಗ ಜೆಪಿಸಿ ಸಭೆ ಬಹಿಷ್ಕರಿಸಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Scroll to load tweet…

ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ರಾಜೀವ್ ಚಂದ್ರಶೇಖರ್, ರಾಜಕಾರಣಿಗಳು ವಕ್ಪ್ ಅಕ್ರಮದಲ್ಲಿ ಹೇಗೆ ಲಾಭ ಪಡದಿದ್ದಾರೆ ಅನ್ನೋದು ಮಣಿಪ್ಪಾಡ್ ಬಯಲಿಗೆಳೆದಿದ್ದಾರೆ. ಇದೇ ಕಾರಣದಿಂದ ಮಣಿಪ್ಪಾಡಿ ಅವರ ದಾಖಲೆ, ವರದಿಯನ್ನು ವಿಪಕ್ಷಗಳು ಕಡೆಗಣಿಸುತ್ತಿದೆ. ವಕ್ಫ್ ಮಂಡಳಿಗಳಲ್ಲಿ ಪಾರದರ್ಶಕತೆಯ ಕೊರತೆ, ಭ್ರಷ್ಟಾಚಾರ ಮತ್ತು ಬಡ ಮುಸ್ಲಿಮರನ್ನು ರಕ್ಷಣೆಗೆ ಮಾಡಬೇಕಾದ ಅಗತ್ಯ ಕ್ರಮಗಳ ಕುರಿತು ಅನ್ವರ್ ಮಣಿಪ್ಪಾಡಿ ಸೂಚಿಸಿದ್ದಾರೆ. ಮಣಿಪ್ಪಾಡಿ ಅವರ ವರದಿ ಅತ್ಯಂತ ಮುಖ್ಯವಾಗಿದೆ ಎಂದಿದ್ದಾರೆ. ವಕ್ಫ್ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ.

ಜೆಪಿಸಿ ಬಹಿಷ್ಕರಿಸಿದ್ದೇಕೆ?

ಕೇಂದ್ರ ಸರ್ಕಾರವು ವಕ್ಫ್ ಮಂಡಳಿ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ. ವಿರೋಧ ಪಕ್ಷದ ವಿರೋಧದ ನಂತರ ಈ ವಕ್ಫ್ ಮಂಡಳಿ ಮಸೂದೆಗಾಗಿ ಜೆಪಿಸಿ ರಚಿಸಲಾಯಿತು. ಆದರೆ ಇದೀಗ ವಿರೋಧ ಪಕ್ಷ ಜೆಪಿಸಿ ಸಭೆಯನ್ನು ಬಹಿಷ್ಕರಿಸಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಮತ್ತು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅನ್ವರ್ ಮಣಿಪ್ಪಾಡಿ ಅವರ ಪ್ರಸ್ತುತಿಯನ್ನು ಮಾತ್ರ ತೆಗೆದುಕೊಳ್ಳಲಾಗಿದೆ, ಈ ಪ್ರಸ್ತುತಿ ಕೇವಲ ವಕ್ಫ್ ಮಸೂದೆಯ ಬಗ್ಗೆ ಅಲ್ಲ ಎಂದು ವಿರೋಧ ಪಕ್ಷದ ಸದಸ್ಯರು ಆರೋಪಿಸಿದ್ದಾರೆ. ಅನ್ವರ್ ಕರ್ನಾಟಕ ಸರ್ಕಾರ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ, ಇದು ಸಮಿತಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಸ್ವೀಕಾರಾರ್ಹವಲ್ಲ ಎಂದು ಅವರು ಆರೋಪಿಸಿದ್ದಾರೆ.